ಫ್ಯಾಕ್ಟ್‌ಚೆಕ್ : ಮುಸ್ಲಿಮರ ಓಲೈಕೆಗಾಗಿ ಇಂದಿರಾ ಗಾಂಧಿ ಹಿಜಾಬ್ ಧರಿಸಿದ್ದಾರೆ ಎಂಬ ಸುಳ್ಳು ಪೋಸ್ಟ್ ಹಂಚಿಕೊಂಡ ಬಲಪಂಥೀಯರು
ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಸೊಸೆ ಸೋನಿಯಾ ಗಾಂಧಿ ಪುಟಾಣಿ ರಾಹುಲ್ ಗಾಂಧಿ ಯನ್ನು ಎತ್ತಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಜಿ ಪ್ರಧಾನಿ ಬುರ್ಖಾ ಮತ್ತು ಹಿಜಾಬ್ ಧರಿಸಿ ಫೋಟೊಗೆ ಪೋಸ್ ನೀಡಿದ್ದಾರೆ ಎಂಬ ಹೇಳಿಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಬುರ್ಖಾ, ಹಿಜಾಬ್‌ನಲ್ಲಿ ಇಂದಿರಾ ಗಾಂಧಿ ಮತ್ತು ಮುಸಲ್ಮಾನರ ಕ್ಯಾಪ್ ಧರಿಸಿರುವ ರಾಹುಲ್ ಗಾಂಧಿ ಅವರು ಇಡೀ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಲವಾರು ಫೇಸ್‌ಬುಕ್ ಬಳಕೆದಾರರು ಇಂದಿರಾ ಗಾಂಧಿಯನ್ನು ‘ಇಂದಿರಾ ಖಾನ್’ ಮತ್ತು ರಾಹುಲ್ ಗಾಂಧಿಯನ್ನು ‘ರಾಹುಲ್ ಖಾನ್’ ಎಂದು ಕರೆಯುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕೆಲವು BJP ಬೆಂಬಲಿತ ಫೆಸ್‌ಬುಕ್ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಫೋಟೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕಾಂಗ್ರೆಸ್ ಸದಾ ಮುಸ್ಲಿಂ ಓಲೈಕೆಯಲ್ಲಿ ನಿರತವಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಫೋಟೋದ ಹಿನ್ನಲೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2020 ರ ಮುಂಬೈ ಮಿರರ್ ಫೋಟೋ ಸ್ಟೋರಿಯಲ್ಲಿ ಅದೇ ಚಿತ್ರವನ್ನು ಪ್ರಕಟಿಸಲಾಗಿದೆ. ಫೋಟೋವನ್ನು ಡಿ ಕುಮಾರ್ ಮತ್ತು BCCL (ಬೆನೆಟ್, ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್) ಟೈಮ್ಸ್ ಆಫ್ ಇಂಡಿಯಾ ಗುಂಪಿನ ಮೂಲ ಕಂಪನಿಗೆ ಕ್ರೆಡಿಟ್ ನೀಡಲಾಗಿದೆ.
“ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಮೊಮ್ಮಗ ಪುಟಾಣಿ ರಾಹುಲ್ ಜೊತೆಗೆ ಅವರ ತಾಯಿ ಸೋನಿಯಾ ಗಾಂಧಿಯವರು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ, ಮೇ 09 ರಂದು 1971.” ಎಂಬ ಶೀರ್ಷಿಕೆಯೊಂದಿಗೆ ಫೋಟೊವನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಇಂದಿರಾಗಾಂಧಿ ಸೀರೆಯನ್ನು ಧರಿಸಿರುವುದನ್ನು ನೋಡಬಹುದು, ಅದರ ನೆರಿಗೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರ ತಲೆಯ ಮೇಲಿನ ಬಟ್ಟೆಯ ಮಾದರಿಯು ಸೀರೆಯ ಸೆರಗನ್ನು ತಲೆಗೆ ಸುತ್ತಿಕೊಂಡಿರುವುದು ಸ್ಪಷ್ಟವಾಗಿದೆ ಮತ್ತು ಅದು ಸೀರೆಗೆ ಹೊಂದಿಕೆಯಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಂದಿರಾ ಗಾಂಧಿ ಅವರು ಹಿಜಾಬ್ ಅಥವಾ ಬುರ್ಖಾವನ್ನು ಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಪುಟಾಣಿ ರಾಹುಲ್ ಗಾಂಧಿ ಧರಿಸಿರುವ ಕ್ಯಾಪಿನ ಫೋಟೋಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ವೈರಲ್ ಆಗಿರುವ ಚಿತ್ರದಲ್ಲಿ ರಾಹುಲ್ ಗಾಂಧಿ ಧರಿಸಿರುವ ಕ್ಯಾಪ್ ಮಾದರಿಯನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಇದಾವುದು ಮುಸ್ಲಿಂ ಓಲೈಕೆಗಾಗಿ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಆಧಾರವೂ ಇಲ್ಲ. ಇಂತಹ ಆಧಾರ ರಹಿತ ಪ್ರತಿಪಾದನೆಯನ್ನು BJP ಮಾಡುತ್ತಿರುವುದು ಇದು ಮೊದಲೇನಲ್ಲ, ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಬಟ್ಟೆ ಮತ್ತು ಬಣ್ಣಗಳ ಮೂಲಕ ಧರ್ಮ ಮತ್ತು ಜಾತಿಗಳನ್ನು ಗುರುತಿಸುವುದನ್ನು ಭಾರತೀಯ ಸಮಾಜಕ್ಕೆ ಬಲಪಂಥೀಯರು(ಸಂಘ ಪರಿವಾರ) ನೀಡಿದ ಕೊಡುಗೆ ಇರಬೇಕು. ಇಂತಹ ಸುಳ್ಳು ಕೋಮು ದ್ವೇಷವನ್ನು ಬಿತ್ತುವ ಮೂಲಕ ರಾಜಕೀಯವಾಗಿ ಜನರನ್ನು ದಾರಿತಪ್ಪಿಸುವವರ ಹುನ್ನಾರದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ