350 ಇಟಾಲಿಯನ್ ನೃತ್ಯಗಾರರೊಂದಿಗೆ ಡ್ಯಾನ್ಸ್ ಮಾಡಲಿರುವ ಬಾಹುಬಲಿ..!
ದಿ ಜಿಲ್ ಫೇಮ್ ರಾಧಾ ಕೃಷ್ಣ ಕುಮಾರ್ ಸಂಯೋಜಿಸುತ್ತಿರುವ ರೊಮ್ಯಾಂಟಿಕ್ ಚಿತ್ರ ರಾಧೆ ಶ್ಯಾಮ್ ಚಿತ್ರೀಕರಣ ಪ್ರಾರಂಭವಾಗಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಮೊದಲು ತಯಾರಕರು ಇಟಲಿಯಲ್ಲಿ ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಬಯಸಿದ್ದರು. ಆದರೆ ಯುಕೆಯಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ತಯಾರಕರು ಈ ವಿಚಾರವನ್ನು ಕೈಬಿಟ್ಟರು.
ಇಟಲಿಯ ಭಾಗವನ್ನು ಹೈದರಾಬಾದ್ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದರು. ಆರಂಭದಲ್ಲಿ ತಯಾರಕರು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರಿರುವ ಹಾಡನ್ನು ಇಟಲಿಯ ಚಿತ್ರೀಕರಿಸಲು ಯೋಚಿದ್ದರು. ಆದರೆ ಈಗ ಈ ಹಾಡನ್ನು ಹೈದರಾಬಾದ್ನಲ್ಲಿ ಸಿದ್ಧಪಡಿಸಲಾಗುತ್ತದೆ.
ಇಲ್ಲಿ 350 ಇಟಾಲಿಯನ್ ನರ್ತಕರು ಹೈದರಾಬಾದ್ಗೆ ಹೋಗಿ ಪ್ರಭಾಸ್ ಅವರೊಂದಿಗೆ ಸಾಂಗ್ ಶೂಟ್ನಲ್ಲಿ ಭಾಗವಹಿಸಿರುವುದು ಗಮನಾರ್ಹ. ಅನ್ನಪೂರ್ಣ ಏಳು ಎಕರೆ ಸ್ಟುಡಿಯೋದಲ್ಲಿ ವಿಶೇಷ ಸೆಟ್ ನಿರ್ಮಿಸಲಾಗಿದ್ದು, ಈ ಹಾಡನ್ನು ಇಟಾಲಿಯನ್ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ರಾಧೆ ಶ್ಯಾಮ್ ಚಿತ್ರ ಯುರೋಪಿಯನ್ನ ಒಂದು ಅವಧಿಯ ಪ್ರೇಮಕಥೆ. ಪ್ರಿಯದರ್ಶಿನಿ, ಭಾಗ್ಯಶ್ರೀ, ಸಚಿನ್ ಖೇಡೇಕರ್, ಮುರಳಿ ಶರ್ಮಾ ಮತ್ತು ಸತ್ಯ ಶಿವಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.