ಫ್ಯಾಕ್ಟ್‌ಚೆಕ್ : ಆಟೋ-ರಿಕ್ಷಾದಲ್ಲಿ ಮದ್ಯದ ಬೆಲೆಗಳ ಪ್ರಚಾರ ಮಾಡುತ್ತಿರುವ ವಿಡಿಯೋ ದೆಹಲಿಯದಲ್ಲ!

ಆಟೋ ರಿಕ್ಷಾದಲ್ಲಿ ಮದ್ಯದ ದರವನ್ನು ಪ್ರಚಾರ ಮಾಡುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊವನ್ನು ದೆಹಲಿಯ ಆಮ್‌ ಆದ್ಮಿ ಕೇಜ್ರಿವಾಲ್ ಸರ್ಕಾರ ಮಾಡಿದೆ ಎನ್ನುವ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ ಕೆಲವರು ಇದನ್ನು ಪಂಜಾಬ್‌ ನದ್ದು ಎಂದು ಹೇಳಿದ್ದಾರೆ. ಎರಡೂ ಕಡೆ AAP ಸರ್ಕಾರವನ್ನು ಟೀಕಿಸುವ ಹಿನ್ನಲೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೊದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೀಡಿಯೊದಲ್ಲಿ ಇ-ರಿಕ್ಷಾದ ಮೇಲಿರುವ ಧ್ವನಿವರ್ಧಕವನ್ನು ತೋರಿಸುತ್ತದೆ. ಅದರಲ್ಲಿ ಭಾರತ ಮತ್ತು ವಿದೇಶಿ ಬ್ರಾಂಡ್‌ಗಳ ಆಲ್ಕೋಹಾಲ್‌ಗಳಿಗೆ ಸಂಬಂಧಿಸಿದಂತೆ  ಬೆಲೆಗಳ ಪಟ್ಟಿಯನ್ನು  ಪ್ರಚಾರ ಮಾಡುತ್ತಿರುವುದು ಸೆರೆಯಾಗಿದೆ. ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರವು ನವೆಂಬರ್ 2021 ರಂದು ಮದ್ಯದ ವ್ಯಾಪಾರವನ್ನು ನಿಷೇದಿಸುವುದಾಗಿ ಘೋಷಿಸಿದ ನಂತರ, ಖಾಸಗಿ ಒಡೆತನದ ಅಂಗಡಿಗಳಿಗೆ ದಾರಿ ಮಾಡಿಕೊಡಲು ದೆಹಲಿಯಲ್ಲಿ ಹೀಗೆ ಮಾಡಲಾಗಿದೆ ಎಂದು ಹೇಳಿಕೊಂಡು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಕೆಲವು ಬಳಕೆದಾರರು ಈ ವಿಡಿಯೊವನ್ನು ಪಂಜಾಬ್‌ನಿಂದ ಬಂದಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಒಂದೇ ರೀತಿಯ ಪ್ರತಿಪಾದನೆ ಹೊಂದಿರುವ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ,  ಸಾಮಾಜಿಕ ಮಾಧ್ಯಮ ಮತ್ತು ವೀಡಿಯೊ ಹೋಸ್ಟಿಂಗ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ವೀಡಿಯೊವನ್ನು ಪರಿಶೀಲಿಸಿದಾಗ  ಪಂಜಾಬ್ – ಹರಿಯಾಣ ಕೇಸರಿ ಎಂಬ ಪರಿಶೀಲಿಸಿದ ಯೂಟ್ಯೂಬ್ ಚಾನೆಲ್‌ನಲ್ಲಿನ ವರದಿಯು ಲಭ್ಯವಾಗಿದೆ..

ಈ ವರದಿಯು ಹರಿಯಾಣದ ರೋಹ್ಟಕ್‌ನಲ್ಲಿ  ಇ-ರಿಕ್ಷಾವೊಂದು ಮೈಕ್‌ನೊಂದಿಗೆ ವಿವಿಧ ರೀತಿಯ ಭಾರತ ಮತ್ತು ವಿದೇಶಿ ನಿರ್ಮಿತ ಮದ್ಯದ ಜಾಹೀರಾತುಗಳು ಮತ್ತು ದರಗಳನ್ನು ಪ್ರಕಟಿಸುತ್ತಿದೆ ಎಂದು ಖಚಿತವಾಗಿದೆ. ಇದು ವೈರಲ್ ವಿಡಿಯೊದ ವಿಸ್ತೃತ ಆವೃತ್ತಿಯನ್ನು ತೋರಿಸಿದೆ, ಅಲ್ಲಿ ಜನರು ಸರ್ಕಾರಿ ಅಂಗಡಿಗಳಿಂದ ಮಾತ್ರ ಮದ್ಯವನ್ನು ಖರೀದಿಸಲು ಪ್ರೋತ್ಸಾಹಿಸುವ ಪ್ರಕಟಣೆಯನ್ನು ಸಹ ಮಾಡಲಾಯಿತು, ಏಕೆಂದರೆ “ನಕಲಿ ಮದ್ಯವು ಮಾರಕವಾಗಬಹುದು ಎಂದು ವಿವರಿಸಲಾಗಿದೆ”. ಹರಿಭೂಮಿ ಹೆಸರಿನ ವೆಬ್‌ಸೈಟ್‌ನಲ್ಲಿ ನಾವು ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ, ಅದು ವೈರಲ್ ವೀಡಿಯೊದ ಸ್ಪಷ್ಟ ಆವೃತ್ತಿಯನ್ನು ಹೊಂದಿದೆ.

 'ರೋಹ್ಟಕ್ ಪೋಲೀಸ್' ಎಂದು ಬರೆಯಲಾದ ಬ್ಯಾರಿಕೇಡ್‌ಗಳನ್ನು ಗಮನಿಸಬಹುದು
‘ರೋಹ್ಟಕ್ ಪೋಲೀಸ್’ ಎಂದು ಬರೆಯಲಾದ ಬ್ಯಾರಿಕೇಡ್‌ಗಳನ್ನು ಗಮನಿಸಬಹುದು

ಸ್ಥಳೀಯ ವರದಿಗಾರರೊಬ್ಬರು ಈ ವಿಡಿಯೋ ಹರಿಯಾಣದ್ದು ಎಂದು ಖಚಿತಪಡಿಸಿದ್ದಾರೆ. ಎಂದು ಕ್ವಿಂಟ್ ವರದಿ ಮಾಡಿದೆ. “ಜುಲೈ 14 ರಂದು ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಾಂಪ್ಲೆಕ್ಸ್ ಪ್ರದೇಶದಲ್ಲಿ ರೋಹ್ಟಕ್‌ನಲ್ಲಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ”  ಎಂದು ಉಲ್ಲೇಖಿಸಿದೆ. ಒಟ್ಟಾರೆಯಾಗಿ ಹೇಳುವುದಾರೆ, ವೈರಲ್ ವೀಡಿಯೊ ದೆಹಲಿ ಅಥವಾ ಪಂಜಾಬ್‌ನಿಂದ ಅಲ್ಲ. ಇದನ್ನು ಹರಿಯಾಣದ ರೋಹ್ಟಕ್‌ನಲ್ಲಿ ಸೆರೆಹಿಡಿಯಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ ಫ್ಯಾಕ್ಟ್‌ಚೆಕ್: ಪೈಪ್‌ಲೈನ್ ಮೂಲಕ ಮದ್ಯ ಸರಬರಾಜು ಮಾಡಲಿದೆಯೇ ಕೇಂದ್ರ ಸರ್ಕಾರ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights