ಫ್ಯಾಕ್ಟ್ಚೆಕ್ : BJP ಪ್ರಕಾರ ಸಿದ್ದರಾಮಯ್ಯನವರಿಗೆ 73 ವರ್ಷವಂತೆ! ಹೌದೇ ?
ವಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ನೋಡಿದ್ದೆವು. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಜನರು ತಮ್ಮ ಪ್ರೀತಿಯ ನಾಯಕನ ಹುಟ್ಟುಹಬ್ಬದ ಸಂತೋಷದಲ್ಲಿ ಭಾಗವಹಿಸಲು ದೂರದ ಊರುಗಳಿಂದ ಸ್ವಯಂ ಪ್ರೇರಿತರಾಗಿ ಆಗಮಿಸಿ ಸಿದ್ದರಾಮಯ್ಯ ಅವರಿಗೆ ಹರಿಸಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಲಿ ಎಂದು ಆಶೀರ್ವಧಿಸಿದ್ದಾರೆ. ಅದನ್ನು ಮುಂದಿನ 2023ರ ಚುನಾವಣೆ ನಿರ್ಧರಿಸುತ್ತದೆ. ಅಮೃತಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಮುಗಿದಿದೆ, ಆದರೆ ಕೆಲವು BJP ಬೆಂಬಲಿಗರು ಇನ್ನು ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಹುಟ್ಟಿದ ದಿನಾಂಕದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. BJP ಮತ್ತು ಬಲಪಂಥೀಯ ಬೆಂಬಲಗರು ಸಿದ್ದರಾಮಯ್ಯ ಅವರು 12 ಆಗಸ್ಟ್ 1948 ರಲ್ಲಿ ಜನಿಸಿದ್ದು ಇಂದಿಗೆ 73 ವರ್ಷ ಆಗುತ್ತದೆ “ಆದರೆ ನಕಲಿ ಗಾಂಧಿ ಅಭಿಮಾನಿಗಳಿಗೆ ದೇಶದ 75 ನೇ ಅಮೃತಮಹೋತ್ಸವಕ್ಕಿಂತ ಸಿದ್ದರಾಮಯ್ಯನ 73ನೇ ವರ್ಷದ ನಕಲಿ ಹುಟ್ಟುಹಬ್ಬ ಸಂಭ್ರಮವಂತೆ, ಎಂದು ಶಕುಂತಲಾ ನಟರಾಜ್ ಟ್ವೀಟ್ ಮಾಡಿದ್ದಾರೆ.
https://twitter.com/ShakunthalaHS/status/1554518171813437440
ಸಿದ್ದರಾಮಯ್ಯ ಅವರ ಹುಟ್ಟಿದ ದಿನಾಂಕ ಕುರಿತು BJP ಬೆಂಬಲಿತ ಮತ್ತು ಬಲಪಂಥೀಯ ಪ್ರತಿಪಾದಕ ಮಾಧ್ಯಮವಾದ ಪೋಸ್ಟ್ಕಾರ್ಡ್ ಕನ್ನಡ ವೂ ತನ್ನ ಫೇಸ್ ಬುಕ್ಪೇಜ್ನಲ್ಲಿ ಒಂದು ಪೋಸ್ಟ್ಅನ್ನು ಹಂಚಿಕೊಂಡಿದ್ದು ಅದರಲ್ಲಿ 1948 ಎಂದು ಹೇಳಿದ ಗೂಗಲ್ ಪ್ರಕಾರ 74 ವರ್ಷಕ್ಕೆ ಅಮೃತ ಮಹೋತ್ಸವವನ್ನು (75) ಕಾಂಗ್ರೆಸ್ ಆಚರಿಸುತ್ತಿದೆ ಎಂದು ಪೋಸ್ಟ್ಅನ್ನು ಹಂಚಿಕೊಂಡಿದೆ.

ಕೆಲವು BJP ಬೆಂಬಲಿಗರೂ ಸಹ ಗೂಗಲ್ ದಿನಾಂಕವನ್ನ ಹಂಚಿಕೊಳ್ಳುವ ಮೂಲಕ 74 ವರ್ಷಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರ ಹುಟ್ಟಿದ ದಿನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗುತ್ತಿರುವ ಚರ್ಚೆ ಕುರಿತು ಸತ್ಯಾಸತ್ಯತೆ ಏನಿದೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಏನ್ಸುದ್ದಿ.ಕಾಂ ಪರಿಶೀಲಿಸಿದೆ.
ಫ್ಯಾಕ್ಟ್ಚೆಕ್ :
ಸಿದ್ದರಾಮಯ್ಯ ಅವರ ಹುಟ್ಟಿದ ದಿನಾಂಕದ ಬಗ್ಗೆ ಸ್ವತಃ ಸಿದ್ದರಾಮಯ್ಯನವರೇ ಹೇಳಿರುವಂತೆ ಅವರ ಮನೆಯಲ್ಲಿದ್ದ ಬಡತನ ಮತ್ತು ಕುಟುಂಬದವರು ಅನಕ್ಷರಸ್ತರಾಗಿದ್ದರಿಂದ ತಮ್ಮ ಜನ್ಮ ದಿನಾಂಕವನ್ನ ದಾಖಲು ಮಾಡಲು ಆಗಿರಲಿಲ್ಲ, ಶಾಲೆಗೆ ಸೇರುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಒಂದು ದಿನಾಂಕವನ್ನು ಸೂಚಿಸಿದ್ದರು, ಅದನ್ನೆ ಅಧಿಕೃತವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಎಂದು ತಮ್ಮನ್ನು ಸಂದರ್ಶನ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡುತ್ತ ವಿವರಿಸಿದ ಉದಾಹರಣೆಗಳೂ ಇವೆ.
ಸಿದ್ದರಾಮಯ್ಯನವರ ಹುಟ್ಟುಹಬ್ಬದ ದಿನಾಂಕ ಕುರಿತು BJPಯ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ಗೆ ರೀ ಟ್ವೀಟ್ ಮಾಡಿರುವ ಅವರ ಅಭಿಮಾನಿಗಳು ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನ ಸಮರ್ಥಿಸಿಕೊಂಡಿದ್ದಾರೆ.
https://twitter.com/bharathhcb/status/1554684425018806276
ಸಿದ್ದರಾಮಯ್ಯನವರ ಹುಟ್ಟಿದ ದಿನಾಂಕ ವನ್ನ ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ 3 ಆಗಸ್ಟ್ 1947 ಎಂದು ಮಾಹಿತಿ ಲಭ್ಯವಾಗಿದೆ ಅದನ್ನು ಇಲ್ಲಿ ನೋಡಬಹುದು.

ಅಮೃತಮಹೋತ್ಸವದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ‘ಕಿರಣ್’ ಅವರು ಇದರ ಬಗ್ಗೆ ಪ್ರತಿಕ್ರಯಿಸಿದ್ದು, ಒಂದು ವೇಳೆ ಸಿದ್ದರಾಮಯ್ಯನವರ ಹುಟ್ಟಿದ ದಿನಾಂಕ 1948 ಆಗಿದ್ದರೂ ಸಮಸ್ಯೆ ಏನು ? 74 ತುಂಬಿ 75ಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಅಮೃತಮಹೋತ್ಸವ ಮಾಡಿದ್ದೇವೆ ಅದನ್ನು BJPಯವರಿಗೆ ಸಹಿಸಲಾಗುತ್ತಿಲ್ಲ ಎಂದರೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಸಂಭ್ರಮಾಣೆಯನ್ನು ಸಮರ್ಥಿಸಿಕೊಂಡರು.
ರಾಜ್ಯ BJP ಘಟಕವು ಸಿದ್ದರಾಮಯ್ಯನವರ ಅಮೃತಮಹೋತ್ಸವದ ಸಂದರ್ಭದಲ್ಲಿ ಕೆಟ್ಟ ಭಾಷೆ ಬಳಸಿ ಸಿದ್ದರಾಮಯ್ಯ ಹಿಂದೂ ವಿರೋಧಿ ಇದು ‘ಹಿಂದೂ ವಿರೋಧಿ’ ಹಬ್ಬ ಎಂದೆಲ್ಲ ಪೋಸ್ಟ್ಅನ್ನು ಮಾಡಿದ್ದಾರೆ ಒಬ್ಬ ಧೀಮಂತ ನಾಯಕನ ರಾಜಕೀಯ ಜೀವನ ಮತ್ತು ಬದುಕಿನ 75 ವರ್ಷವನ್ನು ಪೂರೈಸುವ ಸಂದರ್ಭದಲ್ಲಿ ಇಂತಹ ಕೀಳು ಮಟ್ಟದ ರಾಜಕಾರಣನ್ನು BJP ಯವರು ಮಾಡುತ್ತಾರೆ ಎಂದರೆ ಅವರ ಯೋಗ್ಯತೆ ಏನೆಂದು ತಿಳಿಯುತ್ತದೆ ಎಂದು ಏನ್ಸುದ್ದಿ.ಕಾಂ ಗೆ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಸರ್ಕಾರಿ ಶಾಲೆಯಲ್ಲಿ ನಕಲಿ ಶಿಕ್ಷಕ – ವೈರಲ್ ವಿಡಿಯೋದ ವಾಸ್ತವವೇನು?

