FACT CHECK | ನೇಪಾಳದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 24 ಭಾರತೀಯರನ್ನು ಬಂಧಿಸಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ
ನೇಪಾಳದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 24 ಭಾರತೀಯರನ್ನು ಬಂಧಿಸಲಾಗಿದೆ ಎಂದು ಹೇಳಿ ವಿಡಿಯೋ ಒಂದು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಬಳಕೆದಾರರು, ರಾಜಸ್ಥಾನದವರು ಭಾರತದ ಮಾನ ಕಳೆದಿದ್ದಾರೆ ಎಂದು ದೂರಿದ್ದಾರೆ.
विश्व भर में भारत का डंका बज रहा था कि, इसी बीच नेपाल में हमारे भारत के राजस्थानियों ने नाक कटा दी, साथ ही डंका बजने की पोल भी खोल दी… pic.twitter.com/SKi83wurZj
— Pratap Khuraw (@pratapkhuraw) February 14, 2025
pratapkhuraw ಎಂಬ ಎಕ್ಸ್ ಬಳಕೆದಾರರು ‘ಆಜ್ ತಕ್’ ನ ಈ ವರದಿಯನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ಅವರು, “ಪ್ರಪಂಚದಾದ್ಯಂತ ಭಾರತದ ಹೆಸರನ್ನು ಹೊಗಳುತ್ತಿರುವಾಗ ರಾಜಸ್ಥಾನದ ಜನರು ನೇಪಾಳದಲ್ಲಿ ಭಾರತಕ್ಕೆ ಅವಮಾನ ಉಂಟು ಮಾಡಿದ್ದಾರೆ. ಮತ್ತು ಹೊಗಳಿಕೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ,” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
विश्वगुरु देश के 24 नागरिक भीख मांगते मांगते पहुंचे थे नेपाल,पकड़े गए।#विश्वगुरु pic.twitter.com/50FYoi19Xo
— (@The_Roxx01) February 15, 2025
ಹೆಸರಿನ ಮತ್ತೊಂದು ಎಕ್ಸ್ ಖಾತೆಯಲ್ಲಿ, “ವಿಶ್ವಗುರು ದೇಶದ 24 ನಾಗರಿಕರು ಭಿಕ್ಷೆ ಬೇಡುತ್ತಾ ನೇಪಾಳಕ್ಕೆ ಹೋಗಿ ಸಿಕ್ಕಿಬಿದ್ದರು” ಎಂದು ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ. ಇದೇ ವಿಡಿಯೋವನ್ನೂ ಇನ್ನೂ ಹಲವರು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ‘ಆಜ್ ತಕ್’ ವಾಹಿನಿಯ ಲೋಗೋ ಇರುವುದರಿಂದ ಯೂಟ್ಯೂಬ್‌ನಲ್ಲಿ ಇದರ ಮೂಲ ವಿಡಿಯೋಗಾಗಿ ಸರ್ಚ್ ಮಾಡಿದಾಗ,ಆಜ್ ತಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ಮೂಲ ವಿಡಿಯೋ ಲಭ್ಯವಾಗಿದೆ. ಇದು 2023ರ ಆಗಸ್ಟ್‌ನ ವಿಡಿಯೋ ಎಂದು ತಿಳಿದು ಬಂದಿದೆ.
22 ಸೆಕೆಂಡುಗಳ ಈ ವಿಡಿಯೋದಲ್ಲಿ “ನಕಲಿ ದಾಖಲೆಗಳನ್ನು ಹೊಂದಿದ್ದ ಮತ್ತು ತಮ್ಮನ್ನು ನೈಸರ್ಗಿಕ ವಿಪತ್ತಿನ ಬಲಿಪಶುಗಳು ಎಂದು ಹೇಳಿಕೊಂಡ 12 ಅಪ್ರಾಪ್ತರು ಸೇರಿದಂತೆ 24 ಭಾರತೀಯ ಭಿಕ್ಷುಕರನ್ನು ನೇಪಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ” ಎಂದು ಹೇಳಲಾಗಿದೆ. ‘ರಿಪಬ್ಲಿಕ್ ಭಾರತ್‘ನಲ್ಲೂ ಈ ಸಂಬಂಧ ವರದಿ ಪ್ರಸಾರವಾಗಿದ್ದು, “ನೇಪಾಳದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 24 ಭಾರತೀಯರನ್ನು ವಾಪಸ್ ಕಳುಹಿಸಲಾಗಿದೆ,” ಎಂದು ಹೇಳಲಾಗಿದೆ. ‘ಇಂಡಿಯಾ ಟುಡೇ‘ಯಲ್ಲೂ ಈ ವರದಿ ಪ್ರಕಟವಾಗಿದ್ದು, ಅದರ ತುಣುಕು ಕೆಳಗಿದೆ.
ಈ ಮೂಲಕ 2023ರ ವಿಡಿಯೋವನ್ನು ಇದೀಗ ಮತ್ತೆ 2025ರಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಜನರ ದಾರಿ ತಪ್ಪಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದಲ್ಲಿ 24 ಭಾರತೀಯ ಭಿಕ್ಷುಕರನ್ನು ಬಂಧಿಸಲಾಗಿದೆ ಎನ್ನುವುದು ಒಂದು ವರ್ಷ ಹಳೆಯ 2023ರ ಸುದ್ದಿಯಾಗಿದ್ದು, ಅದನ್ನು ಪ್ರಸ್ತುತವಾಗಿ ನಡೆದಿದೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನದಲ್ಲಿ ಮುಸ್ಲಿಮರಿಂದಲೇ ಮಸೀದಿ ಮೇಲೆ ದಾಳಿ ನಡೆದಿದೆ ಎಂದು ಹಳೆಯ ವಿಡಿಯೋ ಹಂಚಿಕೆ

