ಖ್ಯಾತ ಪಾಕಿಸ್ತಾನಿ ಮಾಡೆಲ್ ನಿಗೂಢ ಸಾವು : ಸಹೋದರನಿಂದಲೇ ಕೊಲೆಯಾಗಿರುವ ಶಂಕೆ..!
ಖ್ಯಾತ ಪಾಕಿಸ್ತಾನಿ ಮಾಡೆಲ್ ನಯಾಬ್ ನದೀಮ್ ಲಾಹೋರ್ನ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಲಾಹೋರ್ನಲ್ಲಿ ಭಾನುವಾರ ನಯಾಬ್ ನದೀಮ್ ( 29) ಬೆತ್ತಲೆ ದೇಹ ಪತ್ತೆಯಾಗಿದ್ದು ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಾಣಿಸಿಕೊಂಡಿವೆ. ಸಂಬಂಧಿಕರು ಕೊಲೆಯ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ನಯಾಬ್ ಅವರ ಸಹೋದರ ಮೊಹಮ್ಮದ್ ಅಲಿ ನಾಸಿರ್ ಅವರ ದೂರಿನ ಮೇರೆಗೆ ಘಟನೆಯ ಮೊದಲ ಮಾಹಿತಿ ವರದಿಯನ್ನು ಸ್ಥಳೀಯ ಪೊಲೀಸರು ದಾಖಲಿಸಿದ್ದಾರೆ. ಆಕೆಯನ್ನು ಭೇಟಿ ಮಾಡಲು ಬಂದಾಗ ಆಕೆಯ ದೇಹವು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ ಎಂದು ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಯಾಬ್ ಅವಿವಾಹಿತಳಾಗಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ನಯಾಬ್ ಮತ್ತು ನಾಸಿರ್ ಅವರು ಶನಿವಾರದಂದು ಐಸ್ ಕ್ರೀಮ್ ತಿನ್ನಲು ಹೋಗಿದ್ದರು. ಕೆಲವು ಗಂಟೆಗಳ ನಂತರ ನಾಸಿರ್, ನಯಾಬ್ ನದೀಮ್ ಅವರ ನಿವಾಸದ ಬಳಿ ಬಿಟ್ಟು ಹೋಗಿದ್ದಾರೆ.
ನಂತರ ನಯಾಬ್ ಗೆ ನಾಸಿರ್ ಕರೆ ಮಾಡಿದ್ದಾರೆ. ಆದರೆ ನಯಾಬ್ ಕರೆ ತೆಗೆದುಕೊಂಡಿಲ್ಲ ಎಂದು ನಾಸಿರ್ ದೂರಿನಲ್ಲಿ ತಿಳಿಸಿದ್ದಾರೆ. ನಯಾಬ್ ಮನೆಗೆ ಹೋದಾಗ ನಾಸಿರ್, ವಾಶ್ ರೂಂನ ಕಿಟಕಿ ಲ್ಯಾಟಿಸ್ ಮುರಿದು ಹೋಗಿತ್ತು. ಟಿವಿ ಲೌಂಜ್ನಲ್ಲಿ ನಯಾಬ್ ಬೆತ್ತಲೆ ದೇಹ ಕಂಡುಬಂದಿದೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಈ ಘಟನೆಯ ಜೊತೆಗೆ 2016 ರಲ್ಲಿ ಪಾಕಿಸ್ತಾನಿ ಮಾಡೆಲ್ ಕಂದೀಲ್ ಬಲೂಚ್ ಅವರ ಸಹೋದರನಿಂದ ಮನೆಯಲ್ಲಿ ಕತ್ತು ಹಿಸುಕಿ ಕೊಂದಿದ್ದನ್ನು ನೆನಪಿಸಿಕೊಳ್ಳಬಹುದು.