ಜಲಾಶಯ ಯೋಜನೆ: ಪರಿಹಾರವೂ ಇಲ್ಲದೆ ಹಳ್ಳಿ ತೊರೆಯುವಂತೆ ಜನರ ಮೇಲೆ ಅಧಿಕಾರಗಳ ದೌರ್ಜನ್ಯ

ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಗಂಡಿಕೋಟ ಜಲಾಶಯದ ಎರಡನೇ ಹಂತದ ಯೋಜನೆಗಾಗಿ ನಮ್ಮನ್ನು ಬಲವಂತವಾಗಿ ಹಳ್ಳಿಯಿಂದ ಹೊರಹಾಕಲಾಗುತ್ತಿದೆ. ನಮಗೆ ಪರಿಹಾರ ಹಾಗೂ ಪುನರ್ವಸತಿಯನ್ನೂ ಕೂಡ ಒದಗಿಸಿಲ್ಲ ಎಂದು ತಲ್ಲಾಪ್ರೊದ್ದತ್ತೂರು ಗ್ರಾಮದ ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

ಕೃಷ್ಣಾ ನದಿನೀರನ್ನು ಪೆನ್ನಾ ನದಿ ಜಲಾನಯನ ಪ್ರದೇಶಕ್ಕೆ ಎರಡು ಹಂತಗಳಲ್ಲಿ ಪೂರೈಸುವ ಉದ್ದೇಶದಿಂದ  ಎರಡನೇ ಹಂತದ ಯೋಜನೆಯನ್ನು ಕೈಗೊಂಡಿದ್ದು, ತಲ್ಲಾಪ್ರೊದ್ದತ್ತೂರು ಗ್ರಾಮದ ಸುಮಾರು 2000 ಕ್ಕೂ ಹೆಚ್ಚು ಕುಟುಂಬಗಳಿಗೆ ಪುನರ್ವಸತಿಯನ್ನೂ ನೀಡದೆ ಬಲವಂತದಿಂದ ಹೊರಹಾಕುವ ಪ್ರಯತ್ನ ನಡೆಯುತ್ತಿದ್ದು, ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ ಗ್ರಾಮದ ಜನರು ಹೋರಾಟ ಮಾಡುದ್ದಾರೆ.

ಸರ್ಕಾರವು ಈ ಯೋಜನೆಯ ಮೂಲಕ ಜಲಾಶಯದ ಸಾಮರ್ಥ್ಯವನ್ನು 22 ಟಿಎಂಸಿ ಮೀಟರ್‌ಗೆ ಹೆಚ್ಚಿಸಿದ್ದರಿಂದ, ಕಡಪ ಜಿಲ್ಲೆಯ ಚಾಮಲೂರು, ಯೆರ್ರಗುಡಿ ಮತ್ತು ತಲ್ಲಾಪ್ರೊದ್ದತ್ತೂರು ಗ್ರಾಮಗಳು ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಮುಳುಗುತ್ತವೆ. ಹಾಗಾಗಿ ಅವರನ್ನು ಸ್ಥಳಾಂತರಗೊಳಿಸಲಾಗುತ್ತಿದೆ.

ಸ್ಥಳಾಂತರಗೊಳ್ಳುತ್ತಿರುವ 1300 ಕುಟುಂಬಗಳ ಪೈಕಿ, ಈ ​​ಗ್ರಾಮಗಳಲ್ಲಿ 3500 ಜನರಿಗೆ ಪುನರ್ವಸತಿ ಪರಿಹಾರ ತಲುಪಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅವರನ್ನು ಹೊರಹಾಕಲು ಕಂದಾಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗ್ರಾಮಸ್ಥರು ಸಂಪೂರ್ಣ ಪುನರ್ವಸತಿ ಪಡೆದ ನಂತರವೇ ಹೊರಡುವುದಾಗಿ ಹೇಳುತ್ತಿದ್ದಾರೆ. ಈ ಯೋಜನೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ ಎಂದು ಉಲ್ಲೇಖಿಸಿ ಗ್ರಾಮಸ್ಥರನ್ನು ಸ್ಥಳಾಂತರಿಸಲು ಪೊಲೀಸ್ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

ನಮ್ಮನ್ನು ಸ್ಥಳಾಂತರಿಸಲು ಸೂಚನೆ ನೀಡದೇ, ತಕ್ಷಣದ ನೋಟೀಸ್ ಹೊರಡಿಸಿ, ಈಗಲೇ ಹೊರಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಮಗೆ ಕಾಲಾವಕಾಶವೇ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅದಾಗ್ಯೂ, ತಮಗೆ ಪುನರ್ವಸತಿ ಕಲ್ಪಿಸಿರುವ ಜೋಗುಲಾಪುರಂ ಬಳಿಯ 100 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿರ್ಮಾಣ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್‌ ವರದಿ ಮಾಡಿದೆ.

Decision to reduce Gandikota dam water level fails to pacify villagers- The New Indian Express

ಹಳ್ಳಿಯಲ್ಲಿ ಪ್ರತಿಭಟನೆಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಕೆಲವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಾಜೇಶ್ ಎಂಬ ಗ್ರಾಮಸ್ಥ, “ಗ್ರಾಮದಲ್ಲಿ 400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಂದಾಯ ಅಧಿಕಾರಿಗಳು ನಮ್ಮನ್ನು ಬಲವಂತವಾಗಿ ಹೊರಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದರು. ರಾಜೇಶ್ ಅವರನ್ನು ಅಕ್ಟೋಬರ್ 15 ರೊಳಗೆ ಖಾಲಿ ಮಾಡುವಂತೆ ಕೋರಲಾಗಿದೆ.

ಇದನ್ನೂ ಓದಿ: ಭೂಸ್ವಾಧೀನಕ್ಕಾಗಿ ದಲಿತ ಕುಟುಂಬದ ಮೇಲೆ ಅಧಿಕಾರ ದೌರ್ಜನ್ಯ; ಜಿಲ್ಲಾಧಿಕಾರಿ, ಎಸ್‌ಪಿ ಅಮಾನತು

“ಇಲ್ಲಿಯವರೆಗೆ ಕೇವಲ 700 ಘಟಕಗಳಿಗೆ ಮಾತ್ರ (ಪರಿಹಾರಕ್ಕೆ ಅರ್ಹರಾದ ವಯಸ್ಕರಿಗೆ)  ಆರ್‌ & ಆರ್‌ ಪ್ಯಾಕೇಜ್ (Rehabilitation and Resettlement package) ಅಡಿಯಲ್ಲಿ ಪರಿಹಾರ ದೊರೆತಿದೆ. ಪರ್ಯಾಯ ವಸತಿ ಸೌಲಭ್ಯವಿಲ್ಲದ ಜನರು ಎಲ್ಲಿರಬೇಕು? ಪುನರ್ವಸತಿ ಕಾಲೋನಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ 2013 ರ ಪ್ರಕಾರ ನಮ್ಮ ಪರಿಹಾರ ಮತ್ತು ಪುನರ್ವಸತಿಯನ್ನು ಸರ್ಕಾರ ಇತ್ಯರ್ಥಪಡಿಸಬೇಕೆಂದು ನಾವು ಬಯಸುತ್ತೇವೆ. ಆಗ ಮಾತ್ರ ನಾವು ಈ ಸ್ಥಳವನ್ನು ಬಿಡುತ್ತೇವೆ” ಎಂದು ಗ್ರಾಮಸ್ತರು ಹೇಳುತ್ತಾರೆ.

7000 ಕ್ಕೂ ಹೆಚ್ಚು ಜನರಿರುವ ಗ್ರಾಮದಲ್ಲಿ 1300 ಕುಟುಂಬಗಳಿವೆ. ಇಲ್ಲಿ ವಾಸಿಸುವ 400 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳಲ್ಲಿ, 30% ಕುಟುಂಬಗಳಿಗೂ ಸಹ ಪುನರ್ವಸತಿಗಾಗಿ ಪರಿಹಾರವನ್ನು ನೀಡಲಾಗಿಲ್ಲ.

“ಗ್ರಾಮದಲ್ಲಿ ಎಲ್ಲವೂ ಸರಿಯಾಗಿದೆ. ಯಾವುದೇ ಬಂಧನಗಳನ್ನು ಮಾಡಿಲ್ಲ. ಯಾವುದೇ ಪ್ರಕರಣಗಳು ದಾಖಲಾಗಿಲ್ಲ, ಎಲ್ಲವೂ ಶಾಂತಿಯುತವಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ.ಕೆ.ಅನ್ಬುರಾಜನ್ ಹೇಳಿದ್ದರೆ. ಪುನರ್ವಸತಿಗೆ ಸಂಬಂಧಿಸಿದ ವಿಷಯಗಳು ಜಿಲ್ಲಾಧಿಕಾರಿಯ ವ್ಯಾಪ್ತಿಯಲ್ಲಿದೆ ಎಂದೂ ಹೇಳಿದರು.

ಮಾನವ ಹಕ್ಕುಗಳ ವೇದಿಕೆಯ(ಎಚ್‌ಆರ್‌ಎಫ್) ಜಯಶ್ರೀ ಕಾಕುಮಣಿ, ಆದಾಯ ಮತ್ತು ಪೊಲೀಸ್ ಅಧಿಕಾರಿಗಳ ಈ ವರ್ತನೆಯನ್ನು  ಖಂಡಿಸಿ,”ವೈಎಸ್‌ಆರ್‌ಸಿಪಿ ಸರ್ಕಾರವು ನ್ಯಾಯದ ಭರವಸೆಯನ್ನು ಕಿತ್ತುಕೊಂಡಿದೆ. ಆದರೆ ಈಗ ಅದೇ ಗ್ರಾಮಸ್ಥರು ನ್ಯಾಯಯುತ ಪರಿಹಾರಕ್ಕಾಗಿ ಒತ್ತಾಯಿಸಿದಾಗ ಅವರನ್ನು ಮೌನಗೊಳಿಸುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: ಕಂಗನಾ ರಣಾವತ್ ಕಚೇರಿ ನೆಲಸಮ; ಮಹಾರಾಷ್ಟ್ರ ಸರ್ಕಾರವನ್ನು ಬಾಬರ್ ಸೈನ್ಯ ಎಂದ ನಟಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights