ಮನುಷ್ಯರಂತೆ ಸೋಪ್ ಮತ್ತು ಬ್ರಷ್‌ನಿಂದ ಬಟ್ಟೆ ಒಗೆದ ಚಿಂಪಾಂಜಿ : ವಿಡಿಯೋ ವೈರಲ್!

ಸಾಮಾನ್ಯವಾಗಿ ಮನಷ್ಯರು ಬಟ್ಟೆ ಒಗೆಯುವುದನ್ನ ನಾವು ನೀವು ನೋಡಿದ್ದೇವೆ. ಆದರೆ ಇಲ್ಲೊಂದು ಚಿಂಪಾಂಜಿ ಥೇಟ್ ಮನುಷ್ಯರಂತೆ ಬಟ್ಟೆ ಒಗೆಯುವ ಮೂಲಕ ನೋಡುಗರನ್ನು ಬೆರಗಾಗಿಸಿದೆ.

ಚಿಂಪಾಂಜಿ ತನ್ನ ಕೈಗಳಿಂದ ಬಟ್ಟೆ ತೊಳೆಯುವ ಸೂಪರ್ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 30 ಸೆಕೆಂಡುಗಳ ಈ ವಿಡಿಯೋವನ್ನು ಶರ ವೇಗದಲ್ಲಿ ಹಂಚಿಕೊಳ್ಳಲಾಗಿದ್ದು ಪ್ರಾಣಿಪ್ರಿಯರು ಇದನ್ನು ಮೆಚ್ಚಿಕೊಂಡಾಡಿದ್ದಾರೆ.

ವಿಡಿಯೋವನ್ನು ಮೃಗಾಲಯದಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಇದನ್ನು ಎಲ್ಲಿ ಚಿತ್ರಿಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇದನ್ನು ಸಚಿನ್ ಶರ್ಮಾ ಎನ್ನುವವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಿಂಪಾಂಜಿ ತನ್ನ ಕೈಗಳಿಂದ ನೀರಿನ್ನು ಸಿಂಪಡಿಸಿ ಬಟ್ಟೆ ಒಗೆಯುವುದನ್ನು ಕಾಣಬಹುದು. ವಿಡಿಯೋದಲ್ಲಿ ಚಿಂಪಾಂಜಿ ಮೊದಲು ಹಳದಿ ಟಿ-ಶರ್ಟ್ ಮೇಲೆ ಸೋಪ್ ಹಚ್ಚಿ ಅದನ್ನು ಕೈಯಿಂದ ಉಜ್ಜುತ್ತದೆ. ಮನುಷ್ಯರಂತೆ ಅದು ಟಿ-ಶರ್ಟ್ ಅನ್ನು ಸ್ವಚ್ಛಗೊಳಿಸಲು ಬ್ರಷ್ ಅನ್ನು ಬಳಸುತ್ತದೆ.

ವೈರಲ್ ಆಗಿರುವ ವಿಡಿಯೋ ಈಗಾಗಲೇ 3000 ಕ್ಕೂ ಹೆಚ್ಚು ಲೈಕ್ಸ್ ಸಂಗ್ರಹಿಸಿದೆ. ಈ ಮುದ್ದಾದ ಮತ್ತು ತಮಾಷೆಯ ವೀಡಿಯೊವನ್ನು ನೆಟ್ಟಿಗರು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ ಮತ್ತು ಸಾಕಷ್ಟು ಬಳಕೆದಾರರು ಪೋಸ್ಟ್‌ನಲ್ಲಿ ತಮ್ಮ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಒಬ್ಬ ಬಳಕೆದಾರ ತಮಾಷೆಯಾಗಿ, “ನಾನು ನನ್ನ ಹೊಸ ಮನೆಗೆಲಸಗಾರನನ್ನು ಕಂಡುಕೊಂಡೆ” ಎಂದು ಬರೆದಿದ್ದಾರೆ.

ನೀವು ಒಂದು ಬಾರಿ ವೀಡಿಯೋವನ್ನು ನೋಡಿಬಿಡಿ..

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights