ಕೊರೊನ ಸಾಂಕ್ರಾಮಿಕ ಎರಡನೆ ವಿಶ್ವಯುದ್ಧದ ನಂತರ ಜಗತ್ತು ಎದುರುಸುತ್ತಿರುವ ಅತಿ ದೊಡ್ಡ ಸವಾಲು: ವಿಶ್ವಸಂಸ್ಥೆ ಮುಖ್ಯಸ್ಥ

ಕೊರೊನ ವೈರಸ್ ಸಾಂಕ್ರಾಮಿಕ ಎರಡನೆ ವಿಶ್ವಯುದ್ಧದ ನಂತರ ಜಗತ್ತು ಎದುರುಸುತ್ತಿರುವ ಅತಿ ದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಅಂಟೋನಿಯೊ ಗಟ್ಟೆರೇಸ್  ಮಂಗಳವಾರ ಹೇಳಿದ್ದಾರೆ. ಈ ಸಾಂಕ್ರಾಮಿದ ವಿರುದ್ಧ ಜಗತ್ತು ಇನ್ನೂ ಹೆಚ್ಚು ಬಲಶಾಲಿಯಾಗಿ ಹೋರಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಹಿಂದೆಂದೂ ಕಾಣದಂತಹ ಆರ್ಥಿಕ ಹಿಂಜರಿತವನ್ನು ಈ ಸಾಂಕ್ರಾಮಿಕ ತಂದೊಡ್ಡಲಿದೆ ಎಂಡು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ನಡೆದ ಅಧ್ಯಯನದ ಪ್ರಕಾರ ಜಾಗತಿಕ ಗಳಿಕೆಯಲ್ಲಿ ಈ ವರ್ಷ ಸುಮಾರು ಟ್ರಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆರ್ಥಿಕ ಹಿಂಜರಿತದಿಂದ ಭಾರತ ಮತ್ತು ಚೈನಾ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂಡು ಕೂಡ ತಿಳಿಸಿತ್ತು.

“75 ವರ್ಷಗಳ ವಿಶ್ವಸಂಸ್ಥೆಯ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಜಾಗತಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಒಂದು ಕಡೆ ಸಾಂಕ್ರಾಮಿಕ ಜನರನ್ನು ಕೊಲ್ಲುತ್ತಿದೆ, ಜನರ ನೋವನ್ನು ಹರಡುತ್ತಿದೆ. ಇದು ಆರೋಗ್ಯ ಬಿಕ್ಕಟ್ಟನ್ನು ಮೀರಿ ಮಾನವ ಬಿಕ್ಕಟ್ಟಾಗಿದೆ. ಕೊರೊನ ವೈರಸ್ ಸಾಂಕ್ರಾಮಿಕ ಸಮಾಜಗಳನ್ನು ಬುಡಮೇಲು ಮಾಡುತ್ತಿದೆ” ಎಂದು ಅಧ್ಯಯನದ ವರದಿ ದಾಖಲಿಸಿತ್ತು.

ಮುಂದುವರೆದ ದೇಶಗಳು ಈ ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕೆ ಇತರ ದೇಶಗಳಿಗೆ ಸಹಕಾರ ನೀಡಬೇಕು ಎಂದು ಕೂಡ ಅಂಟೋನಿಯೊ ಗಟ್ಟೆರೇಸ್ ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮಾನುಯೇಲ್ ಮಾಕ್ರೋನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಜರ್ಮನಿ ಚಾನ್ಸೆಲರ್ ಎಂಜೆಲಾ ಮೆರ್ಕೆಲ್, ಆಫ್ರಿಕಾ ಈ ಸಾಂಕ್ರಾಮಿಕದ ವಿರುದ್ಧ ಹೋರಾಡಲು ನೆರವು ನೀಡುವುದಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿರುವ ಆವರು ಈ ಕಾರ್ಯ ತುರ್ತಾಗಿ ಆಗಬೇಕಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights