ಫ್ಯಾಕ್ಟ್‌ಚೆಕ್: ಪತ್ನಿಗೆ ವಂಚಿಸಿ, ಗೆಳತಿಯೊಂದಿಗೆ ಸಿಕ್ಕಿ ಬಿದ್ದ ವ್ಯಕ್ತಿ ಆಗ್ರಾದ AAP ಜಿಲ್ಲಾಧ್ಯಕ್ಷನಲ್ಲ

ಆಮ್ ಆದ್ಮಿ ಪಕ್ಷದ (AAP) ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ತನ್ನ ಪತ್ನಿಗೆ ವಂಚಿಸಿ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಹೋಟೆಲ್‌ವೊಂದರ ಕೋಣೆಯಲ್ಲಿ ತನ್ನ ಪ್ರೇಯಸಿಯೊಂದಿಗೆ ವಿರಮಿಸುತ್ತಿದ್ದಾಗ ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಆಮ್ ಆದ್ಮಿ ಪಕ್ಷದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ತನ್ನ ಪತ್ನಿಯಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದ ಬಳಕೆದಾರರು ಮತ್ತು ಕೆಲ ಸುದ್ದಿ ಮಾಧ್ಯಮಗಳು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪತ್ನಿ ಎಂದು ಹೇಳಲಾಗುತ್ತಿರುವ ಮಹಿಳೆಯು ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದು, ಆತನ ಪ್ರೇಯಸಿಯ ತಲೆಗೂದಲನ್ನು ಹಿಡಿದು ಎಳೆದಾಡುತ್ತಿರುವ ದೃಶ್ಯಗಳನ್ನು ನೋಡಬಹುದು.

ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿರುವ ದೃಶ್ಯಾವಳಿಗಳು ಮತ್ತು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ದೃಶ್ಯಾವಳಿಯ ಕೀವರ್ಡ್ ಗಳ ಮೂಲಕ ಸರ್ಚ್ ಮಾಡಿದಾಗ  ವಿಡಿಯೋ ಕುರಿತು ಅನೇಕ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ವರದಿಗಳ ಪ್ರಕಾರ, ಆಗ್ರಾದ ಹೋಟೆಲ್‌ನ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆತಿಯೊಂದಿಗೆ ಸಲುಗೆಯಿಂದ ಇದ್ದ ಸಂದರ್ಭದಲ್ಲಿ, ಪುರುಷನ ಪತ್ನಿ ದಾಳಿ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ನಿಂದಿಸಿ ಥಳಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ದಿನೇಶ್ ಆಗ್ರಾದ ಆಸ್ಪತ್ರೆಯೊಂದರಲ್ಲಿ ಐಸಿಯು ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ಸೇರಿ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಇಬ್ಬರು ಏಕಾಂತದಲ್ಲಿ ಇದ್ದ ಸಮಯದಲ್ಲಿ ಇಬ್ಬರನ್ನು ರೆಡ್‌ಹ್ಯಾಂಡ್‌ಆಗಿ ಹಿಡಿದಿರುವ ದಿನೇಶನ ಪತ್ನಿ ನೀಲಂ ಹೊಡೆದಿದ್ದಾಳೆಎಂದು ಆಜ್ ತಕ್ ಮತ್ತು ಈಟಿವಿ ಭಾರತ್ ವರದಿ ಮಾಡಿವೆ.

ಆದರೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿಗೂ ಆಮ್‌ ಆದ್ಮಿ ಪಕ್ಷದ ಆಗ್ರಾ ಜಿಲ್ಲೆಯ ಅಧ್ಯಕ್ಷರಾದ ಧೀರಜ್‌ ಬಾಘೇಲ್‌ ಗೂ ಸಂಬಂಧವಿಲ್ಲ, ಒಂದು ತಿಂಗಳ ಹಿಂದೆ ಧೀರಜ್ ಬಾಘೇಲ್ ಬಹುಜನ ಸಮಾಜ ಪಕ್ಷ (BSP) ತೊರೆದು AAP ಗೆ ಸೇರಿದ್ದರು ಎಂದು BHOOM ವರದಿ ಮಾಡಿದೆ

ಜೀ ನ್ಯೂಸ್ ಪತ್ರಕರ್ತ ತುಷಾರ್ ಶ್ರೀವಾಸ್ತವ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಧೀರಜ್ ಬಾಘೇಲ್, ವಿಡಿಯೋದಲ್ಲಿ ಇರುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೂ ವಿಡಿಯೋದಲ್ಲಿರುವ ವ್ಯಕ್ತಿಗೆ ಫೋಟೋ ಹೊಂದಿಕೆಯಾಗುತ್ತಿಲ್ಲ. ನಂತರ ತುಷಾರ್ ಶ್ರೀವಾಸ್ತವ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಟ್ವೀಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಕಲಿ ಪೋಸ್ಟ್‌ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದೇನೆ ಎಂದು ಬಾಘೆಲ್ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದಿನೇಶ್ ಎಂಬ ವ್ಯಕ್ತಿಯು ಆಗ್ರಾದ ಹೋಟೆಲ್‌ನ ಕೊಠಡಿಯೊಂದರಲ್ಲಿ ತನ್ನ ಗೆಳೆತಿಯೊಂದಿಗೆ ಸಲುಗೆಯಿಂದ ಇದ್ದ ಸಂದರ್ಭದಲ್ಲಿ ಆತನ ಪತ್ನಿಗೆ  ಸಿಕ್ಕಿಬಿದ್ದಿದ್ದಾನೆ. ಈ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಲಾಗಿದ್ದು, ಈ ವಿಡಿಯೋದಲ್ಲಿರುವ ವ್ಯಕ್ತಿ ಆಗ್ರಾದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಧೀರಜ್ ಬಾಘೇಲ್ ಅವರು ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಅಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮತ್ತೆ ಮತ್ತೆ ವೈರಲ್ ಆಗುತ್ತಿದೆ ಮಕ್ಕಳ ಕಳ್ಳರ ವಿಡಿಯೋ! ವಾಸ್ತವವೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights