ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂದೆ: ರಾಗಿಣಿ ಪೊಲೀಸರ ವಶಕ್ಕೆ; ಸಂಜನಾ ಆಪ್ತ ಬಂಧನ!

ಸ್ಯಾಂಡಲ್‌ವುಡ್‌ ಸುತ್ತ ಡ್ರಗ್ಸ್‌ ಮಾಫಿಯಾದ್ದೇ ಚರ್ಚೆ ನಡೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮಾದಕ ದಂಧೆಯಲ್ಲಿ ಭಾಗಿಯಾಗಿರುವವರ ಸೆರೆಹಿಡಿಯಲು ಬಲೆ ಬೀಸಿರುವ ಸಿಸಿಬಿ ಪೊಲೀಸರು ಹಲವರನ್ನು ತನಿಖೆಗೆ ಒಳಪಡಿಸಿದ್ದು, ಹಲವರ ಹೆಸರುಗಳು ಡ್ರಗ್ಸ್‌ ದಂದೆ ಸುತ್ತ ಕೇಳಿಬರುತ್ತಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ರಿವೇದಿಯವರು ಆಪ್ತ ರವಿಶಂಕರ್‌ ಹಾಗೂ ಸಂಜನಾ ಅವರ ಒಡನಾಡಿ ರಾಹುಲ್‌ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಇಂದು ಬೆಳಗ್ಗೆ ನಟಿ ರಾಗಿಣಿ ಅವರ ವಿರುದ್ಧ ಕೇಸು ದಾಖಲಿಸಿ, ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ರಾಗಿಣಿ ಅವರನ್ನು ಬಂಧಿಸಿದ್ದಾರೆ.

ಇಂದು ಯಲಹಂಕದಲ್ಲಿ ರಾಗಿಣಿ ಅವರ ಮನೆಯಲ್ಲಿ ಶೋಧ ನಡೆಸಿದ ಸಿಸಿಬಿ ಪೊಲೀಸರು ಸತತ ಮೂರು ಗಂಟೆ ವಿಚಾರಣೆ ಬಳಿಕ ನಟಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಿಸಿಬಿ ಕೇಂದ್ರ ಕಚೇರಿಗೆ ಕರೆತಂದಿದ್ದಾರೆ.

ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಟಿ ರಾಗಿಣಿ ಅವರ ಮೊಬೈಲ್‌ನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಪಡೆದುಕೊಂಡಿದ್ದು ಅದರೊಂದಿಗೆ ಅವರ ಮತ್ತು ಡ್ರಗ್ಸ್ ಜಾಲದ ನಡುವಿನ ನಂಟಿನ ಸಂಬಂಧ ಸಾಕಷ್ಟು ಪ್ರಶ್ನೆಗಳೊಂದಿಗೆ ರಾಗಿಣಿಯವರ ತನಿಖೆ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸಾವಿಗೆ ಡ್ರಗ್ಸ್‌ ಕಾರಣ; ಹೆಚ್‌ಡಿಕೆಯನ್ನೂ ವಿಚಾರಣೆಗೊಳಪಡಿಸಿ: ಪ್ರಮೋದ್ ಮುತಾಲಿಕ್‌

ನಿನ್ನೆ, ರಾಗಿಣಿಯವರ ಆಪ್ತ ಆರ್‌ಟಿಒ ಕಚೇರಿಯಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿ ಕಾರ್‍ಯ ನಿರ್ವಹಿಸುತ್ತಿದ್ದ ರವಿ ಶಂಕರ್‌ನನ್ನು ಬಂಧಿಸಲಾಗಿದ್ದು, ಆತ ಡ್ರಗ್ಸ್‌ ಮಾರಟದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಆ ಕಾರಣಕ್ಕಾಗಿ ಆತನನ್ನು ಸೇವೆಯಿಂದ ಅಮಾನತು ಮಾಡುವಂತೆ ಸರಕಾರದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ, ನಟಿ ಸಂಜನಾ ಅವರ ಆಪ್ತ ರಾಹುಲ್ ಎಂಬಾತನನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ಡ್ರಗ್ಸ್ ದಂಧೆ: ಬೆಳ್ಳಂಬೆಳಿಗ್ಗೆ ನಟಿ ರಾಗಿಣಿ ಬೆಂಗಳೂರಿನ ನಿವಾಸದ ಮೇಲೆ ಸಿಸಿಬಿ ದಿಢೀರ್ ದಾಳಿ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights