ಫ್ಯಾಕ್ಟ್‌ಚೆಕ್ : ಸರಸ್ವತಿ ಪೂಜೆಗಿಲ್ಲದ ಅನುಮತಿ, ಇಫ್ತಾರ್‌ ಗೆ ನೀಡಿದರೆ?

ಪಶ್ಚಿಮ ಬಂಗಾಳದ BJP ಬೆಂಬಲಿತ ಸಾಮಾಜಿಕ ಮಾಧ್ಯಮ ಬಳಕೆದಾರರು ಇಫ್ತಾರ್‌ಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್‌ನ ಪ್ರಕಾರ ಕೋಲ್ಕತ್ತಾದ ಪ್ರೆಸಿಡೆನ್ಸಿ ಯುನಿವರ್ಸಿಟಿ ಆವರಣದಲ್ಲಿ ಸರಸ್ವತಿ ಪೂಜೆಗೆ ಅನುಮತಿ ನಿರಾಕರಿಸುತ್ತಾರೆ ಆದರೆ ಅದೇ ಜಾಗದಲ್ಲಿ ಇಫ್ತಾರ್ ಗೆ ಅನುಮತಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದ ಕೆಲವು ಬಿಜೆಪಿ ಮುಖಂಡರು ಈ ಕುರಿತಂತೆ ಟ್ವೀಟ್‌ನಲ್ಲಿ ಆಪಾದಿಸಿದ್ದು, ವಿಶ್ವವಿದ್ಯಾಲಯವು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ. ಇಫ್ತಾರ್ ಕೂಟಕ್ಕೆ ಸಂಬಂಧಿಸಿದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.  ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಫೋಟೊಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದ್ದು, ಈಡನ್ ಹಿಂದೂ ಹಾಸ್ಟೆಲ್‌ನಲ್ಲಿ ಇಫ್ತಾರ್ ಆಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ ಇರ್ಫಾನ್ ಸಾದಿಕ್ ಅಲಿಯಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಎಂದು BOOM ಕಂಡುಹಿಡಿದಿದೆ. ಸಾದಿಕ್ ಅವರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಏಪ್ರಿಲ್ 5, 2023 ರಂದು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊಗಳ ಪ್ರಕಾರ ಹಾಸ್ಟೆಲ್‌ನ ಮೈದಾನದಲ್ಲಿ ಆಯೋಜಿಸಿದ್ದ ಇಫ್ತಾರ್‌ನಲ್ಲಿ ಪ್ರೆಸಿಡೆನ್ಸಿಯ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್‌ನ ಸಿಬ್ಬಂದಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಸಾದಿಕ್ ಬೂಮ್‌ಗೆ ದೃಢಪಡಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಸಮೀಪದ ಈಡನ್ ಹಿಂದೂ ಹಾಸ್ಟೆಲ್‌ನಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತೇ ವಿನಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಲ್ಲ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಜಾತ್ಯತೀತ ನಿಲುವಿನ ಕಾರಣ ನೀಡಿ, ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ಪೂಜೆ ನಡೆಸಲು ಆಡಳಿತ ಅನುಮತಿ ನೀಡಿರಲಿಲ್ಲ. ಹಾಗೆಯೇ ಇಫ್ತಾರ್ ಕೂಟವೂ ಆವರಣದಲ್ಲಿ ನಡೆದಿಲ್ಲ.

 

ಇದೇ ಹಾಸ್ಟೆಲ್‌ನಲ್ಲಿ ಪ್ರತೀ ವರ್ಷ ಸರಸ್ವತಿ ಪೂಜೆ ಹಾಗೂ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ವಿಶ್ವವಿದ್ಯಾಲಯ ಆವರಣದಲ್ಲಿ ಇಫ್ತಾರ್ ಕೂಟಕ್ಕೆ ಅನುಮತಿ ನೀಡಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವವಿದ್ಯಾಲಯದ ಆವರಣದಲ್ಲಿ ಇಫ್ತಾರ್‌ಗೆ ಅನುಮತಿ ನೀಡುತ್ತಾರೆ, ಆದರೆ ಸರಸ್ವತಿ ಪೂಜೆಗೆ ಅನುಮತಿ ನಿರಾಕರಿಸುತ್ತಾರೆ ಎಂದು ಆಫಾದಿಸಿ ಕೋಮು ದ್ವೇಷದ ಹಿನ್ನಲೆಯನ್ನು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಆದರೆ ಇದೆಲ್ಲ ಸುಳ್ಳು ಎಂದು ಇಂಡಿಯಾ ಟುಡೇ ಮತ್ತು ಬೂಮ್ ವರದಿ ಮಾಡಿದೆ.

ಕೃಪೆ: ಬೂಮ್ ಮತ್ತು ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights