ಗುರುವಾರದಿಂದ ರಾಜ್ಯ ಅಧಿವೇಶನ; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಸಿದ್ದತೆ!

ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಗುರುವಾರ (ಜ.28)ರಿಂದ ಫೆಬ್ರವರಿ 05 ವರೆಗೆ ನಡೆಯಲಿದ್ದು, ಸರ್ಕಾರದ ಲೋಪಗಳನ್ನು ವಿಧಾನಸಭೆಯಲ್ಲಿ ಪ್ರಶ್ನಿಸಲು ವಿರೋಧ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ.

ಗುರುವಾರ ಬೆಳಗ್ಗೆ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ, ಅಧಿವೇಶನ ಆರಂಭವಾಗಲಿದೆ. ಜ.29ರಿಂದ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ಆರಂಭವಾಗಲಿದೆ ಎಂದು ತೀರ್ಮಾನಿಸಲಾಗಿದೆ.

ಕೃಷಿ ಕಾಯ್ದೆಗಳ ವಿರುದ್ದ ನಡೆಸುತ್ತಿರುವ ರೈತರ ಪ್ರತಿಭಟನೆ-ಸರ್ಕಾರದ ಧೋರಣೆಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ವಿರೋಧ ಪಕ್ಷ ಕಾಂಗ್ರೆಸ್‌ ರೈತರ ಪರವಾಗಿ ಹೋರಾಟಕ್ಕೆ ಇಳಿದಿದ್ದು, ಅಧಿವೇಶನದಲ್ಲಿ ರೈತರ ವಿಚಾರವಾಗಿ ಭಾರೀ ಸದ್ದು ಮಾಡುವ ಸಾಧ್ಯತೆಯಿದೆ. ಅಲ್ಲದೆ, ಬಿಜೆಪಿಯ ಬಹು ಅಪೇಕ್ಷೆಯ ಮಸೂದೆ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಪರಿಷತ್‍ನಲ್ಲಿ ಮತ್ತೆ ಸರ್ಕಾರ ಮಂಡಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಗುರುವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೂ ಮುನ್ನ ನಾಳೆ ಬೆಳಗ್ಗೆ 09 ಗಂಟೆಗೆ ಕಾಂಗ್ರೆಸ್‌ ಶಾಸಕರ ಸಭೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆದಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಬಂಡಾಯ; ಸಿಎಂ ಸ್ಥಾನ ಅಸ್ಥಿರಗೊಳಿಸಲು BJPಯಲ್ಲೇ ಸಂಚು!

ಅಧಿವೇಶನದಲ್ಲಿ ಸರ್ಕಾರ ವೈಫಲ್ಯಗಳು, ಆರ್ಥಿಕ ಸಂಕಷ್ಟ, ಅಭಿವೃದ್ದಿ ಕೆಲಸಗಳಲ್ಲಿ ಹಿನ್ನಡೆ, ಅನುದಾನ ಬಿಡುಗಡೆ ವಿಳಂಬ, ಬೇಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್-ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಿದ್ದತೆ ನಡೆಸುತ್ತಿವೆ.

ಇದಷ್ಟೇ ಅಲ್ಲದೆ, ಬಡವರಿಗೆ ಮನೆ ಹಂಚಿಕೆ ವಿಳಂಬ, ಆರೋಗ್ಯ ಸಮಸ್ಯೆ, ವಿದ್ಯುತ್ ಅಭಾವ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವು, ಶಾಲಾಕಾಲೇಜು ಆರಂಭದ ವಿಚಾರ ಸೇರಿದಂತೆ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾದ್ಯತೆಗಳಿವೆ.

ಕಳೆದ ಎರಡು ಅಧಿವೇಶನಗಳು ಕೊರೊನಾ ಕಾರಣದಿಂದಾಗಿ ಕಡಿಮೆ ಅವಧಿಗೆ ಮೊಟಕು ಗೊಂಡಿದ್ದವು. ಇದೀಗ 07 ದಿನಗಳ ವಿಧಾನಮಂಡಲದ ಕಾಲ ಕಾರ್ಯಕಲಾಪ ನಡೆಯಲಿದ್ದು, ಸರ್ಕಾರ ಮತ್ತು ಪ್ರತಿ ಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights