ಸಕ್ಕರೆನಾಡು ಮಂಡ್ಯಕ್ಕೂ ಅಂಟಿದ ಆಣೆ ಪ್ರಮಾಣದ ನಂಟು : hdk ಯನ್ನೆ ಆಣೆ ಪ್ರಮಾಣಕ್ಕೆ‌ ಕರೆದ ಅನರ್ಹ ಶಾಸಕ

ಇತ್ತೀಚೆಗಷ್ಟೆ ಸಾಂಸ್ಕೃತಿಕ ನಗರಿ ಮೈಸೂರನಲ್ಲಿ‌ ಮಾಜಿ ಸಚಿವರಿಬ್ಬರ ಆಣೆ ಪ್ರಮಾಣ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇದೀಗ ಈ ಆಣೆ ಪ್ರಮಾಣ ಪ್ರಕರಣ  ಪಕ್ಕದ ಸಕ್ಕರೆನಾಡು ಮಂಡ್ಯಕ್ಕೂ ವ್ಯಾಪಿಸಿದಂತೆ ಕಾಣ್ತಿದೆ. ಮಾಜಿ ಸಿ.ಎಂ.Hdk ಯನ್ನೇ ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಅನರ್ಹ ಶಾಸಕರೊಬ್ಬರು ಬರುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ.

ಹೌದು ಇತ್ತೀಚೆಗಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಜಿ ಸಚಿವರಾದ ಸಾರಾ‌ ಮಹೇಶ್ ಮತ್ತು ಎಚ್. ವಿಶ್ವನಾಥ್ ಚಾಮುಂಡಿ ಸನ್ನಿದಿಯಲ್ಲಿ ಆಣೆ ಪ್ರಮಾಣದ ಪ್ರಹಸನ ನಡೆದಿತ್ತು. ಇದರ ಬೆನ್ನೆಲ್ಲೆ ಸಕ್ಕರೆನಾಡು ಮಂಡ್ಯಕ್ಕೂ ಈ ಆಣೆ ಪ್ರಮಾಣದ ನಂಟು ವ್ಯಾಪಿಸಿದಂತಿದ್ದು, ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಮಾಜಿ ಸಿ.ಎಂ. Hdk ಯನ್ನು‌ ಬಹಿರಂಗ ವೇದಿಕೆಯಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿಯಲ್ಲಿ‌ ನಡೆದ ಅಭಿಮಾನಿ ಬೆಂಬಲಿಗರ ಸಭೆಯಲ್ಲಿ ತಮ್ಮ‌ ಕ್ಷೇತ್ರಕ್ಕೆ ೭೦೦ ಕೋಟಿ ಅನುದಾನ ನೀಡಿರೋ ಸುಳ್ಳು ಹೇಳಿಕೆ ನೀಡಿರೋ ಮಾಜಿ ಮುಖ್ಯಮಂತ್ರಿಗಳು ಧರ್ಮಸ್ಥಳಕ್ಕೆ ಬಂದು ಆಣೆ ಮಾಡ್ಲಿ ಎಂದು ಆಹ್ವಾನವಿತ್ತಿದ್ದಾರೆ.

ಇನ್ನು ಅನರ್ಹ ಶಾಸಕ ನಾರಾಯಣಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕುಮಾರಸ್ವಾಮಿ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿ ದೇವೇಗೌಡ್ರ ಕುಟುಂಬಕ್ಕೆ ಮಂಡ್ಯ ಜಿಲ್ಲೆ ಅಭಿವೃದ್ದಿ ಬೇಕಿಲ್ಲ‌.ಅವ್ರಿಗೆ ಇದು ವೋಟಿಂಗ್ ಮಿಷನ್ ಅಗಿದೆ ಅಂದು. ಒಂದು ಶಾಲಾ ಕಾಂಓಡ್ ಗೂ ಅನುದಾನ ಕೊಟ್ಟಿಲ್ಲವೆಂದು ಆಣೆ ಮಾಡ್ಲಿ ಅಂದಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೋ ಪಕ್ಕದ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ಆಣೆ ಪ್ರಮಾಣಕ್ಕೆ ಆತ್ಮಸಾಕ್ಷಿಗಿಂತ ಬೇರೋಬ್ಬ ದೇವೇರು ಬೇಕಿಲ್ಲ‌.ಮೇಲಿರೋ ಆ ದೇವರು ಎಲ್ಲಾ ನೋಡ್ಕೋತ್ತಾನೆ. ಯಾರ್ ಏನ್ ಮಾಡಿದ್ದಾರೆ.ಯಾರ್ ಕರ್ಮ ಮಾಡಿದ್ದಾರೆ ಅದಕ್ಕೆ ಈ ಜನ್ಮದಲ್ಲೆ ಶಿಕ್ಷೆ ಕೊಡ್ತಾನೆ ಅಂತಾ‌ ತಿರುಗೇಟು ನೀಡಿದ್ರು.

ಒಟ್ಟಾರೆ ಜೆಡಿಎಸ್ ನ ಅನರ್ಹ ಶಾಸಕರು ದಿನೇ ದಿನೇ‌ ಮಾತೃಪಕ್ಷದ ನಾಯಕರ ಮೇಲೆ ಮುಗಿ ಬೀಳ್ತಿದ್ದು,ಆಣೆ ಪ್ರಮಾಣಕ್ಕೆ ಕರೆದು ತಪ್ಪಿಗೆ ಸಿಕ್ಕಿಸುವ ಪ್ರಯತ್ನ‌ ಮಾಡ್ತಿದ್ದಾರೆ. ಈ ಆಣೆ ಪ್ರಮಾಣ ಮತ್ತೆಲ್ಲಿ ಹೋಗಿ ನಿಲ್ಲುತ್ತೋ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights