FACT CHECK | ಮೋದಿಗೆ ಮತ ಹಾಕುವಂತೆ ಪಾಕಿಸ್ತಾನದ ಮುಸ್ಲಿಂ ವ್ಯಕ್ತಿ ಹೇಳುತ್ತಿದ್ದಾನೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಸಲಾಮ್ ಅಲೇಕುಮ್, ನಾನು ಪಾಕಿಸ್ತಾನದ ಆಸಿಫ್ ಜರ್ದಾರಿ. ನಾನು ಒಬ್ಬ ಮುಸಲ್ಮಾನ. ನಮ್ಮ ದೇಶದಲ್ಲಿ (ಪಾಕಿಸ್ತಾನ) ಕ್ಷಾಮ ಮತ್ತು ಹಸಿವು ವಿಪರೀತವಾಗಿದೆ. ವಾಹನಗಳಿಗೆ ಪೆಟ್ರೋಲ್ ಇಲ್ಲ. ಖರ್ಚು ಮಾಡಲು ಕೈಯಲ್ಲಿ ಹಣವಿಲ್ಲ. ನಮ್ಮ ರಾಷ್ಟ್ರ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ, ಭಾರತೀಯ ಮುಸ್ಲಿಮರೇ, ನಿಮ್ಮ ರಾಷ್ಟ್ರ ವಿಶ್ವಗುರು ಸ್ತಾನದಲ್ಲಿದೆ, ನಿಮ್ಮ ಪ್ರಧಾನಿ ಮೋದಿಯವರ ಆಡಳಿತವನ್ನು ಬೆಂಬಲಿಸಿ ಎಂಬ ಪ್ರತಿಪಾಧನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

 

ಪಾಕಿಸ್ತಾನದ ಆಸಿಫ್ ಜರ್ದಾರಿ ಎಂಬ ಮುಸ್ಲಿಂ ವ್ಯಕ್ತಿ ಮೋದಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ ಎಂದು ಪ್ರತಿಪಾದಿಸಿ 2024 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಲಪಂಥಿಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಪಾಕಿಸ್ತಾನದವನೇ  ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದಲ್ಲಿ ‘ಧೀರೇಂದ್ರ_ರಾಘವ್_79’ ಎಂಬ ವಾಟರ್ ಮಾರ್ಕ್ ಇರುವುದನ್ನು ಕಾಣಬಹುದು. ಧೀರೇಂದ್ರ ರಾಘವ್ ಎಂಬ ಹೆಸರನ್ನು ಕೀವರ್ಡ್‌ನಂತೆ ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 23 ರಂದು ‘ದಿರೇಂದ್ರ ರಾಘವ್’ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಅದೇ ರೀತಿ ಹಿಂದೂ, ಮುಸ್ಲಿಂ ಎಂಬ ಹಿನ್ನಲೆಯಲ್ಲಿ ಹಲವು ರೀಲ್ಸ್‌ಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ ಈತ ಒಬ್ಬ ಕಲಾವಿದ ಎಂಬ ಮಾಹಿತಿ ಲಭ್ಯವಾಗಿದೆ.

ಈ ವ್ಯಕ್ತಿ ಪಾಕಿಸ್ತಾನದವನಲ್ಲ:

ಈತನ ಸ್ಥಳದ ಬಗ್ಗೆ ಪರಿಶೀಲಿಸಿದಾಗ ಇವನು ಭಾರತದ ಉತ್ತರ ಪ್ರದೇಶದ ಆಗ್ರಾದವರು ಎಂದು ತಿಳಿದುಬಂದಿದೆ. ಈತ ಒಬ್ಬ ಡಿಜಿಟಲ್ ವಿಡಿಯೋ ಕ್ರಿಯೇಟರ್ ಮತ್ತು ಕಲಾವಿದ ಎಂದು ಹೇಳಿಕೊಂಡಿದ್ದಾನೆ. ಬಿಜೆಪಿ ಪರ ಪ್ರಚಾರ ಮಾಡುವ ವಿಡಿಯೋಗಳನ್ನೂ ಬಿಡುಗಡೆ ಮಾಡಿದ್ದಾನೆ. ಹಾಗಾಗಿ ಈತ ಪಾಕಿಸ್ತಾನದವನಲ್ಲ ಆದರೆ ಈತ ತಾನು ಪಾಕಿಸ್ತಾನದವನು ಎಂದು ಹೇಳಿಕೊಂಡು ವಿಡಿಯೋ ಮಾಡಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಯೂಟರ್ನ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಆಡಳಿತವನ್ನು ಬೆಂಬಲಿಸಿ ಎಂದು ಪಾಕಿಸ್ತಾನದ ಮುಸ್ಲಿಂರೊಬ್ಬರು ಹೇಳುತ್ತಿದ್ದಾರೆ ಎಂಬ ಪ್ರತಿಪಾದನೆ ಸುಳ್ಳು. ಈತನ ಹೆಸರು ಧೀರೇಂದ್ರ ರಾಘವ್ ಹಾಗೂ ಉತ್ತರ ಪ್ರದೇಶದ ಆಗ್ರ ಮೂಲದ ನಟ ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ. ಅಲ್ಲದೆ ಬಿಜೆಪಿ ಪರವಾಗಿ ಪ್ರಚಾರ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾನೆ. ಈಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂತಹ ವಿಡಿಯೋಗಳನ್ನು ಬಲಪಂಥೀಯ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು BJP ನಾಯಕರು ಅವಮಾನಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights