ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ? : ಹಿರಿಯರಿಗೆ ಕೋಕ್ ಕೊಡುತ್ತಾ ಹೈಕಮಾಂಡ್?

ಸಿಎಂ ಬದಲಾವಣೆ ಬಡಿದಾಟದ ನಡುವೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಿಂಹಾಸವನ್ನೇರಿದ್ದಾರೆ. ಆದರೀಗ ಸಿಎಂ ಸಂಪುಟಕ್ಕೆ ಸೇರಲು ಪೈಪೋಟಿ ಹೆಚ್ಚಾಗಿದ್ದು ಬಿಜೆಪಿಗೆ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.

ಹೌದು… ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಸಿಎಂ ಪಟ್ಟಕ್ಕೇರಿದ ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಮೂಲ ಹಾಗೂ ವಲಸೆ ಬಿಜೆಪಿಗರು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಸಿಎಂ ಆಕಾಂಕ್ಷಿಗಳಿಗೆ ಸ್ಥಾನ ಕೈತಪ್ಪಿ ಕೋಪ ಮೂದಿಮುಚ್ಚಿದ ಕೆಂಡಂದಂತಿದ್ದು, ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಆದರೆ ಯಾರಿಗೆ? ಸಚಿವ ಸ್ಥಾನ ನೀಡಲಾಗುತ್ತದೆ ಎನ್ನುವ ಬಗ್ಗೆ ಇನ್ನೂ ಕೂಡ ನಿಖರವಾಗಿಲ್ಲ. ಈಗಾಗಲೇ ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಿ ಮೂಲ ಬಿಜೆಪಿಗರ ಕೆಂಗಣ್ಣಿಗೆ ನಾಯಕರು ಒಳಗಾಗಿದ್ದರು. ಆದರೀಗ ಯಾರಿಗೆ ಸಚಿವ ಪಟ್ಟ ಸಿಗಲಿದೆ? ಎನ್ನುವ ಕುತೂಹಲ ಮೂಡಿದೆ.

ಒಂದು ವೇಳೆ ಬಿಜೆಪಿ ಹೈಕಮಾಂಡ್ ವಲಸೆ ಬಿಜೆಪಿಗರಿಗೆಲ್ಲರಿಗೂ ಮತ್ತೆ ಸಚಿವ ಸ್ಥಾನ ನೀಡಿದ್ದೇ ಆದರೆ ಮೂಲ ಬಿಜೆಪಿಗರು ಸಿಡೆದೇಳುವುದು ಪಕ್ಕಾ. ಸಚಿವ ಸ್ಥಾನ ನೀಡದೇ ಹೋದಲ್ಲಿ ಮೈತ್ರಿ ಸರ್ಕಾರ ಬಿಟ್ಟು ಬಂದ ಬಾಂಬೆ ಫ್ರೆಂಡ್ಸ್ ಆಕ್ರೋಶಗೊಳ್ಳುವುದು ಖಚಿತ. ಹೀಗಾಗಿ ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಈಗಾಗಲೇ ಬಿಜೆಪಿ ಶಾಸಕರು ಸಂಪುಟ ಸೇರಲು ಲಾಬಿ ಶುರು ಮಾಡಿದ್ದು ಇನ್ನೆರಡು ದಿನಗಳಲ್ಲಿ ದೆಹಲಿಗೆ ಸಿಎಂ ಬೊಮ್ಮಾಯಿ ಹಾರಲಿದ್ದಾರೆ. ದೆಹಲಿಗೆ ತೆರಳಿ ಮೋದಿ, ಅಮಿತ್ ಶಾ, ನಡ್ಡಾ ಸಂತೋಷ್ ಜೀ ಭೇಟಿ ಮಾಡಿ, ಕೇಂದ್ರದ ನಾಯಕರ ಅನುಮತಿ ಪಡೆದು 1 ವಾರದಲ್ಲಿ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ.

ಇನ್ನೂ ಈ ಬಾರಿ ಹೈಕಮಾಂಡ್ ಹಿರಿಯರಿಗೆ ಕೋಕ್ ಕೊಟ್ಟು ಹೊಸಬರಿಗೆ ಮಣೆ ಹಾಕುವ ನಿರೀಕ್ಷೆ ಇದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟುಕೋಮಡು ಹಿರಿಯರಿಗೆ ಜವಬ್ದಾರಿ ನೀಡಲಿದ್ದು, ಹಿರಿಯ ನಾಯಕರಿಗೆ ಪಕ್ಷದ ಜವಾಬ್ದಾರಿ ಕೊಡಲು ಹೈಕಮಾಂಡ್ ಚಿಂತನೆ ನಡೆಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights