ಎತ್ತಿಗೆ ಜ್ವರ ಎಮ್ಮೆಗೆ ಬರೆ: ಸಚಿವರ ತಪ್ಪಿಗೆ ವೈದ್ಯಾಧಿಕಾರಿ ಅಮಾನತು!

ಕೊರೊನಾ ಲಸಿಕೆ ವಿತರಣೆಯ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರಿಗೆ ಲಸಿಕೆ ನೀಡಲು ಅವರ ಮನೆಗೆ ತೆರಳಿ ಲಸಿಕೆ ನೀಡಿದ್ದ ಹಿರೇಕೆರೂರು ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮಾರ್ಚ್‌ 02 ರಂದು ಹಿರೇಕೆರೂರಿನಲ್ಲಿರುವ ಕೃಷಿ ಸಚಿವರ ಮನೆಗೆ ತೆರಳಿ ಬಿ.ಸಿ.ಪಾಟೀಲ್ ಹಾಗೂ ವನಜಾ ಪಾಟೀಲ್ ಅವರಿಗೆ ವೈದ್ಯಾಧಿಕಾರಿ ಮಕಾಂದಾರ್ ಕೊರೊನಾ ಲಸಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.

ಸಚಿವರಾದವರು ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಪಡೆದು ಜನರಿಗೆ ಮಾದರಿಯಾಗಬೇಕು. ಆದರೆ, ಬಿ.ಸಿ ಪಾಟೀಲ್‌ ಅವರು ಬೇಜವಾಬ್ದಾರಿತನ ಪ್ರದರ್ಶಿಸಿದ್ದು, ವೈದಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಆದರೆ, ಈ ವರೆಗೆ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬದಲಾಗಿ, ಸಚಿವರ ತಪ್ಪಿಗೆ ವೈದ್ಯಾಧಿಕಾರಿ ಅವರಿಗೆ ಶಿಕ್ಷೆ ನೀಡಿದ್ದು, ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದಕ್ಕಾಗಿ ಕಾರಣ ಕೇಳಿ ಹಿರೇಕೆರೂರು ಟಿಹೆಚ್‌ಒ ಡಾ. ಮಕಾಂದಾರ್ ಅವರಿಗೆ ಕಳೆದ ತಿಂಗಳು ನೋಟಿಸ್‌ ನೀಡಲಾಗಿತ್ತು. ಸಚಿವರ ಬುಲಾವ್ ಮೇರೆಗೆ ಅವರ ಮನೆಗೆ ತೆರಳಿ ಲಸಿಕೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಅತ್ಯಾಚಾರ ಸಂತ್ರಸ್ಥೆಯ ಪರ ವಕೀಲ ಜಗದೀಶ್‌ ಯಾರು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights