ಆಫ್ಘನ್ ನಲ್ಲಿ 150ಕ್ಕೂ ಹೆಚ್ಚು ಭಾರತೀಯರನ್ನು ಅಪಹರಿಸಿದ ತಾಲಿಬಾನಿಗಳು..!

ಆಫ್ಘನ್ ನಲ್ಲಿ 150ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಬೆಳವಣಿಗೆಯನ್ನು ದೃಢೀಕರಿಸಲು ವಿದೇಶಾಂಗ ಸಚಿವಾಲಯ ಪ್ರಯತ್ನಿಸುತ್ತಿದ್ದು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತೀಯ ವಾಯುಪಡೆಯ ಸಿ -130 ಜೆ ಸಾರಿಗೆ ವಿಮಾನ ಕಾಬೂಲ್‌ನಿಂದ ಸುಮಾರು 85 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದ ಕೆಲವು ಗಂಟೆಗಳ ನಂತರ ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.

ಭಾರತ ಎಲ್ಲಾ ರಾಯಭಾರ ಸಿಬ್ಬಂದಿಯನ್ನು ಕಾಬೂಲ್ ನಿಂದ ಸ್ಥಳಾಂತರಿಸಿದೆ. ಮೂಲಗಳು ಹೇಳುವಂತೆ ಸರ್ಕಾರ ಸಾಧ್ಯವಾದಷ್ಟು ಹೆಚ್ಚೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಕರೆತರಲು ಪ್ರಯತ್ನಿಸುತ್ತಿದೆ. ಆದರೆ ಅಂದಾಜು 1,000 ನಾಗರೀಕರು ಆಫ್ಘನ್ ಸ್ತಾನದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ. ಅವರ ಸ್ಥಳ ಮತ್ತು ಇರುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಗೃಹ ಸಚಿವಾಲಯದ ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇವರಲ್ಲಿ ಸುಮಾರು 200 ಸಿಖ್ಖರು ಮತ್ತು ಹಿಂದೂಗಳು ಕಾಬೂಲ್‌ನ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಕಾಬೂಲ್ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ ನಂತರ ತಾಲಿಬಾನ್ ಉಗ್ರರು ಆಫ್ಘನ್ ನನ್ನು ವಶಪಡಿಸಿಕೊಂಡಿದೆ. ರಾಜಧಾನಿ ಕಾಬೂಲ್‌ಗೆ ಕಾಲಿಟ್ಟು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದರಿಂದಾಗಿ ಆಫ್ಘನ್ ತೊರೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

ಎರಡು ದಶಕಗಳ ಹಿಂದೆ ತನ್ನ ಕ್ರೂರ ಮತ್ತು ದಬ್ಬಾಳಿಕೆಯ ಆಳ್ವಿಕೆಗೆ ಹೆದರುತ್ತಿದ್ದ ಸ್ಥಳೀಯರಿಗೆ ತಾಲಿಬಾನಿಗಳು ಶಿಕ್ಷಣ ಮತ್ತು ಕೆಲಸ ಸೇರಿದಂತೆ ಮಹಿಳೆಯರಿಗೆ ಮೂಲಭೂತ ಹಕ್ಕುಗಳು ನೀಡುವಂತೆ ಭರವಸೆ ನೀಡಿತ್ತು. ಜೊತೆಗೆ ಮಾಧ್ಯಮಗಳು ಸ್ವತಂತ್ರ ಮತ್ತು ಮುಕ್ತವಾಗಿರುತ್ತವೆ ಎಂದು ಹೇಳಿಕೊಂಡಿತ್ತು. ಆದರೀಗ ಅದೆಲ್ಲವೂ ಉಲ್ಟವಾಗಿದೆ. ಕಂಡ ಕಂಡಲ್ಲಿ ಗುಂಡು ಹಾರಿಸುವ ಮೂಲಕ ಹಿಂಸಾತ್ಮಕ ಪ್ರೌವೃತ್ತಿಯನ್ನು ತಾಲಿಬಾನಿಗಳು ಮೆರೆಯುತ್ತಿದ್ದಾರೆ. ಅಫಘಾನ್ ಮಹಿಳಾ ಪತ್ರಕರ್ತೆಯನ್ನು ಕೆಲಸದಿಂದ ತೆಗೆದುಹಾಲಾಗಿದೆ. ಪತ್ರಕರ್ತನ ಸಂಬಂಧಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights