ಕಪ್ಪು ವರ್ಣೀಯ ಜಾರ್ಜ್‌ ಪ್ಲಾಯ್ಡ್‌ ಹತ್ಯೆ: ಪೊಲೀಸ್‌ ಅಧಿಕಾರಿಗೆ 22.5 ವರ್ಷ ಜೈಲು ಶಿಕ್ಷೆ!

ಆಫ್ರಿಕಾ ಮೂಲಕ ಅಮೆರಿಕಾ ಪ್ರಜೆ ಜಾರ್ಜ್ ಪ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ಅವರಿಗೆ 22.5 ವ‍ರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

46 ವರ್ಷದ ಜಾರ್ಜ್ ಪ್ಲಾಯ್ಡ್‌ನನ್ನು ಮೇ 25 ಎಂದು ಹತ್ಯೆ ಮಾಡಲಾಗಿತ್ತು. ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಪ್ಲಾಯ್ಡ್‌ನ ಗುತ್ತಿಗೆಯ ಮೇಲೆ 09 ನಿಮಿಷಗಳ ಕಾಲ ಮೊಣಕಾಲನ್ನು ಹೂರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.

ಜಾರ್ಜ್‌ ಪ್ಲಾಯ್ಡ್‌ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ವಿಡಿಯೋದಲ್ಲಿ ಫ್ಲಾಯ್ಡ್​​ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಬೇಡಿಕೊಂಡರೂ ಬಿಡದ ಚೌವಿನ್‌, ಪ್ಲಾಯ್ಡ್‌ನನ್ನು ಹತ್ಯೆ ಮಾಡಿದ್ದು ಸ್ಪಷ್ಟವಾಗಿ ಕಾಣಿಸಿತ್ತು.

ಜನಾಂಗೀಯ ನಿಂದನೆ ಮತ್ತು ಪೊಲೀಸರ ಈ ದೌರ್ಜನ್ಯದ ವಿರುದ್ಧ ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿರುವ ಅಮೆರಿಕಾದ ನ್ಯಾಯಲಯವು ಅಪರಾಧಿ ಡೆರೆಕ್‌ ಚೌವಿನ್‌ಗೆ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ಅಮೆರಿಕದ ಜನತೆಗೆ ದಶಕಗಳ ಜನಾಂಗೀಯ ನಿಂದನೆ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ಜನಾಂಗೀಯ ನಿಂದನೆ ವಿರುದ್ದ ಹೋರಾಟ ಮಾಡುತ್ತಿರುವವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಪ್ಪು ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ ಅಮೆರಿಕದ ಪೊಲೀಸ್​ ಅಧಿಕಾರಿಗೆ ಇದುವರೆಗೆ ನೀಡಲಾದ ಅತ್ಯಂತ ಸುದೀರ್ಘ ಜೈಲುಶಿಕ್ಷೆ ಇದಾಗಿದೆ.

ಅಲ್ಲದೇ ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದಲ್ಲಿ 45 ವರ್ಷದ ಚೌವಿನ್​​ ತಮ್ಮ ಮುಕ್ಕಾಲು ಭಾಗ ಶಿಕ್ಷೆಯನ್ನ ಪೂರ್ತಿಗೊಳಿಸಿದ ನಂತರ ಅಂದರೆ 15 ವರ್ಷಗಳ ಜೈಲು ಶಿಕ್ಷೆ ಬಳಿಕ ಪೆರೋಲ್​ ಮೂಲಕ ಜೈಲಿನಿಂದ ಹೊರಬರಬಹುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ನೇಪಾಳದಲ್ಲಿ ಉಕ್ಕುತ್ತಿದೆ ಪ್ರವಾಹ; 07 ಜನರ ಸಾವು; ಭಾರತೀಯರು ಸೇರಿ 50ಕ್ಕೂ ಹೆಚ್ಚು ಜನರು ನಾಪತ್ತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights