ಫ್ಯಾಕ್ಟ್‌ಚೆಕ್ : RSS ನೊಂದಿಗೆ ನೆಹರೂ ನಂಟು! ವಾಸ್ತವವೇನು?

ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು RSS ಶಾಖೆಯ ಸಭೆಯಲ್ಲಿ ಭಾಗವಹಿಸಿದ್ದರೇ ? ಇಂತಹದೊಂದು ಪ್ರಶ್ನೆ ಉದ್ಭವವಾಗಲೂ ಕಾರಣವಾಗಿರುವುದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ಆ ಒಂದು ಚಿತ್ರ.

“ಈ ಫೊಟೋವನ್ನು ಬಹಳ ಕಷ್ಟಪಟ್ಟು ಸಂಗ್ರಹಿಸಲಾಗಿದೆ. ಇಲ್ಲಿ ನೆಹರು ಆರೆಸ್ಸೆಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ಏನು ಹೇಳುತ್ತೀರಾ ?  ನೆಹರೂ ಕೂಡ ಈಗ ಕೇಸರಿ ಭಯೋತ್ಪಾದಕರೇ ? ಅಥವಾ ಸೆಕ್ಯೂಲರ್?  ಎಂದು ದಯವಿಟ್ಟು ನಮಗೆ ತಿಳಿಸಿ”  ಈ ಸಂದೇಶದೊಂದಿಗೆ ನೆಹರೂ ಅವರ ಎರಡು ಭಾವಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಚಡ್ಡಿ ಎಂದು ನಿಂದಿಸುವ ಮುಟ್ಟಾಳರೇ, ನೆಹರು ಚೆಡ್ಡಿ ಧರಿಸಿದ್ದು ಹಿಂದೂಸ್ಥಾನವನ್ನು ಯಾಮಾರಿಸೋಕಾ? ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ಅನ್ನು ಶರ್ಮ ಎಂಬುವವರು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ, ಪಂಡಿತ್ ಜವಾಹರಲಾಲ್ ನೆಹರೂ ಅವರು ಚೆಡ್ಡಿ ಮತ್ತು ಕ್ಯಾಪ್ ಧರಿಸಿ  RSSನ ಪ್ರೋಟೋಕಾಲ್‌ಗೆ ಹೋಲುವ ಕೋಲು ಹಿಡಿದಿರುವುದನ್ನು ಕಾಣಬಹುದು. ಹಾಗಿದ್ದರೆ ನೆಹರೂ ಕೂಡ RSS ನ ಸಮವಸ್ತ್ರ ಧರಿಸಿ ಶಾಖೆಯಲ್ಲಿ ಭಾಗವಹಿಸಿದ್ದರೆ? ಈ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಚಿತ್ರದಲ್ಲಿ ಪಂಡಿತ್ ಜವಾಹಾರಲಾಲ್ ನೆಹರೂ ಇದ್ದಾರೆ, ಆದರೆ ಅವರು RSS ಶಾಖೆಯಲ್ಲಿ ಭಾಗವಹಿಸಿಲ್ಲ. ಈ ಛಾಯಾಚಿತ್ರವು 1939 ನೇ ಇಸವಿಯದ್ದು ಮತ್ತು ಇದನ್ನು ಉತ್ತರ ಪ್ರದೇಶದ ನೈನಿಯಲ್ಲಿ ಕ್ಲಿಕ್ ಮಾಡಲಾಗಿದೆ. ಪಂಡಿತ್ ನೆಹರೂ ಬಿಳಿ ಟೋಪಿ ಧರಿಸಿರುವುದನ್ನು ಕಾಣಬಹುದು. ಆದರೆ, 1925 ರಲ್ಲಿ ಪರಿಚಯಿಸಲಾದ RSSನ ಸಮವಸ್ತ್ರವು ಕಪ್ಪು ಟೋಪಿಯನ್ನು ಹೊಂದಿತ್ತು, ಬಿಳಿ ಟೋಪಿ ಅಲ್ಲ. 2017 ರ ಡಿಸೆಂಬರ್‌ನಲ್ಲಿ ಹಿಂದಿ ಸುದ್ದಿ ಚಾನೆಲ್ ನ್ಯೂಸ್ 18 ಇಂಡಿಯಾ ನಡೆಸಿದ Fact check ಇದನ್ನು ಸೂಚಿಸಲಾಗಿದೆ, ಇದು ಈ ಚಿತ್ರವು ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿದೆ ಎಂದು ಸೂಚಿಸುತ್ತದೆ. ವಾಹಿನಿಯ ವರದಿ ಪ್ರಕಾರ, ಪಂಡಿತ್ ನೆಹರೂ ಅವರು ಸೇವಾದಳದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆಯೇ ಹೊರತು ಆರ್‌ಎಸ್‌ಎಸ್ ಶಾಖೆಯಲ್ಲಿ ಅಲ್ಲ.

ಸೇವಾದಳ ಎಂದರೇನು?

ಸೇವಾದಳವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ, ತಳಮಟ್ಟದ ಸಂಘಟನೆಯಾಗಿದೆ. ಇದನ್ನು 1924 ರಲ್ಲಿ ಹಿಂದೂಸ್ತಾನಿ ಸೇವಾ ದಳವಾಗಿ ಸ್ಥಾಪಿಸಲಾಯಿತು ಮತ್ತು ಅದರ ಸ್ಥಾಪನೆಯ ಹಿಂದಿನ ಉದ್ದೇಶವು ಬ್ರಿಟಿಷ್ ಆಳ್ವಿಕೆಯನ್ನು ಎದುರಿಸುವುದಾಗಿತ್ತು. ಸೇವಾದಳದ ಸದಸ್ಯರಿಗೆ ದೈಹಿಕ ತರಬೇತಿ ನೀಡಲಾಗುತ್ತಿತ್ತು. 1931 ರಲ್ಲಿ, ಇದು ಕಾಂಗ್ರೆಸ್ಸಿನ ಮುಖ್ಯ ಸ್ವಯಂಸೇವಕ ಅಂಗವಾಯಿತು. ಸೇವಾದಳದ ಸಮವಸ್ತ್ರವು RSS ಹಿಂದಿನ ಸಮವಸ್ತ್ರವನ್ನು ಹೋಲುತ್ತದೆ, ಇದರಲ್ಲಿ ಕಪ್ಪು ಟೋಪಿ, ಖಾಕಿ ಶಾರ್ಟ್ಸ್ ಮತ್ತು ಕೋಲು ಸೇರಿದೆ. ಸೇವಾದಳದ ಸಮವಸ್ತ್ರದಲ್ಲಿರುವ ಪಂಡಿತ್ ನೆಹರೂ ಅವರ ಹಲವಾರು ಛಾಯಾಚಿತ್ರಗಳು ಅಂತರ್ಜಾಲದಲ್ಲಿವೆ.

 

ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ RSS ಮತ್ತು BJP ಯ ಬೆಂಬಲಿಗರನ್ನು ಚೆಡ್ಡಿಗಳು ಎಂದು ಟ್ರೋಲ್ ಮಾಡುವ ಹಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುತ್ತವೆ. ಕಾಂಗ್ರೆಸ್ ಮತ್ತು ನೆಹರೂ ಕುಟುಂಬದ್ದ ಬಗ್ಗೆ BJPಯ IT ಸೆಲ್‌ಗಳಲ್ಲಿ ಇಂತಹವೇ ಹೆಚ್ಚು ಸುಳ್ಳುಗಳನ್ನು ಹಂಚುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ.

Congress Seva Dal Once Struck Fear Among the British; Now It's On Its Last  Legs

ಒಟ್ಟಾರೆಯಾಗಿ ಹೇಳುವುದಾದರೆ, ನೆಹರೂ ಎಂದಿಗೂ RSSನ ಶಾಖೆಗೆ ಹೋಗಿಲ್ಲ ಮತ್ತು ಅದರ ಸಮವಸ್ತ್ರವನ್ನು ಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಪಂಡಿತ್ ಜವಾಹರಲಾಲ್ ನೆಹರೂ ಸೇವಾದಳದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸೆರೆಹಿಡಿಯಲಾದ ಪೋಟೋಗಳನ್ನು ಸುಳ್ಳು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ನಮಾಜ್ ಅಭ್ಯಾಸ ಮಾಡಿಸಲಾಗಿದೆಯೇ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : RSS ನೊಂದಿಗೆ ನೆಹರೂ ನಂಟು! ವಾಸ್ತವವೇನು?

  • June 5, 2023 at 4:05 pm
    Permalink

    ಸತ್ಯ ತಿಳಿಯಲು ಸಾಧ್ಯವಾಯಿತು. ಧನ್ಯವಾದಗಳು

    Reply

Leave a Reply

Your email address will not be published.

Verified by MonsterInsights