ಜೂಜು ಕೇಂದ್ರ ತೆರೆಯುವ ಸಿ.ಟಿ ರವಿ ಚಿಂತನೆಗೆ ಎಚ್.ಕೆ ಪಾಟೀಲ್ ತೀವ್ರ ವಿರೋಧ…

ರಾಜ್ಯ ಸರ್ಕಾರ ಜೂಜು ಕೇಂದ್ರ ತೆರೆಯುವ ಚಿಂತನೆಗೆ ಮಾಜಿ ಸಚಿವ ಎಚ್ ಕೆ ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗದಗ ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್ ಕೆ ಪಾಟೀಲ್, ಜೂಜು ಮೂಲಕ ಜನರನ್ನು ಆಕರ್ಷಣೆ ಮಾಡುವ ಆಲೋಚನೆ ಕರ್ನಾಟಕದ ಸಂಸ್ಕೃತಿಗೆ ವ್ಯತಿರಿಕ್ತವಾದದ್ದು ಅಂತ ಕಿಡಿಕಾರಿದ್ದಾರೆ. ಸಚಿವ ಸಿ ಟಿ ರವಿ ಆಲೋಚನೆ ತೀವ್ರವಾಗಿ ಖಂಡಿಸುತ್ತನೆ. ಇದು ಸರಿಯಾದದ್ದುಲ್ಲ.

ಇಂತಹದೊಂದು ಆಲೋಚನೆ ಬರುವುದೆ ತಪ್ಪು. ಜೂಜು ಆಡುವುದನ್ನು ಪ್ರೋತ್ಸಾಹಿಸಿ ಪ್ರವಾಸಿಗರುನ್ನು ಆಕರ್ಷಣೆ ಮಾಡುವುದು ಕರ್ನಾಟಕದ ಉದ್ದೇಶವಲ್ಲ. ಕರ್ನಾಟಕವನ್ನು ಥೈಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದಿಲ್ಲ. ಕರ್ನಾಟಕವನ್ನು ಕರ್ನಾಟಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಈ ನಿಮ್ಮ ಸರ್ಕಾರದ ಆಲೋಚನೆ ಅಸಂಬದ್ಧ ವಾದದ್ದು. ಆದಾಯ ಹೆಚ್ಚಿಸಲು ಜನರನ್ನು ಕೆಡಿಸುವುದು ಸರಿನಾ..ಸರಿ ಎನಿಸದ್ರೆ ಅದನ್ನು ಹೇಗೆ ಆಲೋಚನೆ ಮಾಡಿದ್ದಾರೆ ಗೊತ್ತಿಲ್ಲ ಇದು ಸಮಾಜ ದ್ರೋಹಿ ಚಿಂತನೆ ಅಂತ ಕಿಡಿಕಾರಿದ್ರು.

ಇನ್ನೂ ರಾಜ್ಯ ಸರ್ಕಾರ ಕಡತಗಳು ವಿಲೇವಾರಿ ಮಾಡುತ್ತಿಲ್ಲ, ಇದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ, ೧ ಲಕ್ಷ ೭ ಸಾವಿರ ಕಡತಗಳು ವಿಲೆವಾರಿ ಆಗದೇ ಹಾಗೆ ಉಳಿದಿವೆ. ಕಡತಗಳು ಪೆಂಡಿಂಗ್ ಉಳಿದ್ರೆ ಸಹಜವಾಗಿ ಭ್ರಷ್ಟಾಚಾರ ಹೆಪ್ಪುಗಟ್ಟುತ್ತದೆ, ಆಡಳಿತ ಕುಸಿಯುತ್ತೆ, ಜನರಿಗೆ ಸ್ಪಂದನೆ ಯಾಗುವುದಿಲ್ಲ ಅಭಿವೃದ್ಧಿ ಕೆಲಸಗಳು ಕುಂಠಿತಗೋಳ್ಳುತ್ತದೆ. ತಕ್ಷಣ ಕಡತಗಳು ವಿಲೇವಾರಿಯಾಗಬೇಕು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಕಡತ ಯಜ್ಞ ಮಾಡುವ ದೊಡ್ಡ ಪ್ರಯತ್ನ ನಡೆದಿತ್ತು.

ಆ ಪ್ರಯತ್ನ ಬಿಜೆಪಿ ಸರ್ಕಾರ ಮಾಡಬೇಕು, ಯಡಿಯೂರ ಸರ್ಕಾರದ ಆರಂಭದಲ್ಲಿ ಕಡತಗಳು ವೆಬ್ ಸೈಟ್ ನಲ್ಲಿ ಅಪ್ಲೋಡ್ ಆಗುತ್ತಿದ್ದವು, ಈಗ ಆಗ್ತಾಯಿಲ್ಲ
ಪಾರದರ್ಶಕತೆ ಮುಗಿದ ಕಥೆ ಅನ್ನೋ ಹಾಗಾಗಿದೆ. ಪಾರದರ್ಶಕ ಹಾಗೂ ಕಡತಗಳು ವಿಲೇವಾರಿ ಮಾಡಲು ತಕ್ಷಣ ಹೋಸ ಪ್ರಯೋಗ ಪ್ರಾರಂಭಿಸಬೇಕು ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights