ಪಂಜಾಬ್‌ ಚುನಾವಣೆ: 20 ಸದಸ್ಯರಿರುವ ಕುಟುಂಬದ BJP ಅಭ್ಯರ್ಥಿಗೆ 09 ಓಟು!

ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನಿನ್ನೆ (ಫೆ.18) ಹೊರಬಿದ್ದಿದೆ. ಚುನಾವಣೆಯ ಫಲಿತಾಂಶ ಕಂಡು ಗುರುದಾಸ್‌ಪುರ ಮುನ್ಸಿಪಲ್ ಕೌನ್ಸಿಲ್‌ನ ಒಬ್ಬರು ಬಿಜೆಪಿ ಅಭ್ಯರ್ಥಿ ಆಘಾತಕ್ಕೊಳಗಾಗಿದ್ದು, ಚುನಾವಣಾ ಪ್ರಕ್ರಿಯೆಯ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಿರಣ್ ಕೌರ್ ಎಂಬುವವರಿಗೆ ಕೇವಲ 09 ಓಟುಗಳು ಮಾತ್ರ ಸಂದಿವೆ. ಹೀಗಾಗಿ ಆಕೆ ಚುನಾವಣೆಯ ವಿರುದ್ದ ಆಕ್ರೋಶಗೊಂಡಿದ್ದು, ತನ್ನ ಕುಟುಂಬದಲ್ಲಿ 15-20 ಜನರಿದ್ದಾರೆ. ಆದರೆ, ನನಗೆ ಕೇವಲ 09 ಓಟುಗಳು ಮಾತ್ರ ಸಿಕ್ಕಿವೆ. ಮತದಾನ ನಡೆದ ನಂತರ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ಅನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ, ಕೃಷಿ ಕಾಯ್ದೆಗಳ ವಿರುದ್ಧದ ಪರಿಣಾಮ, ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಅಭ್ಯರ್ಥಿಯನ್ನು ಅವರ ಕುಟುಂಬದವರೆ ತಿರಸ್ಕರಿಸುತ್ತಾರೆ ಎಂಬುದಕ್ಕೆ ಇದು ನಿದರ್ಶನ ಎಂದು ನೆಟ್ಟಿಗರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗಿಮಿಕ್‌ ಮಾಡಿದೆ. ಇತರೆ ಅಭ್ಯರ್ಥಿಗಳಿಗೆ ಕಿರುಕುಳ ನೀಡುತ್ತಿದೆ. ನಾನು ಈ ಹಿಂದೆ ಹಲವು ಬಾರಿ 12ನೇ ವಾರ್ಡ್‌ನಿಂದ ಗೆದ್ದಿದ್ದೇನೆ. ಈ ಬಾರಿಯೂ ನನ್ನ ವಾರ್ಡ್‌ನ ಜನರು ನನಗೆ ಭರವಸೆ ನೀಡಿದ್ದರು, ನಾನು ಚುನಾವಣೆಯಲ್ಲಿ ಗೆಲ್ಲಬೇಕಿತ್ತು. ಆದರೆ, 09 ಓಟುಗಳ ಮಾತ್ರ ಬಿದ್ದಿವೆ. ಕಾಂಗ್ರೆಸ್ ನನಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ಅಭ್ಯರ್ಥಿ ಕಿರಣ್ ಕೌರ್ ಆರೋಪಿಸಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ರೈತ ಮುಖಂಡರ ಮೇಲೆ FIR: ರೈತರ ನೆರವಿಗೆ 70 ವಕೀಲರನ್ನು ನೇಮಿಸಿದ ಪಂಜಾಬ್‌ ಸರ್ಕಾರ!

“ಇದು ಕೃಷಿ ಕಾನೂನುಗಳ ಪರಿಣಾಮ. ಹಾಗಾಗಿ ಯಾವೊಬ್ಬ ವ್ಯಕ್ತಿಯ ಬಿಜೆಪಿಯ ಪರವಾಗಿದ್ದರೆ, ಕೃಷಿ ನೀತಿಗಳನ್ನು ಸಮರ್ಥಿಸಿಕೊಂಡರೆ, ಅಂತಹ ಅಭ್ಯರ್ಥಿಯನ್ನು ಅವರ ಕುಟುಂಬಸ್ಥರೇ ಅವರನ್ನು ನಿರಾಕರಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಕಮೆಂಟ್‌ಗಳು ಬಂದಿವೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಇವರಲ್ಲಿ ಬಹುಪಾಲು ರೈತರು ಪಂಜಾಬ್ ಮತ್ತು ಹರಿಯಾಣದವರಾಗಿದ್ದಾರೆ. ಹಾಗಾಗಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದರ ನಡುವೆಯೇ ಪಂಜಾಬ್‌ ನಲ್ಲಿ ಸ್ಥಳೀಯ ಚುನಾವಣೆ ನಡೆದಿದೆ. 8 ಕ್ಕೆ 8 ಮುನಿಸಿಪಲ್ ಕಾರ್ಪೋರೇಷನ್‌ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅಲ್ಲದೆ 109 ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ‌ ಬಹುತೇಕ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಯಾವುದೇ ಪುರಸಭೆಗಳಲ್ಲಿ ಅಧಿಕಾರ ಪಡೆದಲು ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿಗೆ ಹೀನಾಯ ಸೋಲನ್ನು ಅನುಭವಿಸಿದೆ. ಇದು ರೈತರ ಆಕ್ರೋಶಕ್ಕೆ ಸ್ಪಷ್ಟ ಉದಾಹರಣೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪಂಜಾಬ್‌ ಸ್ಥಳೀಯ ಸಂಸ್ಥೆಗಳನ್ನು ಬಾಚಿಕೊಂಡ ಕಾಂಗ್ರೆಸ್‌; ನೆಲೆಯಿಲ್ಲದೆ ಧೂಳಿಪಟವಾದ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights