ಫ್ಯಾಕ್ಟ್‌ಚೆಕ್ : ಸಮೀಕ್ಷೆ ನಡೆಸುವ ನೆಪದಲ್ಲಿ ನಿಮ್ಮ ಮನೆಗೆ ಬರಲಿದೆಯಂತೆ ಹಂತಕರ ಗುಂಪು? Be Alert

ದರೋಡೆಕೋರರ ಗುಂಪೊಂದು ಜನಗಣತಿಯ ನೆಪದಲ್ಲಿ ಅಥವಾ ಆಯುಷ್ಮಾನ್ ಸರ್ಕಾರಿ ಯೋಜನೆ ಭಾಗವಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ಗೃಹ ಸಚಿವಾಲಯದ ಸ್ಟಾಂಪ್ ಮತ್ತು ಲೆಟರ್ ಹೆಡ್ ಅನ್ನು ಹೊಂದಿದ್ದು, ಗುರುತಿನ ಚೀಟಿಗಳು ಸಹ ಇವೆ. ಇದು ಇತ್ತೀಚಿನ ದರೋಡೆಯ ತಂತ್ರಜ್ಞಾನ.

ಅವರಿಗೆ ಯಾವುದೇ ಮಾಹಿತಿಯನ್ನು ನೀಡಬೇಡಿ ಅಥವಾ ಹಂಚಿಕೊಳ್ಳಬೇಡಿ. ನಿಮ್ಮ ಮನೆ ಮತ್ತು ಸಮುದಾಯದಲ್ಲಿರುವ ಕುಟುಂಬದ ಸದಸ್ಯರು ಮತ್ತು ಹಿರಿಯರು ಗುರುತಿನ ಚೀಟಿಗಳನ್ನು ತೋರಿಸಿದರೂ ಸಹ ನಿಮ್ಮ ಮನೆಗೆ ಪ್ರವೇಶಿಸಲು ಬಿಡಬೇಡಿ. ದಯವಿಟ್ಟು ಈ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ. ಈ ಮಾಹಿತಿಯನ್ನು ಪೋಲಿಸ್ ಕಮಿಷನರ್‌ನವರು ಅಧಿಕೃತವಾಗಿ ನೀಡಿದ್ದಾರೆ. ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೊಲೀಸ್‌ ಕಮಿಷನರ್‌ನವರು ಅಧಿಕೃತವಾಗಿ ನೀಡಿದ್ದಾರೆ ಎನ್ನಲಾದ ಎಚ್ಚರಿಕೆ ಸಂದೇಶವಿರುವ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ಇದು ಹಲವಾರು ವರ್ಷಗಳಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಿದಾಡುತ್ತಿರುವ ಸುಳ್ಳು ಸುದ್ಧಿಯಾಗಿದೆ. ಆದರೆ ಈ ದರೋಡೆಗೆ ಒಳಗಾದ ಬಗ್ಗೆ ಭಾರತದಿಂದ ಯಾವುದೇ ವರದಿಗಳು ಕಂಡುಬಂದಿಲ್ಲ. ಅದರ ವಿರುದ್ಧ ಯಾವುದೇ ಸರ್ಕಾರಿ ಸಲಹೆ ಅಥವಾ ಎಚ್ಚರಿಕೆ ಕಂಡುಬಂದಿಲ್ಲ. ಆದ್ದರಿಂದ ಇದು ಹಲವಾರು ವರ್ಷಗಳಿಂದ ಹರಿದಾಡುತ್ತಿರುವ ಸುಳ್ಳು ಸುದ್ದಿಯಾಗಿದೆ.

ಫ್ಯಾಕ್ಟ್‌ಚೆಕ್ : ಸೂಜಿಯಲ್ಲಿ ಚುಚ್ಚಿ ಮಾರಕ ರೋಗಗಳನ್ನು ಹರಡುವ ಜಾಲ ಹುಟ್ಟಿಕೊಂಡಿದೆಯೇ? ಈ ಸ್ಟೋರಿ ಓದಿ

ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಅನೇಕ ಸುದ್ದಿಗಳು ಆಗ್ಗಾಗ್ಗೆ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡುತ್ತವೆ? ಆದರೆ ವಾಸ್ತವವಾಗಿ ಇವುಗಳಿಗೆ ಯಾವುದೇ ಆಧಿಕೃತತೆ ಇರುವುದಿಲ್ಲ. ಜನರಲ್ಲಿ ಭಯ ಹುಟ್ಟಿಸುವ ದುರುದ್ದೇಶದಂದ ಇಂತಹ ಸುಳ್ಳು ಮತ್ತು ಅನಾಮಧೇಯ ಸಂದೇಶಗಳನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುಳ್ಳು ಸಂದೇಶಗಳ ಬಗ್ಗೆ ಎಚ್ಚರಿಕೆ ಇರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಭಾರತದ ಸ್ನೇಹಕ್ಕೆ, 8 ಜನರ ಮರಣದಂಡನೆಯನ್ನು ಕತಾರ್ ರದ್ದು ಪಡಿಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights