ಫ್ಯಾಕ್ಟ್‌ಚೆಕ್ : ಬಾಂಗ್ಲಾದೇಶದ ಉದ್ಯಾನವನದ ಚಿತ್ರವನ್ನು ಕಾಶ್ಮೀರದ ಶ್ರೀನಗರದ್ದು ಎಂದು ತಪ್ಪಾಗಿ ಹಂಚಿಕೆ

ಶ್ರೀನಗರದ ಬೌಲೆವರ್ಡ್ ರಸ್ತೆಯಲ್ಲಿ ಕ್ಲಿಕ್ಕಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಜಿ 20 ಸಭೆಯ ಸಂದರ್ಭದಲ್ಲಿ ಶ್ರೀನಗರ ಹೇಗೆ ಸಿಂಗಾರಗೊಂಡಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಜಮ್ಮು ಕಾಶ್ಮೀರ ಮೂಲದ ಎನ್‌ಜಿಒ ಸೇವ್ ಯೂತ್ ಸೇವ್ ಫ್ಯೂಚರ್‌ನ ಅಧ್ಯಕ್ಷ ವಜಾಹತ್ ಫಾರೂಕ್ ಭಟ್ ಅವರು ಇದೇ ರೀತಿಯ ಹೇಳಿಕೆಯೊಂದಿಗೆ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಅನ್ನು ಬೆಂಬಲಿಸಿ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಥಂಬ್ (ಹೆಬ್ಬೆರಳು)  ಎಮೋಜಿಯೊಂದಿಗೆ ಬೆಂಬಲಿಸಿದ್ದಾರೆ. ಹಾಗಿದ್ದರೆ ಈ ದೃಶ್ಯಗಳು ಶ್ರೀನರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳಿಂದಾಗಿವೇ ಎಂದು ಪರಿಶೀಲಿಸೋಣ.

ಅಕ್ವಿಬ್ ಮಿರ್ ಎಂಬ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ‘ಪಾಕಿಸ್ತಾನ ಸೇನೆಯ ಕೈಗೊಂಬೆ ಮತ್ತು ಭಯೋತ್ಪಾದಕ ಪ್ರೇಮಿ’ ಎಂದು ಶಾಹಿದ್ ಅಫ್ರಿದಿಯನ್ನು ಉದ್ದೇಶಿಸಿ ಟ್ವೀಟ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.  ಶ್ರೀನಗರದ ಬೌಲೆವರ್ಡ್ ರಸ್ತೆಯಲ್ಲಿ ಚಿತ್ರವನ್ನು ಕ್ಲಿಕ್ ಮಾಡಲಾಗಿದ್ದು ಇದು G20 ಸಭೆಗಾಗಿ ‘ವಿಶ್ವದಾದ್ಯಂತದ ಪ್ರತಿನಿಧಿಗಳನ್ನು ಸ್ವಾಗತಿಸಲು ಭವ್ಯವಾದ ಮೇಕ್ ಓವರ್’ ನೀಡಲಾಗಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. (ಆರ್ಕೈವ್) ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಆಗಿರುವ ಚಿತ್ರ ಬಾಂಗ್ಲಾದೇಶದ ಬರಿಶಾಲ್ ಪ್ರದೇಶದ ಪಟುಖಾಲಿ ಜಿಲ್ಲೆಯ ಪ್ರಧಾನ ಕಛೇರಿಯಾಗಿರುವ ಪಟುಖಾಲಿ ಪಟ್ಟಣದಲ್ಲಿರುವ ಉದ್ಯಾನವನವಾಗಿದೆ ಎಂಬ ಮಾಹಿತಿಯನ್ನು ಒಂದು ಫೇಸ್‌ಬುಕ್ ಪುಟದಲ್ಲಿ ಲಭ್ಯವಾಗಿದೆ.

ಫೆಬ್ರುವರಿ 2023 ರಲ್ಲಿ ಬಳಕೆದಾರರಿಂದ ಪೋಸ್ಟ್ ಮಾಡಲಾದ ಝೌಟೋಲಾ ಪಟುವಾಖಾಲಿ ಸ್ಥಳದೊಂದಿಗೆ ಅದೇ ಚಿತ್ರವನ್ನು ನಾವು Google ನಲ್ಲಿ ಕಂಡುಬಂದಿದೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

 

ಈ ಎರಡು ಫೋಟೊಗಳ್ನು ಪರಿಶೀಲಿಸಲು ಫೇಸ್‌ಬುಕ್, ಗೂಗಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊಗಳನ್ನು ಹೋಲಿಕೆ ಮಾಡಿ ನೋಡಿದಾಗ ಮೂರು ಚಿತ್ರಗಳು ಒಂದೇ ಎಂಬುದು ಸ್ಪಷ್ಟವಾಗಿದೆ.

ಮೇ 18 ರ ಸಿಯಾಸತ್ ಡೈಲಿ ವರದಿಯ ಪ್ರಕಾರ, ಶ್ರೀನಗರದಲ್ಲಿ ತನ್ನ ಮೊದಲ G-20 ಸಭೆಯನ್ನು ಆಯೋಜಿಸಲು ಸಿದ್ಧವಾಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಭದ್ರತಾ ಪಡೆಯನ್ನು ನಿಯೋಜಿಸಲಾಗಿತ್ತು. ಕಣಿವೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಪಡೆಗಳು ನಗರ ಮತ್ತು ಸುತ್ತಮುತ್ತ ವಿಶೇಷವಾಗಿ ಲಾಲ್ ಚೌಕ್‌ನಲ್ಲಿ ಹಲವಾರು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಕಾಶ್ಮೀರದಲ್ಲಿ ಜಿ-20 ಸಭೆಗೆ ಮುನ್ನ ಬೌಲೆವಾರ್ಡ್ ರಸ್ತೆಯಲ್ಲಿ ಸಿಆರ್‌ಪಿಎಫ್ ಗಸ್ತು ತಿರುಗುತ್ತಿರುವ ಚಿತ್ರ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಿಯಾಸತ್ ಡೈಲಿ ವರದಿಯಲ್ಲಿನ ಚಿತ್ರದೊಂದಿಗೆ ವೈರಲ್ ಚಿತ್ರವನ್ನು ಹೋಲಿಕೆ ಮಾಡಿದಾಗ, ಎರಡು ಚಿತ್ರಗಳು ವಿಭಿನ್ನವಾದ ವ್ಯತ್ಯಾಸಗಳನ್ನು ಹೊಂದಿವೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಬರಿಶಾಲ್ ವಿಭಾಗದ ಪಟುಖಾಲಿಯಲ್ಲಿರುವ ಉದ್ಯಾನವನದ ಚಿತ್ರವನ್ನು ಶ್ರೀನಗರದ ಬೌಲೆವಾರ್ಡ್ ರಸ್ತೆಯ ಚಿತ್ರ ಎಂದು, ಮತ್ತು ಜಿ-20 ಸಭೆಯ ಹಿನ್ನಲೆಯಲ್ಲಿ ಕಾಶ್ಮೀರ ‘ಅದ್ಭುತ ಪರಿವರ್ತನೆ’ಯ ಸಂಕೇತವಾಗಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ನಿಜವೇ? ವಾಸ್ತವ ಇಲ್ಲಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights