FACT CHECK | 1993 ಮುಂಬೈ ಸ್ಪೋಟದ ಉಗ್ರ ಅಬು ಸಲೇಂ ಜೊತೆ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಬಾಲಿವುಡ್‌ನಲ್ಲಿ ತನ್ನ ಪಾತ್ರದ ಜೊತೆ ಬೋಲ್ಡ್‌ ಹೇಳಿಕೆಗಳಿಂದಲೂ ಪ್ರಭಾವ ಬೀರಿರುವ ನಟಿ ಕಂಗನಾ ರಣಾವತ್ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿಯೇ ಅವರು ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದರು. ಇದೇ ಕಾರಣ್ಕಕ್ಕೆ ಕಾಂಟ್ರವರ್ಸಿ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿ ಇರುವಂತೆ ನೋಡಿಕೊಂಡಿದ್ದರು.

No, That's Not Abu Salem With Kangana Ranaut, It's Mark Manuel!

ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಕ್ಕಾ ಆಗುತ್ತಿದಂತೆ ಕಂಗನಾ ರಣಾವತ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೊವೊಂದು ಪ್ರಸಾರವಾಗುತ್ತಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರು ಫೋಟೊದಲ್ಲಿ ಕಂಗನಾ ರಣಾವತ್ ವ್ಯಕ್ತಿಯೊಬ್ಬರ ಜೊತೆ ನಿಂತು ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಅಬು ಸಲೇಂ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್ ಪೋಸ್ ನೀಡುತ್ತಿರುವ ಚಿತ್ರ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಕಂಗನಾ ಜೊತೆಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ 1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಅಬು ಸಲೇಂ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಮಾರ್ಕ್‌ ಮ್ಯಾನುವಲ್ ಅವರು 15 ಸೆಪ್ಟಂಬರ್ 2017ರಂದು ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದ್ದು ಅದರಲ್ಲಿ ಇದೇ ಚಿತ್ರವನ್ನು ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

2017 ರಲ್ಲಿ ಕಂಗನಾ ರಣಾವತ್ ಅವರನ್ನು ಸಂದರ್ಶನ ಮಾಡಿದ ಮಾರ್ಕ್ ಮ್ಯಾನುಯೆಲ್ ಸಂದರ್ಶನದ ನಂತರ ಅವರು ಅದೇ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Mark Manuel (@markmanuel2609)

ಮಾರ್ಕ್ ಮ್ಯಾನುಯೆಲ್ ಅವರು ಕಂಗನಾ ಅವರೊಂದಿಗಿನ ಸಂದರ್ಶನದಿಂದ ಹಫಿಂಗ್ಟನ್ ಪೋಸ್ಟ್‌ ಗೆ ಲೇಖನವನ್ನು ಬರೆದಿದ್ದಾರೆ. 24 ಸೆಪ್ಟೆಂಬರ್ 2018 ರಂದು ಪ್ರಕಟವಾದ ಲೇಖನವು ಅದೇ ಚಿತ್ರವನ್ನು ಒಳಗೊಂಡಿತ್ತು.ಲೇಖನವನ್ನು ನೋಡಲು ಸಾಧ್ಯವಾಗುತ್ತಿಲ್ಲವಾದರೂ, 2020 ರಲ್ಲಿ ಅದರ ಸ್ಕ್ರೀನ್‌ಶಾಟ್ ಮೂಲಕ ಫ್ಯಾಕ್ಟ್‌ಚೆಕ್ ಮಾಡಲಾಗಿತ್ತು. ಆಗಲು ಈ ಚಿತ್ರವನ್ನು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

2023 ರಲ್ಲೂ, ಇಂತಹದ್ದೇ ಹೇಳಿಕೆಯೊಂದಿಗೆ ಫೋಟೋ ವೈರಲ್ ಆಗಿತ್ತು. ಆಗ ಸ್ವತಃ ಕಂಗನಾ ರಣಾವತ್ ಪ್ರತಿಕ್ರಿಯಿಸಿ, ಚಿತ್ರದಲ್ಲಿರುವ ವ್ಯಕ್ತಿ ಟೈಮ್ಸ್ ಆಫ್ ಇಂಡಿಯಾ ಮಾಜಿ ಸಂಪಾದಕ ಮಾರ್ಕ್ ಮ್ಯಾನುಯೆಲ್ ಎಂದು ಪ್ರತಿಪಾದಿಸಿದರು. ವೈರಲ್ ಫೋಟೋದಲ್ಲಿ ಕಂಗನಾ ಜೊತೆ ಪೋಸ್ ಕೊಡುತ್ತಿರುವ ವ್ಯಕ್ತಿ ಅಪರಾಧಿ ಭಯೋತ್ಪಾದಕ ಅಬು ಸಲೇಂ ಅಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಫೋಟೊದಲ್ಲಿ ಕಂಗನಾ ರಣಾವತ್ ಜೊತೆಯಲ್ಲಿ ಫೋಸ್ ನೀಡುತ್ತಿರುವ ವ್ಯಕ್ತಿ 1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ ಅಬು ಸಲೇಂ ಅಲ್ಲ, ಟೈಮ್ಸ್ ಆಫ್ ಇಂಡಿಯಾ ಮಾಜಿ ಸಂಪಾದಕ ಮಾರ್ಕ್ ಮ್ಯಾನುಯೆಲ್. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | BMTC ಬಸ್ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights