Categories
Breaking News District Political State

‘ವಕೀಲರಿಂದ ಗೂಂಡಾಗಿರಿ’ ಹೇಳಿಕೆ : ಸಿದ್ದರಾಮಯ್ಯ ಕ್ಷಮೆಯಾಚಿಸುವಂತೆ ಪ್ರತಿಭಟನೆ…

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ನಳಿನಿ ಪರ ವಕಾಲತ್ತು ವಹಿಸದ ವಕೀಲರಿಗೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅವಹೇಳನಕಾರಿ ಹೇಳಿಕೆ ಆರೋಪ ಮಾಡಿ
ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಆರೋಪಿಗಳ ಪರ ವಕಾಲತ್ತು ವಹಿಸಿದ ನಿರ್ಧಾರ ಕೈಗೊಂಡಿದ್ದ ಮೈಸೂರು ಜಿಲ್ಲಾ ವಕೀಲರ ಸಂಘದ ವಿರುದ್ಧ ನೆನ್ನೆ ಸಿದ್ದರಾಮಯ್ಯ ವಕೀಲರಿಂದ ಗೂಂಡಾಗಿರಿ ಎಂದು ಹೇಳಿಕೆ‌ ನೀಡಿದ್ದರು.

ದೇಶದ್ರೋಹದ ಆರೋಪದ ಪ್ರಕರಣಗಳಿಗೆ ವಕಾಲತ್ತು ವಹಿಸದಿರುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಇದನ್ನೇ ನಳಿನಿ ವಿಚಾರದಲ್ಲಿ ಪಾಲಿಸಲಾಗಿದೆ. ಇದಕ್ಕೆ  ಸಿದ್ದರಾಮಯ್ಯ ವಕೀಲರಿಂದ ಗೂಂಡಾಗಿರಿ ಎನ್ನುವ ಹೇಳಿಕೆ ನೀಡಿದ್ದು, ಈ ಹೇಳಿಕೆ ಖಂಡಿಸಿ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದಿದ್ದಾರೆ. ಸಿದ್ದರಾಮಯ್ಯ ವಕೀಲರ ಬಹಿರಂಗ ಕ್ಷಮೆಯಾಚಿಸುವಂತೆ ಒತ್ತಾಯ ಹೇಳಿ ಬಂದಿದ್ದು,  ಇಲ್ಲವಾದರೆ ರಾಜ್ಯದಾದ್ಯಂತ ವಕೀಲರಿಂದ ಪ್ರತಿಭಟನೆ‌ ಎಚ್ಚರಿಕೆ ಕೊಡಲಾಗಿದೆ.

ಈ ವೇಳೆ ಮೈಸೂರಿನಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್, ಸಿದ್ದರಾಂಯ್ಯ ಅವರು ಆ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು.
ಕೆಲವು ರಾಜಕೀಯ ವ್ಯಕ್ತಿಗಳ ಚಿತಾವಣೆಯಿಂದ ಈ ಘಟನೆ ನಡೆದಿದೆ. ಇದರಿಂದ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಇದ್ದ ಕಾಲದಿಂದಲೂ ದೇಶದ್ರೋಹದ ಪ್ರಕರಣಗಳ ವಕಾಲತ್ತು ವಹಿಸಿಲ್ಲ. ಇದು ಹೊಸದಾದ ಸಂಪ್ರದಾಯ ಅಲ್ಲ. ಪೊಲೀಸರು ಪ್ರಕರಣ ದಾಖಲಿಸಿದ ನಂತರ ನಾವು ನಿರ್ಧಾರ ಕೈಗೊಳ್ಳೋದು. ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಸಂಘದ ಸದಸ್ಯರಾದ ಮಂಜುಳಾ ಮಾನಸ ಅವರನ್ನು ಅಮಾನತು ಮಾಡಲಾಗಿದೆ. ಮಂಜುಳಾ ಮಾನಸ ಅವರಿಂದ ಸಿದ್ದರಾಮಯ್ಯ ಅವರನ್ನು ದಾರಿತಪ್ಪಿಸುವ ಕೆಲಸ ಆಗಿದೆ. ಸಂಘದ ವಿಚಾರಗಳು ಆಂತರಿಕ ವಿಚಾರ. ಅದನ್ನು ಹೊರಗೆ ತೆಗೆದುಕೊಂಡು ಹೋಗಲಾಗಿದೆ. ಸಂಘ ವಿರುದ್ದ ಹೇಳುವ ಕೆಲಸ ಮಾಡಿದ್ದಾರೆ.  ಈ ಎಲ್ಲಾ ಕಾರಣಗಳಿಂದ ಮಂಜುಳಾ ಮಾನಸ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Categories
Breaking News District State

CAA ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ : ಹೆದ್ದಾರಿ ವಾಹನ ಸಂಚಾರ ಬದಲು

CAA ವಿರೋಧಿಸಿ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಸಮಾವೇಶ ಹಿನ್ನಲೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ.

ಇಂದು ಮಾಧ್ಯಾಹ್ನ ನಂತರ ರಸ್ತೆ ಸಂಚಾರ ಬದಲಾವಣೆಗೆ ತೀರ್ಮಾನಿಸಲಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ಮಂಗಳೂರಿಗೆ ಹೋಗಲು ಹಾಗೂ  ಮಂಗಳೂರಿನಿಂದ ಬೆಂಗಳೂರು ಕಡೆ ಸಾಗುವ ವಾಹನಗಳು ಪಂಪ್ ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಬೆಂಗಳೂರಿಗೆ ತೆರಳುವ ಅವಕಾಶ ಕಲ್ಪಿಸಲಾಗಿದೆ. ಬಿ.ಸಿ.ರೋಡ್, ಕೈಕಂಬ, ಪೊಳಲಿ ಮೂಲಕವೂ ಮಂಗಳೂರು ಸಂಪರ್ಕಿಸಲು ಅವಕಾಶ ಮಾಡಿಕೊಡಲಾಗಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅಡ್ಯಾರ್ ಪ್ರದೇಶ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನೆ ಸಮಾವೇಶ ಮಾಡಲಾಗುತ್ತದೆ.

 

Categories
Breaking News District State

ಕಾರವಾರದಲ್ಲಿ ಸಮುದ್ರಕ್ಕಿಳಿದು ಮೀನುಗಾರರ ಪ್ರತಿಭಟನೆ : ಇಬ್ಬರು ಅಸ್ವಸ್ಥ….!

ಕಾರವಾರ ವಾಣಿಜ್ಯ ಬಂದರು‌ ವಿಸ್ತರಣೆಗೆ ಕಾಮಗಾರಿ ಪ್ರಾರಂಭಕ್ಕೆ ವಿರೋಧಿಸಿದ ಮೀನುಗಾರರ ಪೈಕಿ ಇಬ್ಬರು ನೀರಿಗಿಳಿದು ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಆಕ್ರೋಶ ತಾರಕ್ಕಕ್ಕೇರಿದ್ದು ಪೋಲಿಸ್ ಮತ್ತು ಮೀನುಗಾರರ ಜಟಾಪಟಿ ಜೋರಾಯ್ತು.

ಕಳೆದ ಒಂದು ತಿಂಗಳ‌ ಹಿಂದೆಯೇ ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆಯ ಕಾಮಗಾರಿ ಆರಂಭವಾಗಬೇಕಿತ್ತು. ಆದ್ರೆ ಇಲ್ಲಿನ ಮೀನುಗಾರರು ಕಾಮಗಾರಿ ಪ್ರಾರಂಭಕ್ಕೆ ಸಾಕಷ್ಟು ವಿರೋಧ ಮಾಡಿ ಹತ್ತಯ ಹಲವು ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಕ್ಕೆ ತಡೆಯೊಡ್ಡಿದ್ದರು. ಈ ಹಿನ್ನಲೆಯಲ್ಲಿ ವಿಳಂಬವಾಗಿ ಇವತ್ತು ಖಾಕಿ ಸರ್ಪಗವಾಲಿನಲ್ಲಿ ಕಾಮಗಾರಿ ಆರಂಭ ಮಾಡಲಾಗಿತ್ತು. ಮೀನುಗಾರರ ಸಾಕಷ್ಟು ವಿರೋಧದ ಮದ್ಯೆ ಕಾಮಗಾರಿಗೆ ಕೈ ಹಾಕಿದ ಬಂದರು ಇಲಾಖೆ ಮೀನುಗಾರರ ಪ್ರತಿಭನೆಯ ಬಿಸಿ ತಟ್ಟಿಸಿಕೊಂಡ್ರು.

ಕಾಮಾಗಾರಿ ವಿರೋಧಕ್ಕೆ ಮುಂದಾದ ಮೀನುಗಾರರು ಪೋಲಿಸ್ ವಶಕ್ಕೆ

ವಿರೋಧಕ್ಕೆ ಮುಂದಾದ ಮೀನುಗಾರರನ್ನ ಪೋಲಿಸರು ಬಂದಿಸಿದ್ರೆ. ಮೀನುಗಾರ ಮಹಿಳೆಯರು ಪೋಲಿಸ್ ಸರ್ಪಗಾವಲನ್ನ ಮುರಿದು ಕಾಮಗಾರಿ ಸ್ಥಗಿತಕ್ಕೆ ಮುಂದಾದ್ರು.

ಒಂದೆಡೆ ಕಡಲ ತೀರದುದ್ದಕ್ಕೂ ಪೋಲಿಸ್ ಸರ್ಪಗಾವಲನ್ನ ಹಾಕಾಲಗಿತ್ತು..ಇನ್ನೊಂದೆಡೆ ಕಾಮಗಾರಿ ವಿರೋಧಕ್ಕೆ ಮುಂದಾದವರನ್ನ ಪೋಲಿಸರು ವಶಕ್ಕೆ ಪಡೆಯುತ್ತಿದ್ರು. ಮತ್ತೊಂದೆಡೆ ಬಂಧನ ಖಂಡಿಸಿ ಮೀನುಗಾರರ ವಿವಿಧ ಪ್ರತಿಭಟನೆ. ಪೋಲಿಸ್ ಸರ್ಪಗಾವಲಿನಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತೀವ್ರ ವಿರೋಧ. ಈ ದೃಶ್ಯಗಳು ಇವತ್ತಿನ ಕಾರವಾರ ವಾಣಿಜ್ಯ ಬಂದರು‌ವಿಸ್ತರಣೆ ವಿರೋಧದ ಹೈಲೈಟ್ಸ್ ಗಳಾಗಿದ್ದಾವು..

ಸಾಗರಮಾಲ ಯೋಜನೆಯಡಿ ಕಾರವಾರ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಆದ್ರೆ ಬಂದರು ವಿಸ್ತರಣೆಯಿಂದ ಟಾಗೋರ್ ಕಡಲ ತೀರಕ್ಕೆ ಹಾನಿಯಾಗಲಿದ್ದು ಮೀನುಗಾರಿಕೆ ಮೇಲೆ ಪರಿಣಾಮ ಬೀಳಲಿದ್ದು ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆ ಬೇಡ ಎನ್ನುವುದು ಮೀನುಗಾರರ ಆಗ್ರಹವಾಗಿತ್ತು. ಈ ಬಗ್ಗೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇವತ್ತು ಮೀನುಗಾರರ ಹೋರಾಟದ ನಡುವೆಯೇ ಪೋಲಿಸ್ ಸರ್ಪಗಾವಲಿನಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆ ಕಾವು ಜೋರಾಯ್ತು..

ಇನ್ನು ಮೀನುಗಾರರನ್ನ ವಶಕ್ಕೆ ಪಡೆಯುತ್ತಿದ್ದಂತೆ ಸಿಟ್ಟಿಗೆದ್ದ ಕೆಲ ಮೀನುಗಾರರು ಕಾರವಾರ ನಗರದಲ್ಲಿ ಒತ್ತಾಯ ಪೂರ್ವಕವಾಗಿ ಕಾರವಾರ ಬಂದ್ ಮಾಡಲು ಮುಂದಾದರು. ಅಂಗಡಿ ಮುಂಗಟ್ಟು ಬಂದ್ ಮಾಡಲು ಒತ್ತಾಯ ಮಾಡುತ್ತಿದ್ದ ಕೆಲವರನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದರು ಇದರಿಂದ ಕೆಲ ಕಾಲ ಪರಿಸ್ಥಿತಿ ಬಿಗುವಿತ ವಾತವಾರಣಕ್ಕೆ ತಿರುಗಿತ್ತು. ನಂತರ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿದರು. ಅಂಗಡಿ ಮುಂಗಟ್ಟುಗಳನ್ನ ವರ್ತಕರು ಸ್ವಯಂ ಘೋಷಿತವಾಗಿ ಬಂದ್ ಮಾಡಿದರು. ಇನ್ನು ಕಾರವಾರದ ಪೊಲೀಸ್ ಹೆಡ್ ಕ್ವಾಟರ್ ನಲ್ಲಿ ಬಂಧನಕ್ಕೊಳಗಾದ ಮೀನುಗಾರರನ್ನ ಇಡಲಾಗಿತ್ತು. ಪೊಲೀಸರ ಬಂಧನದಲ್ಲೇ ಮೀನುಗಾರರು ಪ್ರತಿಭಟನೆ ಮುಂದುವರೆಸಿದರು.

ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಯನ್ನ ಮುಂದುವರೆಸಿದ್ದು ಮೀನುಗಾರರು ತಮ್ಮ ಹೋರಾಟವನ್ನ ಮುಂದುವರೆಸಿದ್ದಾರೆ. ಇನ್ನೊಂದೆಡೆ ಇಂದು ಮೀನು ಮಾರಾಟ ಮಾಡುವುದನ್ನ ಸಹ ಮಹಿಳೆಯರು ಬಂದ್ ಮಾಡುವ ಮೂಲಕ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಇದೀಗ ಮೀನುಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ದಿನದಲ್ಲೂ ಕಾಮಗಾರಿ ವಿರೋಧಿಸಿ ಇನ್ನಷ್ಟು ಪ್ರತಿಭಟನೆ ನಡೆಯುವುದರಲ್ಲಿ ಅನುಮಾನವಿಲ್ಲ..

 

 

 

Categories
Breaking News National Political State

ದೆಹಲಿಯಲ್ಲಿ ಬುಗಿಲೆಬ್ಬಿಸಿದ ಸಿಎಎ ವಿರುದ್ಧದ ಪ್ರತಿಭಟನೆ ಕಾವು : ಎಲ್ಲೆಲ್ಲೂ ಬಂಧನ

ಸಿಎಎ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ವಿರುದ್ಧ ದೆಹಲಿಯಲ್ಲಿ ಇಂದು ಹಲವಾರು ಪ್ರತಿಭಟನೆಗಳು ನಡೆದಿದ್ದು ಎಲ್ಲಾ ಕಡೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

“ಯುಪಿಯಲ್ಲಿ ಸುಮಾರು 20 ಜನರು ಕೊಲ್ಲಲ್ಪಟ್ಟರು!, 5000 ಕ್ಕಿಂತಲೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಸ್ಲಿಂ ಪ್ರದೇಶಗಳು ಮತ್ತು ಮನೆಗಳ ಮೇಲೆ ಯುಪಿ ಪೊಲೀಸರು ದಾಳಿ ಮತ್ತು ನಿಂದನೆ ನಡೆಸುತ್ತಿದ್ದಾರೆ. ಹಲವೆಡೆ ಇಂಟರ್ನೆಟ್‌ ಬ್ಲಾಕ್‌ ಮಾಡಲಾಗಿದೆ. 21,000 ಕ್ಕೂ ಹೆಚ್ಚು ಜನರ ಮೇಲೆ ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನ ಜಾಮಿಯಾ ಸಮನ್ವಯ ಸಮಿತಿಯು ಖಂಡಿಸಿ ದೆಹಲಿಯ ಯುಪಿ ಭವನ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಇನ್ನೊಂದೆಡೆ ಸಿಎಎ ವಿರೋಧಿಸಿ ಮತ್ತು ಭೀರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ರವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೀಮ್‌ ಆರ್ಮಿ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದ್ದಾರೆ. ಭೀಮ್‌ ಆರ್ಮಿ ಸದಸ್ಯರು ಜೋರ್‌ ಬಾಗ್‌ನಿಂದ ಪ್ರಧಾನಮಂತ್ರಿ ಮನೆಯವರೆಗೆ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು ಎಂದು ಖುಷ್‌ರವರು ತಿಳಿಸಿದ್ದಾರೆ.

ಚಂದ್ರಶೇಖರ್‌ ಅಜಾದ್‌ರವರು ಕಳೆದ ವಾರ ಶಾಂತಿಯುತವಾಗಿ ಜಮಾ ಮಸೀದಿಯಲ್ಲಿ ಹೋರಾಟ ನಡೆಸುತ್ತಿದ್ದರು. ಅಲ್ಲಿಂದ ದೆಹಲಿ ಗೇಟ್‌ 2 ಕಿ.ಮೀ ದೂರದಲ್ಲಿದೆ. ಆದರೆ ಪೊಲೀಸರು ದೆಹಲಿ ಗೇಟ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಚಂದ್ರಶೇಖರ್‌ ಕಾರಣರೆಂದು ಬಂಧಿಸಿ ಅವರ ಮೇಲೆ ಗಲಭೆ ಸೇರಿದಂತೆ ಹಲವು ಗಂಭೀರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಎ, ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ದೇಶಾದ್ಯಂತ ನಡೆಯುತ್ತಿದೆ. ಆದರೆ ಬಿಜೆಪಿ ಆಳ್ವಿಕೆಯುಳ್ಳ ರಾಜ್ಯಗಳಲ್ಲಿ ಮಾತ್ರ ಹಿಂಸಾಚಾರ ಉಲ್ಭಣಿಸಿದೆ. ಉಳಿದ ಕಡೆ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಮುಸ್ಲಿಮರು ಮತ್ತು ದಲಿತರು ಎಲ್ಲಿಯೂ ಹಿಂಸಾಚಾರಕ್ಕಿಳಿದಿಲ್ಲ. ಪೊಲೀಸರು ಹಿಂಸಾಚಾರಕ್ಕೆ ಕಾರಣ ಎಂದು ಖುಷ್‌ ಆರೋಪಿಸಿದ್ದಾರೆ.

ಇನ್ನು ಕಳೆದ ವಾರ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ಜಾಮಾ ಮಸೀದಿಯಲ್ಲಿ ಸಾವಿರಾರು ಜನರು ಇಂದೂ ಸಹ ಸೇರಿ ಪ್ರತಿಭಟನೆ ಆರಂಭಿಸಿದ್ದಾರೆ.

Categories
Breaking News District Political State

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರು, ಕೋಲಾರದಲ್ಲಿ ಪ್ರತಿಭಟನೆ…

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸಿ ಬೆಂಗಳೂರು ಹಾಗೂ ಕೋಲಾರದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.

ಕೋಲಾರದ ಅಮ್ಮವಾರಿ ಪೇಟೆಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾಜಿ ಸ್ಪೀಕರ್, ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೋಲಾರ ಶಾಸಕ ಶ್ರೀನಿವಾಸ ಗೌಡ, ವಿಧಾನ ಪರಿಷತ್ ಸದಸ್ಯ ನಝೀರ್ ಅಹ್ಮದ್, ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಮೊದಲಾದವರು ಭಾಗವಹಿಸಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶಕ್ಕೂ ಮೊದಲು ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

ಇನ್ನೂ ಬೆಂಗಳೂರಿನಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಪಸಂಖ್ಯಾತರ ಸಮುದಾಯ ಹಾಗೂ ಪ್ರಗತಿ ಪರ ಸಂಘಟನೆಗಳಿಂದ ಕಂಟೋನ್ಮೆಂಟ್ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.

Categories
Breaking News District National Political State

ಎನ್ ಆರ್ ಸಿ, ಸಿಎಎ ವಿರೋಧಿಸಿ ಮಡಿಕೇರಿ, ಕನಕಪುರ, ಮೈಸೂರಿನಲ್ಲಿ ಪ್ರತಿಭಟನೆ…

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ಮಾಡಲಾಗುತ್ತಿದ್ದು, ರಾಜ್ಯದಲ್ಲೂ ಎನ್ ಆರ್ ಸಿ, ಸಿಎಎ ವಿರೋಧದ ಕಿಚ್ಚು ಇನ್ನೂ ಆರಿಲ್ಲ.  ರಾಜ್ಯದ ಕೆಲವು ಜಿಲ್ಲೆಯಲ್ಲಿ ಇಂದೂ ಪ್ರತಿಭಟನೆ ಕೈಗೊಳ್ಳಲಾಗಿದೆ.

ಮಡಿಕೇರಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಎನ್ ಆರ್ ಸಿ, ಸಿಎಎ ವಿರೋಧಿಸಿ  ಪ್ರತಿಭಟನೆ ಮಾಡಲಾಗುತ್ತಿದೆ. ಎನ್‌ಆರ್‌ಸಿ ಸಿಎಎ ವಾಪಸ್ಸು ಪಡೆಯುವಂತೆ ಆಗ್ರಹಿಸಿ,  ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ ವಿದ್ಯಾರ್ಥಿಗಳು.

ಇನ್ನೂ ರಾಮನಗರ ಜಿಲ್ಲೆ ಕನಕಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಮಿನಿವಿಧಾನಸೌಧದ ಆವರಣದಲ್ಲಿ ಸಾವಿರಾರು ಜನ ಮುಸ್ಲಿಂಮರು ಜಮಾವಣೆಯಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಭಾವಚಿತ್ರವಿಡಿದು  CAA, NRC ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ.

ಇತ್ತ ಪೌರತ್ವ ಕಾಯ್ದೆ ವಿರೋಧಿಸಿ ಮೈಸೂರಿನ ಡಿಸಿ ಕಚೇರಿ ಬಳಿ ಜೆಡಿಎಸ್ ಪ್ರತಿಭಟನೆ ಕೈಗೊಂಡಿದೆ. ಮಾಜಿ ಸಚಿವ ಸಾರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನೆಯಲ್ಲಿ  ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್, ಪಾಲಿಕೆ ಸದಸ್ಯರು ಸೇರಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಪ್ರಧಾನ ಮಂತ್ರಿ ಹಾಗೂ ಅಮಿತ್ ಶಾ , ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯೊಂದಿಗೆ ಇದು ಜನ ವಿರೋಧಿ ನಿರ್ಧಾರ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಯ್ದೆ ವಾಪಸ್ ಪಡೆಯುವಂತೆ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Categories
Breaking News National Political State

ಬೆಂಗಳೂರಿನಲ್ಲಿ ಇಂದೂ ಕೂಡ NPR-NRC-CAA ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ…

CAA NRC ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದೂ ಕೂಡ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಬಳಿ ಸೇರಿದ ವಿದ್ಯಾರ್ಥಿಗಳು CAA NRC ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ವಿದ್ಯಾರ್ಥಿಗಳು ಅಂಬೇಡ್ಕರ್‌ ಫೋಟೊ ಹಿಡಿದು ಪೌರತ್ವ ಕಾಯ್ದೆಯ ವಿರುದ್ಧದ ಘೋಷಣೆಗಳುಳ್ಳ ಭಿತ್ತಿಪತ್ರಗಳೊಂದಿಗೆ ಸಂಜೆ 5 ಗಂಟೆಗೆ ಪ್ರತಿಭಟನೆ ಆರಂಭಿಸಿದ್ದಾರೆ. ಮುಂದಿನ ಸಾಲಿನಲ್ಲಿ ಪರಸ್ಪರ ಕೈ ಕೈ ಹಿಡಿದು ಪ್ರತಿಭಟನೆ ಮುನ್ನಡೆಸಿದರೆ ಅವರ ಹಿಂದೆ ನಾಗರಿಕರು ಬೆಂಬಲ ನೀಡಿದ್ದಾರೆ.

ಜಯನಗರ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿ “ಇಂದಿನ ಮಕ್ಕಳಾದ ನಾವು ನಾಳಿನ ಪ್ರಜೆಗಳು. ಹಾಗಾಗಿ ಅಸಂವಿಧಾನಕ ಹಾಗು ಬೇಧ ಭಾವ ಉತ್ತೇಜಿಸುವ NPR-NRC-CAA ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಬೆಂಗಳೂರಿನ ವಿದ್ಯಾರ್ಥಿಗಳು ವಿರೋಧಿಸುತ್ತೇವೆ” ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಐಕ್ಯಮತ್ಯದೊಂದಿಗೆ ನಾವಿಂದು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಧರ್ಮದ ಆಧಾರದಲ್ಲಿ ಈ ದೇಶದ ಒಗ್ಗಟ್ಟನ್ನು ಒಡೆಯುವ CAA NRCಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

Categories
Breaking News National Political

ಚಂದ್ರಶೇಖರ್ ಆಜಾದ್ ಹಠಾತ್‌ ನೇತೃತ್ವದಲ್ಲಿ ಭಾರೀ ಪ್ರತಿಭಟನೆ….!

ಎಲ್ಲರ ಕೈಯಲ್ಲಿ ಸಂವಿಧಾನದ ಪೀಠಿಕೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಫೋಟೊಗಳು. ಎಲ್ಲರ  ಬಾಯಲ್ಲಿ ಜೈಭೀಮ್ ಘೋಷಣೆಗಳು.. ಆರಂಭದಲ್ಲಿ 144 ಸೆಕ್ಷನ್‌ ಹಾಕಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದ ಪೊಲೀಸರಿಂದ ಆನಂತರ ಮೌನವಾಗಿ ಅನುಮತಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹಠಾತ್‌ ಪ್ರತ್ಯಕ್ಷ. ಅವರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ.. ಇದು ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಕಂಡಬಂದ ದೃಶ್ಯಗಳು.

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರವರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ  ಜಮಾ ಮಸೀದಿಯಿಂದ ಜಂತರ್ ಮಂತರ್‌ವರೆಗಿನ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೃಹತ್‌ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಭಾರಿ ಪೊಲೀಸ್‌ರ ಉಪಸ್ಥಿತಿಯ ನಡುವೆಯೂ ನಿಷೇಧಾಜ್ಞೆಯನ್ನು ಮುರಿದ ಅವರು ಮೆರವಣಿಗೆ ಆರಂಭಿಸಿದ್ದಾರೆ.

“ಜೈ ಭೀಮ್” ಘೋಷಣೆಗಳು ಜಮಾ ಮಸೀದಿಯಲ್ಲಿ ಮುಗಿಲು ಮುಟ್ಟಿವೆ. ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಮೆರವಣಿಗೆ ಮುಂದೆ ಸಾಗಲು ಬಿಡದ ಪೊಲೀಸರು ಸದ್ಯ ಜಮಾ ಮಸೀದಿಯ ಬಾಗಿಲು ಬಂದ್‌ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರವರನ್ನು ಬಂಧಿಸಲಾಗಿದೆ. ಇಂದಿನ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದವು. ಇದನ್ನು ನಿರಾಕರಿಸಿದ ಚಂದ್ರಶೇಖರ್‌ ದಯವಿಟ್ಟು ನನ್ನ ಬಂಧನದ ವದಂತಿಗಳನ್ನು ನಿರ್ಲಕ್ಷಿಸಿ. ನಾನು ಜಮಾ ಮಸೀದಿಯನ್ನು ತಲುಪುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

ಅವರ ಸಹಾಯಕ ಕುಷ್‌ ಸಹ ’ಸುದ್ದಿ ವಾಹಿನಿಗಳು ತಮ್ಮ ಸುದ್ದಿಗಳನ್ನು ಸರಿಪಡಿಸಬೇಕು ಮತ್ತು ನಕಲಿ ಸುದ್ದಿಗಳನ್ನು ಹರಡಬಾರದು.ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಲಾಗಿಲ್ಲ. ಮಾರ್ಚ್ 1 ಗಂಟೆಗೆ ಜಮಾ ಮಸೀದಿಯಿಂದ ಮೆರವಣಿಗೆ ಹೊರಡಲಿದೆ’ ಎಂದು ಸ್ಪಷ್ಟಪಡಿಸಿದ್ದರು.

ಸದ್ಯ ಜಮಾ ಮಸೀದಿಯಲ್ಲಿಯೇ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಕಪ್ಪು ಬ್ಯಾಂಡ್‌ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ದ್ರೋನ್‌ ಕ್ಯಾಮರಗಳ ಮೂಲಕ ಪ್ರತಿಭಟನಾಕಾರರ ಮೇಲೆ ನಿಗಾ ಇರಿಸಿದ್ದಾರೆ. ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

Categories
Breaking News District State

ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಮಧ್ಯೆಯೂ ಕರವೇ ಜಿಲ್ಲಾದ್ಯಕ್ಷನ ಏಕಾಂಗಿ ಪ್ರತಿಭಟನೆ…

ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಮಧ್ಯೆಯೂ ಕರವೇ ಜಿಲ್ಲಾದ್ಯಕ್ಷನ ಏಕಾಂಗಿ ಪ್ರತಿಭಟನೆ ನಡೆದಿದೆ.

ಪೌರತ್ವ,ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆ ಜಾರಿ ವಿರೋಧಿಸಿ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನವನಗರದ ಜಿಲ್ಲಾಡಳಿತ ಭವನದ ಎದುರು ರಮೇಶ್ ಬದ್ನೂರ ಸಿಎಎ ಮತ್ತು ಎನ್ಆರ್ ಸಿ ಕಾಯ್ದೆ ಜಾರಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸಕಾ೯ರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೋಲಿಸರ ಮಧ್ಯೆ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸುತ್ತ ಪೋಲಿಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

 

Categories
Breaking News District National Political State

ಪೌರತ್ವ ತಿದ್ದುಪಡಿಗೆ ವಿರೋಧ : ಮಂಗಳೂರಿನಲ್ಲಿ ಪೊಲೀಸ್ ಗುಂಡಿಗೆ ಇಬ್ಬರು ಬಲಿ..!

ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ಸಂದರ್ಭ ಬಂದರ್ ಸಮೀಪ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಒಬ್ಬರ ಕಣ್ಣಿಗೆ ಗುಂಡೇಟು ಬಿದ್ದಿದ್ದರೆ, ಮತ್ತೊಬ್ಬರ ಬೆನ್ನಿಗೆ ಗುಂಡು ಬಿದ್ದಿದೆ ಎಂದು ತಿಳಿದುಬಂದಿದೆ. ಇಬ್ಬರನ್ನೂ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇಬ್ಬರೂ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೃತಪಟ್ಟ ಒಬ್ಬರು ಬಂದರ್ ನಿವಾಸಿ, ಮತ್ತೊಬ್ಬರು ಕಂದಕ್ ನಿವಾಸಿ ಎಂದು ತಿಳಿದುಬಂದಿದೆ.