ಫ್ಯಾಕ್ಟ್ಚೆಕ್ : ABP-C ವೋಟರ್ ಸಮೀಕ್ಷೆಯಲ್ಲಿ BJP ಗೆ ಬಹುಮತ? ಸುಳ್ಳು ಅಂಕಿ ಅಂಶ ಹಂಚಿಕೊಂಡ BJP ಬೆಂಬಲಿಗರು
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಅಧಿಕೃತ ದಿನಾಂಕ ಬುಧವಾರವಷ್ಟೇ ಪ್ರಕಟಗೊಂಡಿದೆ. ಇದರ ಬೆನ್ನಲ್ಲೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಚುನಾವಣಾ ಪೂರ್ವ ಸಮೀಕ್ಷೆಯೊಂದು ಬಹಿರಂಗಗೊಂಡಿದೆ.
https://twitter.com/ShakunthalaHS/status/1641111957855145986?t=6xr35JYixyf-ocudF5RY-g&s=19
ಈ ಸಮೀಕ್ಷೆಯ ಸ್ಕ್ರೀನ್ಶಾಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು BJP ಗೆ 115 ರಿಂದ 127 ಸ್ಥಾನಗಳು ಬರಲಿದ್ದು ಮುಂದೆ ರಾಜ್ಯದಲ್ಲಿ BJP ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಪ್ರತಿಪಾದಿಸಿ ಶಕುಂತಲ ಎಂಬ BJP ಬೆಂಬಲಿತರೊಬ್ಬರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
“ದಕ್ಷ ನಾಯಕತ್ವ, ಗಟ್ಟಿ ಆಡಳಿತ, ನಿಷ್ಠಾವಂತ ಕಾರ್ಯಕರ್ತರು, ಹಿಂದುತ್ವದ ಬೆಂಬಲದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ABP ನ್ಯೂಸ್ ತನ್ನ ಸಮೀಕ್ಷೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ 2023ರಲ್ಲಿ BJP ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
BJP ಬೆಂಬಲಿತ ಪ್ರತಿಪಾದಕಿ ಶಕುಂತಲಾ ಎಂಬುವವರು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಟ್ವಿಟರ್ ಸರ್ಚ್ ಮಾಡಿದಾಗ, ABP ನ್ಯೂಸ್ ಸಮೀಕ್ಷೆಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
#DeshKaMoodOnABP | abp न्यूज़ के सर्वे में कांग्रेस को मिला बहुमत, एक्सपर्ट की सुनिए राय……@RubikaLiyaquat | @romanaisarkhan | https://t.co/smwhXUROiK #Karnataka #KarnatakaElections2023 #BJP #Congress #ABPOpinionPoll pic.twitter.com/gSPoJwL9UU
— ABP News (@ABPNews) March 29, 2023
ABP ನ್ಯೂಸ್ ಚುನಾವಣಾ ಫಲಿತಾಂಶದ ಕುರಿತು ತನ್ನ ಸಮೀಕ್ಷೆಯನ್ನು ಬಹಿರಂಗಪಡಿಸಿದ್ದು, ಈ ಸಮೀಕ್ಷೆಯಲ್ಲಿನ ಅಂಕಿ ಅಂಶಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರಲಿದೆ ಎಂದು ತಿಳಿಸಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ. ಬಹುಮತ ಮೂಲಕ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಕುರಿತು ಅಂಕಿ ಅಂಶಗಳು, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬ ಮಾಹಿತಿ ಇಲ್ಲಿದೆ.
ಪ್ರಸ್ತುತ ಈ ಸಮೀಕ್ಷೆ ಪ್ರಕಾರ, ವಿಪಕ್ಷವಾದ ಕಾಂಗ್ರೆಸ್ ಚುನಾವಣೆಯಲ್ಲಿ 115-127 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ. ಅದೇ ರೀತಿ ಈಗಿನ ಆಡಳಿತ ಪಕ್ಷವಾಗಿರುವ ಬಿಜೆಪಿಯು ಒಟ್ಟು 68-80 ಸೀಟುಗಳನ್ನು ಗೆಲ್ಲಬಹುದು. ಇನ್ನೂ ಸ್ಥಳಿಯ ಪಕ್ಷವಾದ ಜೆಡಿಎಸ್ 23-35 ಸ್ಥಾನಗಳಲ್ಲಿ ತನ್ನ ಛಾಪು ಮೂಡಿಸಬಹುದು ಎಂದು ತಿಳಿಸಲಾಗಿದೆ. ಆದರೆ ಬಿಜೆಪಿ ಬೆಂಬಲಿಗರು ಅದನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.
ABP ಸಿ ವೋಟರ್ ಸಮೀಕ್ಷೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ಅದರ ಪ್ರಕಾರ ನೋಡುವುದಾದರೆ ಅರ್ಧದಷ್ಟು (50%) ಜನರು ಬಿಜೆಪಿ ಸರ್ಕಾರ ಸಾಧನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಾಧನೆ ಕಳಪೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ಗುಣಮಟ್ಟ ಅಲ್ಲದ ಕಾರ್ಯ ಸಾಧನೆ ಆಗಿದೆ ಎಂದಿದ್ದಾರೆ. ಹೀಗಾಗಿ ಇದು ಆಡಳಿತ ಪಕ್ಷದ ಕುರಿತು ಜನರಿಗೆ ಇರುವ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ABP ಸಿ ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿರುವ ವರದಿಯನ್ನು ಎಡಿಟ್ ಮೂಲಕ ತಿರುಚಿ BJP ಗೆ ಹೆಚ್ಚಿನ ಸ್ಥಾನ ಲಭಿಸುತ್ತದೆ ಎಂದು ABP ನ್ಯೂಸ್ ಸಮೀಕ್ಷೆ ಹೇಳಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

