ಫ್ಯಾಕ್ಟ್‌ಚೆಕ್: ಈ ಚಿತ್ರದಲ್ಲಿ ಜಯಲಲಿತಾರೊಂದಿಗೆ ಇರುವುದು ನಿರ್ಮಲಾ ಸೀತಾರಾಮನ್ ಅವರೇ?
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಯಲಲಿತ ಮತ್ತು ನಿರ್ಮಲಾ ಸೀತಾರಾಮನ್ ಜೊತೆಯಲ್ಲಿರುವ ಅಪರೂಪದ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
— രാജൻ ഉണ്ണി (@rajannair2107) February 13, 2023
ನಿರ್ಮಲಾ ಸೀತಾರಾಮನ್ ಭಾರತದ ಹಣಕಾಸು ಸಚಿವೆ. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ನಿರ್ಮಲಾ ದೊಡ್ಡ ಸ್ಥಾನವನ್ನು ತಲುಪಿದ್ದಾರೆ. ಕರ್ನಾಟಕ ಮೂಲದವರಾಗಿದ್ದರೂ ತಮಿಳುನಾಡಿನಲ್ಲಿ ಮನೆಮಾತಾಗಿ ರಾಜಕೀಯವಾಗಿ ಹೆಸರು ಮಾಡಿ ಅಗ್ರ ನಾಯಕಿಯಾಗಿ ಜನರ ಪಾಲಿನ ಅಮ್ಮನೆಂದೇ ಹೆಸರಾದ ಜಯಲಲಿತಾ (ದಿವಂಗತ). ಈ ವೈರಲ್ ಫೋಟೋದಲ್ಲಿ ಇಬ್ಬರು ನಾಯಕಿಯರು ಒಟ್ಟಿಗೆ ಫೋಸ್ ನೀಡಿರುವುದು ನಿಜವೇ? ಈ ಫೋಟೊದ ಅಸಲಿ ಕತೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನ ಫೋಟೊದಲ್ಲಿರುವ ಇಬ್ಬರು ಮಹಿಳೆಯರ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಫೋಟೊದಲ್ಲಿ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬರು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತೊಬ್ಬರು ಪ್ರಖ್ಯಾತ ಲೇಖಕಿ ಶಿವಶಂಕರಿ ಎಂದು ತಿಳಿದುಬಂದಿದೆ.
ಫೋಟೋದಲ್ಲಿರುವ ಮಹಿಳೆ ತಮಿಳು ಲೇಖಕಿ ಮತ್ತು ಹೋರಾಟಗಾರ್ತಿ ಶಿವಶಂಕರಿ ಚಂದ್ರಶೇಖರನ್ ಆಗಿದ್ದು, ನಿರ್ಮಲಾ ಸೀತಾರಾಮನ್ ಅಲ್ಲ ಎಂಬುದು ಸ್ಪಷ್ಟವಾಗಿದೆ. 36 ಕಾದಂಬರಿಗಳು, 48 ಸಣ್ಣ ಕಾದಂಬರಿಗಳು, 150 ಸಣ್ಣ ಕಥೆಗಳು, 15 ಪ್ರವಾಸ ಕಥನಗಳು ಮತ್ತು ಇಂದಿರಾ ಗಾಂಧಿ ಮತ್ತು ಶ್ರೀ ಜಿಡಿ ನಾಯ್ಡು ಅವರ ಜೀವನ ಚರಿತ್ರೆಗಳನ್ನು ಬರೆದ ಕೀರ್ತಿ ಶಿವಶಂಕರಿ ಅವರಿಗೆ ಸಲ್ಲುತ್ತದೆ.
ನಿರ್ಮಲಾ ಸೀತಾರಾಮ್ ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ ತಿರುಚಿರಾಪಳ್ಳಿಯಲ್ಲಿರುವ ಅವರ ಕಾಲೇಜು ದಿನಗಳ ಫೋಟೋವನ್ನು ಸಹ ನಾವು ಕಂಡುಕೊಂಡಿದ್ದೇವೆ. ಎರಡು ಚಿತ್ರಗಳನ್ನು ಹೋಲಿಸಿದಾಗ ಜಯಲಲಿತಾ ಜೊತೆ ಕುಳಿತಿದ್ದ ಮಹಿಳೆ ಸೀತಾರಾಮನ್ ಅಲ್ಲ ಎಂಬುದು ಸ್ಪಷ್ಟವಾಯಿತು.
ಒಟ್ಟಾರೆಯಾಗಿ ಹೇಳುವುದಾದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುರುವ ಫೋಟೊದಲ್ಲಿ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬರು ದಿವಂಗತ ಜಯಲಲಿತ ಮತ್ತು ತಮಿಳು ಲೇಖಕಿ ಮತ್ತು ಹೋರಾಟಗಾರ್ತಿ ಶಿವಶಂಕರಿ ಚಂದ್ರಶೇಖರನ್. ಶಿವಶಂಕರಿ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 2019ರ ಹಳೆಯ ದೃಶ್ಯಗಳನ್ನು ಟರ್ಕಿ ಮತ್ತು ಸಿರಿಯಾದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೆ