ಫ್ಯಾಕ್ಟ್‌ಚೆಕ್: ಮಳೆಯಲ್ಲಿ ಮೊಬೈಲ್ ಫೋನ್ ಬಳಸಿದರೆ ಫೋನ್ ಸ್ಪೋಟವಾಗುತ್ತದೆ ಎಂಬುದು ನಿಜವೇ?

ಭಾರತದಲ್ಲಿ ಇದೀಗತಾನೆ ಮಳೆಗಾಲ ಪ್ರಾರಂಭವಾಗಿದೆ,  ಮಳೆಗಾಲ ಶುರುವಾಗುತ್ತಿದ್ದಂತೆ ಆಘಾತಕಾರಿ ವಿಡಿಯೊವೊಂದು ವೈರಲ್ ಆಗಿದೆ.  ಫೋನ್‌ಗಳು ಮಿಂಚನ್ನು ಆಕರ್ಷಿಸುತ್ತವೆ ಎಂದು ವಿಡಿಯೋ ವೈರಲ್ ಆಗಿದೆ.  ಸುರಿಯುತ್ತಿರುವ ಮಳೆಯಲ್ಲಿ ಒಬ್ಬ ವ್ಯಕ್ತಿ ಛತ್ರಿ ಹಿಡಿದು ನಡೆದುಕೊಂಡು ಹೋಗುವುದನ್ನು ಕಾಣಬಹುದು. ಅವರಿಗೆ ಇದ್ದಕ್ಕಿದ್ದಂತೆ ಸಿಡಿಲು ಬಡೆಯುತ್ತದೆ. ಅಲ್ಲಿ ಕಿಡಿಗಳ ಸ್ಫೋಟ ಸಂಭವಿಸುತ್ತದೆ. ವ್ಯಕ್ತಿ ಪ್ರಜ್ಞಾಹೀನನಾಗಿ ನೆಲದ ಮೇಲೆ ಬೀಳುತ್ತಾನೆ. ”ಈ ವ್ಯಕ್ತಿ ಮಳೆಯಲ್ಲಿ ನಡೆಯುವಾಗ ತನ್ನ ಫೋನ್ ಅನ್ನು ಬಳಸುತ್ತಿದ್ದನು ಹಾಗಾಗಿ ಅವನ ಫೋನ್ ಸ್ಪೋಟಗೊಂಡಿದೆ. ಮಿಂಚು ಫೋನ್ ಸಿಗ್ನಲ್‌ಗಳಿಗೆ ಆಕರ್ಷಿತವಾಗಿದೆ. ಮಳೆಗಾಲದಲ್ಲಿ ತೆರೆದ ಸ್ಥಳಗಳಲ್ಲಿ ಫೋನ್ ಬಳಸಬೇಡಿ” ಎಂಬ ಹೇಳಿಕೆ ಇರುವ ವಿಡಿಯೋವನ್ನು ‘ಕಿರಣ್‌ ಬೇಡಿ’ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ವೀಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಅನೇಕ ಸುದ್ದಿ ವರದಿಗಳು ಲಭ್ಯವಾಗಿದ್ದು. ಈ ಘಟನೆ ಡಿಸೆಂಬರ್ 2021 ರಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ‘ಮಿರರ್’ ನಲ್ಲಿ ಲೇಖನ ಪ್ರಕಟವಾಗಿದೆ. ಇಂಡೋನೇಷ್ಯಾದ ಉತ್ತರ ಜಕಾರ್ತಾದ ಸುಕಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಸಿಡಿಲು ಬಡಿದು ಅವರ ಕೊಡೆ ಇದ್ದಕ್ಕಿದ್ದಂತೆ ಬೆಂಕಿಯ ಕಿಡಿಗಳಂತೆ ಸಿಡಿದು ಶಿಥಿಲಗೊಂಡಿದೆ ಎಂದು ವರದಿ ತಿಳಿಸಿದೆ. ಆ ವ್ಯಕ್ತಿ “ಘಟನೆಯಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ” ಎಂದು ವರದಿ ಹೇಳಿದೆ.

ಸೆಲ್ ಫೋನ್‌ಗಳಲ್ಲಿ ಮಿಂಚಿನ ಪರಿಣಾಮಗಳನ್ನು ಸಹ ಹುಡುಕಲಾಗಿದೆ. US ನಲ್ಲಿನ ಹವಾಮಾನ ಮುನ್ಸೂಚನೆಗಳ ಅಧಿಕೃತ ನೋಡಲ್ ಏಜೆನ್ಸಿಯಾದ ರಾಷ್ಟ್ರೀಯ ಹವಾಮಾನ ಸೇವೆಯ ವೆಬ್‌ಸೈಟ್‌ನಲ್ಲಿ ಈ ವರದಿಯನ್ನು ಕಂಡುಹಿಡಿಯಲಾಗಿದೆ. ಆ ವರದಿಯ ಪ್ರಕಾರ ಇದೊಂದು ತಪ್ಪು ಸಂದೇಶ ಎಂದಿದೆ.

ಪೋಸ್ಟ್‌ಅನ್ನು ದೃಢೀಕರಿಸಲು ಬೆಂಗಾಲ್ ಇಂಜಿನಿಯರಿಂಗ್ ಮತ್ತು ಸೈನ್ಸ್ ಯೂನಿವರ್ಸಿಟಿ (BESU) ಅಡಿಯಲ್ಲಿ ಸ್ಕೂಲ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಮಾಜಿ ಪ್ರೊಫೆಸರ್ ಸೂರ್ಯ ಸಾರಥಿ ಬರತ್ ಅವರನ್ನು ಸಂಪರ್ಕಿಸಲಾಯಿತು. ” ಸೆಲ್ ಫೋನ್‌ಗಳು ತಂತಿಯ ಸಂಪರ್ಕ ಹೊಂದಿರುವುದಿಲ್ಲ. ಆದ್ದರಿಂದ ಇದು ಮಿಂಚನ್ನು ಆಕರ್ಷಿಸುವ ಸಾಧ್ಯತೆಯಿಲ್ಲ. ಹುಡ್‌ನಲ್ಲಿ ಮೊನಚಾದ ವಸ್ತುಗಳನ್ನು ಹೊಂದಿರುವ ಹಳೆಯ-ಶೈಲಿಯ ಛತ್ರಿಗಳಿಗಿಂತ ಸೆಲ್‌ಫೋನ್‌ಗಳು ಸುರಕ್ಷಿತವಾಗಿರುತ್ತವೆ”ಎಂದು ಬಾರಾತ್ ಇಂಡಿಯಾಟುಡೆ  ಗೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ ಸೆಲ್ ಫೋನ್‌ಗಳು ಮಿಂಚನ್ನು ಆಕರ್ಷಿಸುವುದಿಲ್ಲ. ವಿಡಿಯೋದಲ್ಲಿರುವ ಘಟನೆ ಛತ್ರಿಯನ್ನು ಬಳಸಿರುವಾಗ ಉಂಟಾದ ಅಪಘಾತ ಎಂದು ತಿಳಿದುಬಂದಿದ್ದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಿಜಾಬ್ ತೆಗಿಸಲು ಬಂದ ವ್ಯಕ್ತಿ ಮೇಲೆ ಹಲ್ಲೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights