FACT CHECK | ಕರ್ನಾಟಕ ಬಜೆಟ್‌ನ ಮುಖ್ಯಾಂಶಗಳ ಪೋಸ್ಟ್‌ರ್‌ನಲ್ಲಿ ಮಹಾರಾಷ್ಟ್ರದ ವಾಹನ ಪರವಾನಗಿ (DL) ಚಿತ್ರ ಹಾಕಿದೆಯೇ ಕರ್ನಾಟಕ ಸರ್ಕಾರ?

ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. 15 ಬಾರಿ ಬಜೆಟ್ ಮಂಡಿಸಿ ವಿಶೇಷ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ 3, 71, 383 ಕೋಟಿ ರೂಪಾಯಿ ಗಾತ್ರದ ಬಜೆಟ್‌ ಮಂಡಿಸಿದ್ದಾರೆ. ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಸಾರಿಗೆ ಇಲಾಖೆಗೆ ಡಿಜಿಟಲ್ ಸ್ಪರ್ಷ ನೀಡಲು ಉದ್ದೇಷಿಸಿದ್ದಾರೆ.

1 ವ್ಯಕ್ತಿ ಮತ್ತು ಪಠ್ಯ '3E DD-MM-YY ಬಜ ಅಭಿವೃದ್ಧಿ NAMO ಸಾರಿಗೆಯಲ್ಲಿ KARUNADU ಡಿಜಿಟಲೀಕರಣ ಪರ್ವ 36 ಕೋಟಿ ರೂ. ವೆಚ್ಚದಲ್ಲಿ ಆರು ಸ್ಲಯಂ ಚಾಲಿತ ಚಾಲನಾ ಪರೀಕ್ಷಾ ಪಥ ಕರ್ನಾ ಟಕದ ನವ ನಿರ್ಮಾ ಣಕ್ಕೆ ಗ್ಯಾರಂಟಿ ಸರ್ಕಾರ ಸ್ಥಳಗಳಲ್ಲಿ ಅರ್ಹ ಪತ್ರ ನದೀಕರಣಕೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಅಭಿವೃದ್ಧಿ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವಎಲ್ಲಾ ಡಿಜಿಟಲೀಕರಣ @Siddaramaah.official @Siddaramaiah siddaramaiah_official ಬಜೆಟ್ ಕರ್ನಾಟಕದ್ದು, ವಾಹನ ಪರವಾನಗಿ ಮಹಾರಾಷ್ಟ್ರದ್ದು ಈ ರೀತಿಯ ನೂತನ ವ್ಯವಸ್ಥೆ ಕಲ್ಪಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಪ್ರಕಟಣೆ: ಕಾಂಗ್ರೆಸ್ ರಕ್ಷಣಾ ವೇದಿಕೆ MKNAD' ಹೇಳುತ್ತಿದೆ ನ ಗ್ರಾಫಿಕ್ಸ್ ಆಗಿರಬಹುದು

ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆಂದು ರಚಿಸಲಾಗಿರುವ ಸಾರಿಗೆ ಇಲಾಖೆಯ ಬಜೆಟ್‌ ಪೋಸ್ಟ್‌ರ್‌ನಲ್ಲಿ  ಮಹಾರಾಷ್ಟ್ರದ ವಾಹನ ಪರವಾನಗಿ ಚಿತ್ರವನ್ನು ಹಾಕಲಾಗಿದೆ ಎಂದು ಪ್ರತಿಪಾದಿಸಿ namo Karunadu ಪೋಸ್ಟ್‌ಅನ್ನು ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ರ್‌ನಲ್ಲಿ “ಬಜೆಟ್ ಕರ್ನಾಟಕದ್ದು, ವಾಹನ ಪರವಾನಗಿ ಮಹಾರಾಷ್ಟ್ರದ್ದು, ಈ ರೀತಿಯ ನೂತನ ವ್ಯವಸ್ಥೆ ಕಲ್ಪಿಸಿದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಕಾಂಗ್ರೆಸ್‌ ಸರ್ಕಾರಕ್ಕೆ ಅಭಿನಂದನೆಗಳು” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ನಿಜವಾಗಿಯೂ ಮಹಾರಾಷ್ಟ್ರದ ಪರವಾನಗಿಯನ್ನು ಕರ್ನಾಟಕದ ಬಜೆಟ್‌ ಪೋಸ್ಟ್‌ರನಲ್ಲಿ ಹಾಕಲಾಗಿದೆಯೇ ಎಂದು  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, ಕರ್ನಾಟಕದ ಸಾರಿಗೆ ಇಲಾಖೆಗೆ ಸಂಬಂಧಿಸಿದ ಪೋಸ್ಟ್‌ರ್‌ನಲ್ಲಿ ಮಹಾರಾಷ್ಟ್ರದ ವಾಹನ ಪರವಾನಗಿ ಚಿತ್ರವನ್ನು ಹಾಕಲಾಗಿದೆಯೇ ಎಂದು ಪರಿಶೀಲಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಫೇಸ್‌ ಬುಕ್‌ಪೇಜ್‌ಅನ್ನು ಪರಿಶೀಲಿಸಿದಾಗ, ಬಜೆಟ್‌ ನಲ್ಲಿ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿರುವ ವೆಚ್ಚ ಮತ್ತು ಯೋಜನೆಯ ಮುಖ್ಯಾಂಶಗಳನ್ನೊಳಗೊಂಡ ಪೋಸ್ಟ್‌ರ್‌ಗಳನ್ನು Chief Minister of Karnatake ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ.

ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ನವನಿರ್ಮಾಣದ ಗ್ಯಾರಂಟಿ ಬಜೆಟನ್ನು ರಾಜ್ಯದ ಸಮಸ್ತ ಜನರಿಗೆ ಅರ್ಪಿಸುತ್ತಿದ್ದೇವೆ. ಜನಸ್ನೇಹಿ ಸಾರಿಗೆ ಸೌಲಭ್ಯ ನಮ್ಮ ಸರ್ಕಾರದ ಆದ್ಯತೆ. ಎಂಬ ನುಡಿಗಳೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

1 ವ್ಯಕ್ತಿ ಮತ್ತು ಪಠ್ಯ 'ಕರ್ನಾಟಕ ಸರ್ಕಾರ ಶುರ್ಟಕ 2024-25 ಗ್ಾರಂಟಿಯನ್ೊಳಗೊಂಡ ಅಭಿವೃದ್ಧಿ ಸಾರಿಗೆಯಲ್ಲಿ ಡಿಜಿಟಲೀಕರಣ ಪರ್ವ 36 ಕೋಟಿ ರೂ. ವೆಚ್ಚದಲ್ಲಿ ಆರು ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ 32 ಸ್ಥಳಗಳಲ್ಲಿ ಅರ್ಹತಾ ಪತ್ರ ನವೀಕರಣಕ್ಕೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಅಭಿವೃದ್ಧಿ ಕರ್ನಾಟಕದ ನವ ನವನಿರ್ಮಾಣಕ್ಕೆ ನಿರ್ಮಾಣಕ ಗ್ಯಾರಂಟಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳ ದಾಖಲಾತಿಗಳ ಡಿಜಿಟಲೀಕರಣ @Siddaramaiah.official @Siddaramaiah siddaramaiah_official' ಹೇಳುತ್ತಿದೆ ನ ಚಿತ್ರವಾಗಿರಬಹುದು

ಏನ್‌ಸುದ್ದಿ.ಕಾಂ ನಡೆಸಿದ ಪರಿಶೀಲನೆಯಲ್ಲಿ ದಿನಾಂಕ 16 ಫೆಬ್ರವರಿ 2024ರಂದು ಬಜೆಟ್‌ ನಂತರ ಯಾವ ಯಾವ ಯೋಜನೆಗೆ ಎಷ್ಟು ಹಣವನ್ನು ತೆಗೆದಿರಸಲಾಗಿದೆ ಮತ್ತು ಯೋಜನೆಗಳ ಅನುಷ್ಠಾನಗಳ ಕುರಿತಾದ ಮುಖ್ಯಾಂಶಗಳ ಪೋಸ್ಟ್‌ರ್‌ಗಳನ್ನು ಮುಖ್ಯಮಂತ್ರಿಗಳ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ  ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ರನಲ್ಲಿ ಕರ್ನಾಟಕದ ವಾಹನ ಪರವಾನಗಿ ಮತ್ತು 2024-25ರ ಸಾಲಿನ ಬಜೆಟ್‌ನಲ್ಲಿ ಸಾರಿಗೆ ಇಲಾಖೆಯಲ್ಲಿ ಅಳವಡಿಸಲು ಉದ್ದೇಶಿಸಿರುವ ಡಿಜಿಟಲೀಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಪೋಸ್ಟ್‌ರ್‌ನಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಜೆಟ್‌ನ ಮೂಲ ಪೋಸ್ಟ್‌ರ್‌ನಲ್ಲಿ ಕರ್ನಾಟಕದ ವಾಹನ ಪರವಾನಗಿ ಇರುವುದು ಸ್ಪಷ್ಟವಾಗಿದೆ, ಈ ಮೂಲ ಪೋಸ್ಟ್‌ರ್‌ಅನ್ನು ಎಡಿಟ್ ಮಾಡಿ ಕರ್ನಾಟಕ ಸರ್ಕಾರ ಮಹಾರಾಷ್ಟ್ರದ ಡ್ರೈವಿಂಗ್ ಲೈಸೆನ್ಸ್ ಚಿತ್ರವನ್ನು ಹಾಕಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: FACT CHECK | ದೆಹಲಿ ರೈತರ ಹೋರಾಟಕ್ಕೆ ನಕಲಿ ರೈತರನ್ನು ಕರೆತರಲಾಗಿದೆ ಎಂದು ಸಂಬಂಧವಿಲ್ಲದ ಸುಳ್ಳು ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಕರ್ನಾಟಕ ಬಜೆಟ್‌ನ ಮುಖ್ಯಾಂಶಗಳ ಪೋಸ್ಟ್‌ರ್‌ನಲ್ಲಿ ಮಹಾರಾಷ್ಟ್ರದ ವಾಹನ ಪರವಾನಗಿ (DL) ಚಿತ್ರ ಹಾಕಿದೆಯೇ ಕರ್ನಾಟಕ ಸರ್ಕಾರ?

  • February 19, 2024 at 9:16 pm
    Permalink

    ಇಂತಹ ಅಯೋಗ್ಯ ಸೂಳೆ ಮಕ್ಕಳನ್ನು ಶಿಕ್ಷಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ನಿಮಗೆ ಒಪ್ಪಿಸಿ . ಈ ದೇಶದ ನ್ಯಾಯಾಂಗ ವ್ಯವಸ್ಥೆ ಏನಾಗಿದೆ . ಮುಂದಿನ ಪರಿಸ್ಥಿತಿ ಎಲ್ಲಿಗೆ ತಲುಪಬಹುದು ಎಂಬ ಊಹೆಗೂ ನಿಲುಕದ್ದು ಆಗಿದೆ.
    ಇದೆಲ್ಲವನ್ನೂ ಮಾಡಿಸುತ್ತಿರುವ ದೇಶದ್ರೋಹಿ,ಮತಾಂಧರನ್ನು ಸಾರ್ವಜನಿಕರ ಮುಂದೆ ಶಿಕ್ಷಿಸಬೇಕು.

    Reply

Leave a Reply

Your email address will not be published.

Verified by MonsterInsights