ಫ್ಯಾಕ್ಟ್‌ಚೆಕ್ : ಯಡಿಯೂರಪ್ಪ ನೀಡಿದ ಹೂಗುಚ್ಚವನ್ನು ಅಮಿತ್ ಶಾ ನಿರಾಕರಿಸುವ ಮೂಲಕ ಅವಮಾನಿಸಿದರೆ?
ಬಿರು ಬೇಸಿಗೆಯ ನಡುವೆ ಕರ್ನಾಟಕದ 2023ರ ಚುನಾವಣೆ ಮತ್ತಷ್ಟು ಕಾವು ಪಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಬೇಟಿ ನೀಡಿದ್ದ ಅಮಿತ್ ಶಾ ನಡೆ ಇದಕ್ಕೆ ಪುಷ್ಟಿ ನೀಡಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. 24 ಮಾರ್ಚ್ 2023 ರಂದು ಬೆಳಗಿನ ಉಪಹಾರ ಸವಿಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಮಿತ್ ಶಾ ಅವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ BJP ಯ ಕೆಲ ಮುಖಂಡರು ಹಾಜರಿದ್ದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲು ಮುಂದಾದಾಗ, ಯಡಿಯೂರಪ್ಪನವರಿಂದ ಹೂಗುಚ್ಚ ಸ್ವೀಕರಿಸಲು ಅಮಿತ್ ಶಾ ನಿರಾಕರಿಸಿದ್ದು ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪನವರಿಗೆ ಮಾಡಿದ ಅವಮಾನ ಎಂದು ಹೇಳುವ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
#Shocking_BreakingNews#AmitShah refused to receive
bouquet from the former CM
#Yediyurappa @BSYBJP and ask him to give the bouquet to BY Vijayendra to welcome him (Amitshah) when he arrived Bangalore for #KarnatakaElection2023It is a great insult to #Yediyurappa pic.twitter.com/XfV9kilAMO
— தமிழினியன் (@mugavaitamil) March 24, 2023
ಯಡಿಯೂರಪ್ಪ ಬದಲಿಗೆ ಅವರ ಪುತ್ರ ಹಾಗೂ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಪುಷ್ಪಗುಚ್ಛ ನೀಡುವಂತೆ ಕೇಳಿರುವ 19 ಸೆಕೆಂಡ್ ಗಳ ವಿಡಿಯೋ ವೈರಲ್ ಆಗಿದೆ.ಹಾಗಿದ್ದರೆ ಅಮಿತ್ ಶಾ ಯಡಿಯೂರಪ್ಪನವರಿಗೆ ಅವಮಾನ ಮಾಡುವ ಉದ್ದೇಶದಿಂದ ಹಾಗೆ ಮಾಡಿದರೆ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಟ್ವಿಟರ್ ಸರ್ಚ್ ಮಾಡಿದಾಗ ಯಡಿಯೂರಪ್ಪನವರ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳು ಲಭ್ಯವಾಗಿದೆ. ಯಡಿಯೂರಪ್ಪ ಅವರು ಅಮಿತ್ ಶಾ ಅವರನ್ನು ಹೂ ಗುಚ್ಚ ನೀಡಿ ಸ್ವಾಗತಿಸುವುದು, ವಿಜಯೇಂದ್ರ ಅವರು ಅಮಿತ್ ಶಾಗೆ ಉಪಹಾರವನ್ನು ಬಡಿಸುವುದು ಸೇರಿದಂತೆ ಅಮಿತ್ ಶಾ ಅವರೊಂದಿಗಿನ ಉಪಹಾರ ಸೇವಿಸುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪ ಮನೆಗೆ ಬಂದ ಅಮಿತ್ ಶಾ ಅವರು ಯಡಿಯೂರಪ್ಪ ತಮ್ಮನ್ನು ಸ್ವಾಗತಿಸಲು ತಂದ ಹೂಗುಚ್ಛವನ್ನು ಅವರ ಪುತ್ರ ವಿಜಯೇಂದ್ರನಿಗೆ ನೀಡುವಂತೆ ಹೇಳಿ ವಿಜಯೇಂದ್ರರ ಬೆನ್ನು ತಟ್ಟಿದ್ದಾರೆ. ಈ ದೃಶ್ಯಗಳು ವಿಶೇಷವಾಗಿದ್ದವು.
Extended a warm welcome to Union Home Minister Shri @amitshah Ji, whom I had the pleasure of hosting at my residence this morning. We discussed upcoming state elections over a breakfast of Karnataka delicacies. (1/2) pic.twitter.com/zMa57IHLh5
— B.S.Yediyurappa (@BSYBJP) March 24, 2023
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹೋಟೆಲ್ನಲ್ಲಿ ತಂಗಿದ್ದ ಅಮಿತ್ ಶಾ ಬೆಳಗ್ಗೆ ಬಿಎಸ್ ಯಡಿಯೂರಪ್ಪನವರ ಮನೆಗೆ ತೆರಳಿದರು. ಅಮಿತ್ ಶಾ ಸ್ವಾಗತಿಸಲು ಯಡಿಯೂರಪ್ಪನವರು ಹೂಗುಚ್ಛ ಹಿಡಿದು ಕಾಯುತ್ತಿದ್ದರು. ಈ ವೇಳೆ ಕಾರಿನಿಂದ ಇಳಿದ ಅಮಿತ್ ಶಾರಿಗೆ ಸ್ವಾಗತಿಸಲು ಮುಂದಾದ ಬಿಎಸ್ವೈಗೆ ನಗುತ್ತಲೇ ನಿಮ್ಮ ಕೈಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು. ಇದು ಅರ್ಥ ಆಗದ ಬಿಎಸ್ವೈ ತಬ್ಬಿಬ್ಬಾದರು. ಬಳಿಕ ಮತ್ತೆ ಅಮಿತ್ ಶಾ ಕೈ ತೋರಿಸಿ ಹೂಗುಚ್ಛವನ್ನು ವಿಜಯೇಂದ್ರನಿಗೆ ಕೊಡುವಂತೆ ಹೇಳಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು.

ಆಗ, ವಿಜಯೇಂದ್ರ ಅವರು ಹೂಗುಚ್ಛವನ್ನು ಪಡೆದು ಅಮಿತ್ ಶಾಗೆ ನೀಡಲು ಮುಂದಾದಾಗ. ಆಗ ಶಾ, ವಿಜಯೇಂದ್ರ ಅವರ ಬೆನ್ನು ತಟ್ಟಿದರು. ಬಳಿಕ ಬಿಎಸ್ವೈ ಪ್ರತ್ಯೇಕವಾಗಿ ಹೂಗುಚ್ಛ ನೀಡಿ ಅಮಿತ್ ಶಾ ಸ್ವಾಗತಿಸಿದರು. ಈ ಘಟನೆ ರಾಜಕೀಯ ವಲಯದಲ್ಲಿ ವಿಶೇಷವಾಗಿ ಚರ್ಚೆಯಾಗುತ್ತಿದೆ. ಬಿಎಸ್ ಯಡಿಯೂರಪ್ಪನವರು ರಾಜಕಾರಣದಿಂದ ದೂರ ಸರಿದಿದ್ದು ಚುನಾವಣೆಗ ಹಿನ್ನೆಲೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮಿತ್ ಶಾ ಅವರು B.S.ಯಡಿಯೂರಪ್ಪ ಅವರಿಂದ ಹೂಗುಚ್ಚ ಸ್ವೀಕರಿಸದೇ ಲಿಂಗಾಯತ ಸಮುಸದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಅಮಿತ್ ಶಾ ಹೂಗುಚ್ಛವನ್ನು ವಿಜಯೇಂದ್ರ ಅವರಿಂದ ಪಡೆದು ನಂತರ ಅವರ ಬೆನ್ನು ತಟ್ಟಿದ್ದಾರೆ. ಇದು B.S. ಯಡಿಯೂರಪ್ಪನವರಿಗೂ ಸಂತಸ ತರಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಅಮಿತ್ ಶಾ ಯಡಿಯೂರಪ್ಪನವರಿಗೆ ಅವಮಾನ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನರೇಂದ್ರ ಮೋದಿ ವಿಶ್ವದ 2ನೇ ಭ್ರಷ್ಟ ಪ್ರಧಾನಿಯೇ?

