ಫ್ಯಾಕ್ಟ್‌ಚೆಕ್ : ಸಂಬಂಧವಿಲ್ಲದ ವಿಡಿಯೋವನ್ನು ಸ್ವಾಮಿ ವಿವೇಕಾನಂದರದ್ದು ಎಂದು ತಪ್ಪಾಗಿ ಹಂಚಿಕೆ
ಸ್ವಾಮಿ ವಿವೇಕಾನಂದರ ಅಪರೂಪದ ವಿಡಿಯೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಸ್ವಾಮಿ ವಿವೇಕಾನಂದರು ಬದುಕಿದ್ದಾಗ ಸೆರೆಹಿಡಿಯಲಾದ ಅಪರೂಪದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಸ್ವಾಮಿ ವಿವೇಕಾನಂದ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದ ಮೂವಿಂಗ್ ಇಮೇಜ್ ರಿಸರ್ಚ್ ಕಲೆಕ್ಷನ್ಸ್ ವೆಬ್‌ಸೈಟ್ ಲಭ್ಯವಾಯಿತು. ಈ ವೆಬ್‌ಸೈಟ್ ಆರ್ಕೈವ್ ಮಾಡಲಾದ ಕ್ಲಿಪ್‌ಅನ್ನು ಒಳಗೊಂಡಿದೆ. ಈ ವೆಬ್‌ಸೈಟ್‌ನಲ್ಲಿ ಇರುವ ವಾಟರ್‌ಮಾರ್ಕ್ MIRC@SCEDU ಮತ್ತು ಲೋಗೋ ಥಂಬ್‌ನೇಲ್‌ನಲ್ಲಿ ಇರುವ ಟೈಟಲ್ ಎರಡೂ ಒಂದೇ ರೀತಿ ಇರುವುದನ್ನು ಕಾಣಬಹುದು.

ವೈರಲ್ ವಿಡಿಯೊದಲ್ಲಿ ಇರುವ MIRC@SCEDU ವಾಟರ್‌ಮಾರ್ಕ್ ಅನ್ನು ಸೂಕ್ತ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ ಮಾಹಿತಿ ಲಭ್ಯವಾಗಿದ್ದು, ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ನಡೆಯುತ್ತಿರುವ ವ್ಯಕ್ತಿ ಸ್ವಾಮಿ ಯೋಗಾನಂದ. ಅವರು ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದಾಗ ಚಿತ್ರೀಕರಿಸಿದ ವಿಡಿಯೋ ಎಂದು ಸ್ಪಷ್ಟವಾಗಿದೆ.

ಈ 48-ಸೆಕೆಂಡ್‌ಗಳ ವಿಡಿಯೊದಲ್ಲಿನ ತುಣುಕನ್ನು ಹೋಲಿಕೆ ಮಾಡಿ ನೋಡಿದಾಗ ವೈರಲ್ ವಿಡಿಯೊಗೆ ಹೊಂದಿಕೆಯಾಗುತ್ತದೆ. ವಿಡಿಯೊದ ವಿವರಣೆಯ ಪ್ರಕಾರ, ಈ ವಿಡಿಯೊದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ವ್ಯಕ್ತಿ ಸ್ವಾಮಿ ಯೋಗಾನಂದ, ಸ್ವಾಮಿ ವಿವೇಕಾನಂದ ಅಲ್ಲ. ಅವರು 1923 ರಲ್ಲಿ ನ್ಯೂಯಾರ್ಕ್ ನಗರ, USA ಗೆ ಭೇಟಿ ನೀಡಿದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊ ವಿವರಣೆಯಲ್ಲಿ ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನ್ಯೂಯಾರ್ಕ್ ನಗರದಲ್ಲಿ ಸ್ವಾಮಿ ಯೋಗಾನಂದ ಮತ್ತು ಅವರ ತಂಡ ವಾಕಿಂಗ್ ಮಾಡುತ್ತಿರುವ ಆರ್ಕೈವಲ್ ತುಣುಕನ್ನು ಸ್ವಾಮಿ ವಿವೇಕಾನಂದರು ಬದುಕಿದ್ದಾಗ ಸೆರೆಹಿಡಿಯಲಾದ ಅಪರೂಪದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮಾವಿನ ಹಣ್ಣು ತಿಂದು ತಕ್ಷಣವೇ ಕೂಲ್ ಡ್ರಿಂಕ್ಸ್ ಕುಡಿದರೆ ಸಾವು ಸಂಭವಿಸುವುದೇ?

