ಕೊರೊನಾ ಸೋಂಕಿಗೆ ಒಳಪಡದ 15 ರಾಷ್ಟ್ರಗಳಾವುವು ಗೊತ್ತೇ? ಡಿಟೈಲ್ಸ್‌

ಇಡೀ ಜಗತ್ತು ಕೊರೊನಾ ವೈರಸ್‌ ದಾಳಿಗೆ ತುತ್ತಾಗುತ್ತಿದೆ.  ಕೋವಿಡ್ -19 ಸಾಂಕ್ರಾಮಿಕ ರೋಗವು ದಿನ ಕಳೆದಂತೆ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಂದೆವರೆದ ಬಲಾಢ್ಯ ರಾಷ್ಟ್ರಗಳೂ ಕೂಡ ಕೊರೊನಾ ವೈರಸ್‌ ದಾಳಿಯನ್ನು ಎದುರಿಸಲಾರದೆ ಎಣಗಾಡುತ್ತಿವೆ. ಜಗತ್ತಿನ ದೊಡ್ಡಣ್ಣ ಎಂದೆನಿಕೊಂಡಿರುವ ಅಮೆರಿಕಾ, ಕೊರೊನಾ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರಿಕ್ವೀನ್‌ ಬಳಸಬಹುದು ಎಂಬ ಚರ್ಚೆ ಆರಂಭವಾಗುತ್ತಿರುದ್ದಂತೆ ಭಾರತ 24 ಮೆಡಿಷನ್‌ಗಳ ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ರಫ್ತುಮಾಡುವಂತೆ ಬೆದರಿಕೆ ಹಾಕಿದೆ. ಕೊರೊನಾ ವೈರಸ್‌ ಇಷ್ಟೆಲ್ಲಾ ಸಂಕಷ್ಟವನ್ನು ಸೃಷ್ಟಿಸಿರುವಾಗಲೂ ಕೊವಿಡ್‌-19 ಸೋಂಕಿನ ಒಂದೂ ಪ್ರಕರಣಗಳನ್ನು ಹೊಂದಿರುದ ದೇಶಗಳು ನಮ್ಮ ನಡುವೆ ಇವೆ.

ರೋಗದ ಹರಡುವಿಕೆಯನ್ನು ರೂಪಿಸುವ ಮತ್ತು ರಿಯಲ್‌ ಟೈಮ್‌ ಡ್ಯಾಶ್‌ಬೋರ್ಡ್ ಮೂಲಕ ಡೇಟಾವನ್ನು ಕಲೆಹಾಕಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ)ವಿಭಾಗವು ಒಟ್ಟುಗೂಡಿಸಿದ ಮಾಹಿತಿಯ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾಗದೇ ಇರುವ 15 ದೇಶಗಳಿವೆ ಎಂದು ತಿಳಿದು ಬಂದಿದೆ. ಅವು ಏಷ್ಯಾ, ಆಫ್ರಿಕಾ ಮತ್ತು ಓಷಿಯಾನಿಯಾದಲ್ಲಿವೆ. ಒಂದೇ ನೆಲೆಯಲ್ಲಿ ವಾಸಿಸುವ ಜನರನ್ನೇ ಹೊಂದಿರದ, ಸದಾ ಒಂದೆಡೆಯಿಂದ ಮತ್ತೊಂಡೆಗೆ ವಲಸೆ ಹೋಗುವ ಜನರಿರುವ ಅಂಟಾರ್ಕ್ಟಿಕಾದಲ್ಲೂ ಸಹ ವೈರಸ್‌ ಕಾಣಿಸಿಕೊಂಡಿಲ್ಲ.

ಶೂನ್ಯ ಪ್ರಕರಣಗಳನ್ನು ವರದಿ ಮಾಡುವ ಕೆಲವು ದೇಶಗಳು ಓಷಿಯಾನಿಯಾದ ಭಾಗದಲ್ಲಿರುವ ಮೆಲನೇಷಿಯಾ, ಮೈಕ್ರೋನೇಷಿಯಾ ಮತ್ತು ಪಾಲಿನೇಷ್ಯಾಗಳಲ್ಲಿವೆ. ಅಲ್ಲದೆ, ಪ್ರಕರಣಗಳನ್ನು ವರದಿ ಮಾಡದ ಎರಡು ಆಫ್ರಿಕನ್ ದೇಶಗಳು ವೈರಸ್ ಹೊಂದಿಲ್ಲದಿರಬಹುದು ಅಥವಾ ಇನ್ನೂ ಅದನ್ನು ಪತ್ತೆ ಮಾಡಲು ಸಾಧ್ಯವಾಗದಿರಬಹುದು ಎಂದು ಅಂದಾಜಿಸಲಾಗಿದೆ. ಏಷ್ಯಾದಲ್ಲೂ ಒಂದೂ ಸೋಂಕು ಧೃಡಪಡದ ದೇಶಗಳನ್ನು ಗುರುತಿಸಲಾಗಿದೆ.

ಏಷ್ಯಾ

ಉತ್ತರ ಕೊರಿಯಾ: ನಿರಂಕುಶಾಧಿಕಾರಿ ಕಿಮ್ ಜೊಂಗ್-ಉನ್ ಆಳ್ವಿಕೆಯಲ್ಲಿರುವ ಕೊರಿಯಾವು ಶೂನ್ಯ ಪ್ರಕರಣಗಳನ್ನು ವರದಿ ಮಾಡಿದೆ. ಪ್ರಪಂಚದ ಇತರ ದೇಶಗಳೊಂದಿಗೆ ಹೆಚ್ಚಿನ ಸಂಪರ್ಕವನ್ನೂ, ವ್ಯವಹಾರಗಳನ್ನು ಹೊಂದದೆ ದೂರ ಉಳಿದಿರುವ ಉತ್ತರ ಕೊರಿಯಾವು ಪ್ರಪಂಚದಲ್ಲಿಯೇ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ಶ್ರೇಣಿಯನ್ನು ಹೊಂದಿದೆ.ಕೊರಿಯಾವು ಸರ್ಕಾರಿ ಪ್ರಾಯೋಜಿತ ಉಚಿತ ಆರೋಗ್ಯ ಸೇವೆಯನ್ನು ಹೊಂದಿದ್ದರೂ, ಕೋವಿಡ್ -19 ಅನ್ನು ಪರೀಕ್ಷಿಸುವ ವಿಧಾನವನ್ನು ಅದು ಹೊಂದಿರಲಿಲ್ಲ. ಜನವರಿಯಲ್ಲಿ ಚೀನಾದಿಂದ ಪರೀಕ್ಷಾ ಕಿಟ್‌ಗಳನ್ನು ಪಡೆದ ನಂತರ ಉತ್ತರ ಕೊರಿಯಾ ಸಕ್ರಿಯವಾಗಿ ಪರೀಕ್ಷಿಸುತ್ತಿದೆ. ಅಲ್ಲದೆ, 30 ದಿನಗಳ ಲಾಕ್‌ಡೌನ್‌ ವಿಧಿಸಿಕೊಂಡಿತ್ತು ಎಂದು WHO ವರದಿ ಮಾಡಿದೆ. ಉತ್ತರ ಕೊರಿಯಾದ ಪ್ರಜೆಗಳು ವಿಶೇಷವಾಗಿ ಉಸಿರಾಟದ ತೊಂದರೆಗೆ ಒಳಗಾಗುತ್ತಾರೆ. ಇದರಿಂದಾಗಿ ವಾರ್ಷಿಕವಾಗಿ ಶೇಕಡಾ 11 ಕ್ಕಿಂತ ಹೆಚ್ಚು ಸಾವುಗಳು ಉಸಿರಾಟ ತೊಂದೆಯಿಂದ ಸಂಭವಿಸುತ್ತವೆ. ಆದರೂ, ಉತ್ತರ ಕೊರಿಯಾದಲ್ಲಿ ಇದುವರೆಗೆ ಶೂನ್ಯ ಪ್ರಕರಣಗಳು ಇರುವುದು ಅಸಂಭವವೆಂದು ಹೆಚ್ಚಿನ ರಾಜಕೀಯ ಮತ್ತು ಆರೋಗ್ಯ ತಜ್ಞರು ಒಪ್ಪುತ್ತಾರೆ.

ತಜಕಿಸ್ತಾನ: ಇದು ಮಧ್ಯ ಏಷ್ಯಾದಲ್ಲಿದ್ದು ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಚೀನಾದ ಗಡಿಯಲ್ಲಿರುವ ಪರ್ವತಮಯ ದೇಶ. ಇದರ ಭೂಪ್ರದೇಶವು ಸುಮಾರು 90 ಪ್ರತಿಶತದಷ್ಟು ಪರ್ವತ ಪ್ರದೇಶವಾಗಿದೆ. ತಜಿಕಿಸ್ತಾನ್ ಆರಂಭದಲ್ಲಿ ಮಾರ್ಚ್‌ನಲ್ಲಿ ಸೋಂಕು ಪೀಡಿತ 35 ದೇಶಗಳ ಪ್ರಯಾಣಿಕರ ಪ್ರವೇಶವನ್ನು ನಿಷೇಧಿಸಿತ್ತು. ಆದರೆ ತಕ್ಷಣವೇ ಅದರ ನಿರ್ಬಂಧಗಳನ್ನು ಹಿಂತೆಗೆದುಕೊಂಡಿತು. ಆದಾಗ್ಯೂ, ಇದು ಬರುವ ಪ್ರಯಾಣಿಕರನ್ನು ಸಂಪರ್ಕತಡೆಗೆ ಒಳಪಡಿಸಿತು.ತಜಿಕಿಸ್ತಾನ್ ಸಾರ್ವಜನಿಕ ಕಾರ್ಯಕ್ರಮಗಳಿಗೆ ಯಾವುದೇ ಲಾಕ್ ಡೌನ್ ಅಥವಾ ನಿಷೇಧವನ್ನು ವಿಧಿಸಿಲ್ಲ.

 ತುರ್ಕಮೆನಿಸ್ತಾನ್: ಇದು ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿದ್ದು, ಕಜಕಿಸ್ತಾನ್, ಉಜ್ಬೇಕಿಸ್ತಾನ್, ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿದೆ. ಇದು ಏಷ್ಯಾದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಕೇವಲ 5.6 ಮಿಲಿಯನ್ ಇದರ ಜನಸಂಖ್ಯೆ. ತುರ್ಕಮೆನಿಸ್ತಾನ್ ಅತ್ಯಂತ ಕಳಪೆ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕೆಲವು ಸ್ಥಳಗಳಲ್ಲಿ ಚದುರಿದ ನಿರ್ಬಂಧಗಳನ್ನು ವಿಧಿಸಿದೆ. ಆದರೆ ರಾಷ್ಟ್ರೀಯವಾಗಿ ಯಾವ ನಿರ್ಬಂಧವನ್ನೂ ವಿಧಿಸಿಲ್ಲ. ಅಲ್ಲದೆ, ಕಳೆದ ವಾರ ವಿಶ್ವ ಆರೋಗ್ಯ ದಿನದಂದು ಸಾಮೂಹಿಕ ಸೈಕ್ಲಿಂಗ್ ರ್ಯಾಲಿಯನ್ನು ಸಹ ನಡೆಸಿತು.

 

ಆಫ್ರಿಕಾ 

ಕೊಮೊರೊಸ್: ಇದು ಒಂದು ದ್ವೀಪ ರಾಷ್ಟ್ರವಾಗಿದ್ದು, ಆಫ್ರಿಕಾದ ಖಂಡದ ಪೂರ್ವ ಕರಾವಳಿ ಮತ್ತು ದೊಡ್ಡ ದ್ವೀಪ ಮಡಗಾಸ್ಕರ್ ನಡುವೆ ಇದೆ. ವಿಶ್ವ ಆರೋಗ್ಯ ಸಂಸ್ಥೆ ಕೊಮೊರೊಸ್ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಜನವರಿಯಿಂದ ವೈರಸ್‌ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಹಂತದಲ್ಲಿ ಸುಮಾರು 250 ಜನರನ್ನು ಪ್ರತ್ಯೇಕಿಸಲಾಯಿತು, ಆದರೆ ಯಾರಿಗೂ ಸೋಂಕು ಧೃಡಪಟ್ಟಿಲ್ಲ. ದೇಶವು ಪ್ರಸ್ತುತ ಭಾಗಶಃ ಲಾಕ್‌ಡೌನ್ ಹಂತದಲ್ಲಿದೆ.

ಲೆಸೊಥೊ: ದಕ್ಷಿಣ ಆಫ್ರಿಕಾದೊಳಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿರುವ ದೇಶವಾಗಿದೆ. ಲೆಸೊಥೊ ಎತ್ತರದ ದೇಶ; ಇದು ಸಮುದ್ರ ಮಟ್ಟಕ್ಕಿಂತ 1,000 ಮೀ ಗಿಂತಲೂ ಹೆಚ್ಚು ಇರುವ ವಿಶ್ವದ ಏಕೈಕ ಪ್ರದೇಶವಾಗಿದೆ ಮತ್ತು ಅದರ ಕಡಿಮೆ ಬಿಂದು ಸಮುದ್ರ ಮಟ್ಟಕ್ಕಿಂತ 1,400 ಮೀ. ಏಪ್ರಿಲ್ 21 ರವರೆಗೆ ಲೆಸೊಥೊ ಲಾಕ್ ಡೌನ್ ಆಗಿದೆ. ಪ್ರಸ್ತುತ ವಿದೇಶದಲ್ಲಿರುವ ನಾಗರಿಕರಿಗೆ ಸ್ವದೇಶಕ್ಕೆ ಮರಳದಂತೆ ಇದು ಪ್ರೋತ್ಸಾಹಿಸುತ್ತಿದೆ.

 

ಓಷಿಯಾನಿಯಾ 

ಓಷಿಯಾನಿಯಾ ಪ್ರದೇಶದಲ್ಲಿ ಒಂದೂ ಕೋವಿಡ್-19 ಪ್ರಕರಣವಿಲ್ಲದ ಹತ್ತು ದೇಶಗಳಿವೆ. ಕಿರಿಬಾಟಿ, ತುವಾಲು, ಟೋಂಗಾ, ಸಮೋವಾ, ಮಾರ್ಷಲ್ ದ್ವೀಪಗಳು, ಸೊಲೊಮನ್ ದ್ವೀಪಗಳು, ನೌರು, ಪಲಾವ್, ವನವಾಟು ಮತ್ತು ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ. 

ಈ ಎಲ್ಲಾ ದ್ವೀಪ ರಾಷ್ಟ್ರಗಳು ವಿರಳ ಆರೋಗ್ಯ ಸೌಲಭ್ಯಗಳೊಂದಿಗೆ 7,00,000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ಆದ್ದರಿಂದ, ತಮ್ಮನ್ನು ರಕ್ಷಿಸಿಕೊಳ್ಳಲು ಶೀಘ್ರವಾಗಿ ಕಾರ್ಯನಿರ್ವಹಿಸಿತು. ಈ ದೇಶಗಳಲ್ಲಿ ಹೆಚ್ಚಿನವರು ಶೀಘ್ರವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಗಳನ್ನು ಘೋಷಿಸಿದರು.

ಈ ದ್ವೀಪಗಳಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಏಕಾಏಕಿ ಸಂಭವಿಸಿದಲ್ಲಿ, ಜನಸಂಖ್ಯೆಯ ಹೆಚ್ಚಿನ ಭಾಗವು ಅದಕ್ಕೆ ತುತ್ತಾಗುತ್ತಾರೆ. ಏಕೆಂದರೆ ಈ ದೇಶಗಳಲ್ಲಿಯೂ ಸಹ ಹೃದ್ರೋಗ, ಎದೆಯ ಪರಿಸ್ಥಿತಿಗಳು, ಮಧುಮೇಹ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಆದಾಗ್ಯೂ,ಈ ದ್ವೀಪಗಳು ಸಂಪೂರ್ಣ ಲಾಕ್‌ಡೌನ್‌ ವಿಧಿಸಿಕೊಳ್ಳಲುದ ಸಾಧ್ಯವಿಲ್ಲ. ಏಕೆಂದರೆ, ಇವುಗಳು ಹೆಚ್ಚು ಹೊರದೇಶಗಳ ಆಮದನ್ನು ಅವಲಂಬಿಸಿವೆ. ಆದರೂ ಈ ದೇಶಗಳಲ್ಲಿ ಇದೂ ವರೆಗೂ ಒಂದೂ ಕೊವಿಡ್‌-19 ಪ್ರಕರಣಗಳು ದೃಢಪಟ್ಟಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights