ಫ್ಯಾಕ್ಟ್‌ಚೆಕ್ : ಶಾಲಾ ಮಕ್ಕಳ ಅಪಹರಣ ಎಂದು ಸ್ಕ್ರಿಪ್ಟೆಡ್ ವಿಡಿಯೊ ಹಂಚಿಕೆ

ಶಾಲಾ ಮಕ್ಕಳನ್ನು ಅಪಹರಣ ಮಾಡಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಂದು ತಂಡವು ಮಕ್ಕಳನ್ನು ಅಪಹರಿಸಿ ಅವರ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡುವುದರಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. “ಶಾಲೆಯ ಮಕ್ಕಳನ್ನು ಹಿಡಿದುಕೊಂಡು ಹೋಗಿ ಅವರ ಅಂಗಾಂಗಳನ್ನು ತೆಗೆದುಕೊಂಡು ಮಾರಾಟ ಮಾಡುವ ಜಾಲಾ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಶಾಲಾ ಮಕ್ಕಳನ್ನು ಅಪಹರಣ ಮಾಡತ್ತಿದ್ದಾರೆ ಎನ್ನಲಾದ ವೈರಲ್ ವಿಡಿಯೊವನ್ನು ಪರಿಶೀಲಿಸುವಂತೆ  ಏನ್ ಸುದ್ದಿ.ಕಾಂ ವಾಟ್ಸಾಪ್ ಸಂಖ್ಯೆಗೂ ಸಂದೇಶಗಳು ಬಂದಿವೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಮಕ್ಕಳ ಅಪಹರಣದ ಮೇಲಿನ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ವಿಡಿಯೊವನ್ನು ಸ್ಕ್ರಿಪ್ಟ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಿಡಿಯೊವನ್ನು ಜಾಗೃತಿ ಮೂಡಿಸಲು ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಡಿಕ್ಲೈಮ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳು ಅಭಿನಯಿಸಿದ್ದಾರೆ ಎಂದು ಹೇಳಲಾಗಿದೆ.

ವೀಡಿಯೊದ 1:28 ನಿಮಿಷಗಳಲ್ಲಿದ್ದು, ಈ ವೀಡಿಯೊ ಸಂಪೂರ್ಣ ಕಾಲ್ಪನಿಕವಾಗಿದೆ, ವೀಡಿಯೊದಲ್ಲಿನ ಎಲ್ಲಾ ಈವೆಂಟ್‌ಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾಡಲಾಗಿದೆ, ಇದು ಯಾವುದೇ ರೀತಿಯ ನೈಜ ಅಥವಾ ಪ್ರಾಣಹಾನಿಯನ್ನು ಘಟನೆಯನ್ನು ಉತ್ತೇಜಿಸುವುದಿಲ್ಲ. ಈ ವಿಡಿಯೋಗೂ ನೈಜ ಘಟನೆಗೂ ಯಾವುದೇ ಸಂಬಂಧವಿಲ್ಲ.

ಈ ಹಿಂದೆಯೂ, ಏನ್‌ ಸುದ್ದಿ.ಕಾಂ ನೈಜ ಘಟನೆಗಳೆಂದು ಹಂಚಿಕೊಳ್ಳಲಾಗುತ್ತಿರುವ ಇದೇ ರೀತಿಯ ಸ್ಕ್ರಿಪ್ಟ್ ವೀಡಿಯೊಗಳನ್ನು ಪರಿಶೀಲಿಸಿ ಫ್ಯಾಕ್ಟ್‌ಚೆಕ್ ಮಾಡಲಾಗಿದೆ. ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಿ. ಒಟ್ಟಾರೆಯಾಗಿ ಹೇಳುವುದಾದರೆ ಸ್ಕ್ರಿಪ್ಟ್‌ ಮಾಡಲಾದ ವಿಡಿಯೋವನ್ನು ನಿಜ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ ನಿಮ್ಮ ವಾಟ್ಸಾಪ್‌ಗೂ ಇದೇ ರೀತಿ ವಿಡಿಯೊ ಬಂದಿದ್ದರೆ ಅದನ್ನು ಇತರರಿಗೆ ಹಂಚುವ ಮೊದಲು ಪರಿಶೀಲಿಸಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ತೀಸ್ತಾ ಸೆಟಲ್ವಾಡ್ ಪೊಲೀಸರಿಗೆ ಉಗುಳಿಲ್ಲ !


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights