ಫ್ಯಾಕ್ಟ್‌ಚೆಕ್ : ರಾಜೀವ್ ಮತ್ತು ಸೋನಿಯಾ ಗಾಂಧಿ ಮದುವೆಯ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೆ

ಮದುವೆ ಎಂಬುದೇ ಖಾಸಗಿ ವಿಚಾರ. ಅದರಲ್ಲೂ ರಾಜೀವ್ ಗಾಮಧಿ ಮತ್ತು ಸೋನಿಯಾರವರ ವದುವೆ ಆಗಿ 55 ವರ್ಷ ಆಗಿದ್ದರು ಇಂದಿಗೂ ಅವರ ಮದುವೆ ಬಗ್ಗೆ  ಬೇರೆ ಬೇರೆಯಾದ ಚರ್ಚೆಗಳು, ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ಅವರ ಮದುವೆಯ ವಾಸ್ತವ ಸಂಗತಿಗಳೇನು, ಯಾವ ಸಂಪ್ರದಾದಂತೆ ಮದುವೆ ನಡೆಯಿತು ಎಂಬುದನ್ನು ಈ ವರದಿ ಮೂಲಕ ತಿಳಿಸಲಾಗಿದೆ.

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮದುವೆ ಕುರಿತಾದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೊದಲ್ಲಿ ರಾಜೀವ್ ಮತ್ತು ಸೋನಿಯಾ ಇಬ್ಬರು ಮುಸ್ಲಿಂ ಸಮುದಾಯದವರು ತೊಡುವ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು.

‘ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ. ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್‌ ಗಾಜಿಯ ಕುಟುಂಬವಾಗಿದೆ. ಈ ಫೋಟೊವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಹೇಳಿರುವಂತೆ ರಾಜೀವ್ ಮತ್ತು ಸೋನಿಯಾ ಗಾಂಧಿ ಮದುವೆ ಮುಸ್ಲಿಂ ಪದ್ದತಿಯ ನಿಖಾದಂತೆ ಮಾಡಲಾಗಿತ್ತೆ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ರಾಜೀವ್ ಗಾಂಧಿ ಮತ್ತು ಸೋನಿಯಾ ಮದುವೆಯನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಹಿಂದೂ ಸಂಪ್ರದಾಯದಂತೆ 1968ರ ಫೆ.25ರಂದು ಮದುವೆ ಆಗಿದ್ದಾರೆ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಸೇರಿದಂತೆ ಹಲವು ಪತ್ರಿಕೆಗಳು  ಫೋಟೊ ಸಹಿತ ವರದಿ ಪ್ರಕಟಿಸಿವೆ.

ಮತ್ತಷ್ಟು ಮಾಹಿತಿಗಾಗಿ ‘X’ ನಲ್ಲಿ ಟ್ವೀಟ್‌ಗಳನ್ನು ಸರ್ಚ್ ಮಾಡಿದಾಗ 1968ರಲ್ಲಿ ರಾಜೀವ್ ಮತ್ತು ಸೋನಿಯಾ ಗಾಂಧಿ  ಮದುವೆಯ ದೃಶ್ಯಗಳನ್ನು ಹಂಚಕೊಳ್ಳಲಾದ ಟ್ವೀಟ್ ಲಭ್ಯವಾಯಿತು. ವರನಿಗೆ ಆರತಿ ಮೂಲಕ ಸ್ವಾಗತಿಸಿ ವಧು ವರರು ಹಾರಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯಗಳನ್ನು ಕಾಣಬಹುದು.

 

 

Sonia Gandhi: Family, Career, Profession and Achievements

‘ಬ್ರಿಟಿಷ್ ಮೂವಿಟೋನ್’ ಹೆಸರಿನ ಅಸೋಸಿಯೇಟ್ ಪ್ರೆಸ್ ಯೂಟ್ಯೂಬ್ ಚಾನೆಲ್‌ನ ಲೋಗೋ ಜೊತೆಗೆ ಅಪ್‌ಲೋಡ್ ಮಾಡಲಾದ ಅದೇ ವಿಡಿಯೊ ಲಭ್ಯವಾಗಿದ್ದು, ವೀಡಿಯೊವನ್ನು 21 ಜಸ್ಟ್ 2015 ರಂದು ಅಪ್‌ಲೋಡ್ ಮಾಡಲಾಗಿದೆ.

ರಾಜೀವ್ ಮತ್ತು ಸೋನಿಯಾ ಮದುವೆ ಹಿಂದೂ ಸಂಪ್ರದಾಯದಂತೆ ಜರುಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಹಾಗಿದ್ದರೆ ಮುಸ್ಲಿಂ ವೇಷದಲ್ಲಿರುವ ಫೋಟೊ ಎಲ್ಲಿಯದ್ದು?

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊದಲ್ಲಿ ಮುಸ್ಲಿಂ ವೇಷದಲ್ಲಿ ರಾಜೀವ್ ಮತ್ತು ಸೋನಿಯಾ ಗಾಂಧಿ ಕಾಣಿಸಿಕೊಂಡಿರುವ ಬಗ್ಗೆ ಸರ್ಚ್ ಮಾಡಿದಾಗ,  ಮದುವೆ ಸಮಾರಂಭದ ನಂತರ ನವ ಜೋಡಿಯ ಫ್ಯಾನ್ಸಿ ಡ್ರೆಸ್ ಆಯೋಜಿಸಲಾಗಿತ್ತು ಆಗ ಈ ಫೋಟೊವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಕಾಗಿದೆ.

ಈ ಚಿತ್ರದಲ್ಲಿ ಇರುವುದು ರಾಜೀವ್‌ ಹಾಗೂ ಸೋನಿಯಾ ಗಾಂಧಿ ಅವರೇ ಆಗಿದ್ದಾರೆ. ಮದುವೆಯ ನಂತರ ಫ್ಯಾನ್ಸಿಡ್ರೆಸ್‌ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆ ವೇಳೆ ಈ ಇಬ್ಬರೂ, ಮುಸ್ಲಿಂ ಸಮುದಾಯದವರು ತೊಡುವ ವೇಷ ಧರಿಸಿದ್ದರು. ಇದೇ ಸಂದರ್ಭದ ಮತ್ತೊಂದು ಫೋಟೊ ‘ಇಂಡಿಯನ್‌ ಕಲ್ಚರ್‌’ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದು ಫ್ಯಾನ್ಸಿಡ್ರೆಸ್‌ ಪಾರ್ಟಿಯ ಫೋಟೊ ಎಂದು ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ.

ನೆಹರು ಕುಟುಂಬವನ್ನು ಕುರಿತು ಬಲಪಂಥೀಯ ಮತ್ತು BJP ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಒಂದಲ್ಲ ಒಂದು ಸುಳ್ಳು ಸುದ್ದಿಯನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ ಅದರಲ್ಲಿ ಇದೂ ಕೂಡ ಒಂದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮದುವೆ ಆಗಿ 55 ವರ್ಷ ಕಳೆದರೂ ಇವರು ಹಿಂದೂ ವಿರೋಧಿಗಳು ಮುಸ್ಲಿಂ ಸಂಪ್ರದಾಯದಂತೆ ನಿಖಾ ಆಗಿದ್ದಾರೆ ಎಂದು ಬಲಪಂಥೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪೋಸ್ಟ್‌ಅನ್ನು ಹಾಕುತ್ತಿದ್ದಾರೆ ಎಂದರೆ ನೆಹರು ಕುಟುಂಬದ ಬಗ್ಗೆ ಇನ್ನೆಷ್ಟು ಅಸಹನೆ ಮತ್ತು ದ್ವೇಷ ಹೊಂದಿದ್ದಾರೆ ಎಂದು ತಿಳಿಯುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜೀವ್ ಗಾಂಧಿ ಮತ್ತು ಸೋನಿಯಾ ಮದುವೆ ನಂತರದಲ್ಲಿ ನಡೆದ ಫ್ಯಾನ್ಸಿಡ್ರೆಸ್‌ ಇವೆಂಟ್‌  “ಇಂಡಿಯನ್‌ ಕಲ್ಚರ್” ನಲ್ಲಿ ಮುಸ್ಲಿಂ ಧರಿಸುಗಳನ್ನು ತೊಟ್ಟು ಫೋಟೊಗೆ ಫೋಸ್ ನೀಡಿದ ಚಿತ್ರವನ್ನು ಬಳಸಿಕೊಂಡು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಿಖಾ ಆಗಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದರೆ ರಾಜೀವ್ ಗಾಂಧಿ ಮತ್ತು ಸೋನಿಯಾ ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಹೆಸರಿನಲ್ಲಿ ಇದೆಯಂತೆ ಏಷ್ಯಾದ ಅತೀ ದೊಡ್ಡ ಐಷಾರಾಮಿ ಪಬ್‌ !


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights